One N Only Exclusive Cine Portal

ಅಂಜನಿಪುತ್ರನ ಅಬ್ಬರ!

ರಾಜಕುಮಾರ ಚಿತ್ರದ ಭರಪೂರ ಗೆಲುವಿನ ನಂತರ ಇದೀಗ ಪುನೀತ್ ರಾಜ್‌ಕುಮಾರ್ ಅಂಜನಿ ಪುತ್ರ ಚಿತ್ರದ ಮೂಲಕ ಪ್ರೇಕ್ಷಕರೆದುರು ಬರುತ್ತಿದ್ದಾರೆ. ರಾಜ್‌ಕುಮಾರ ಕಲೆಕ್ಷನ್ನಿನಲ್ಲಿ ಸುಲಭಕ್ಕೆ ಬ್ರೇಕ್ ಮಾಡಲಾಗದೊಂದು ದಾಖಲೆ ನಿರ್ಮಿಸಿದೆ. ಆದ್ದರಿಂದಲೇ ಇಂದು ತೆರೆ ಕಾಣುತ್ತಿದ್ದಾರೆ. ಅಂಜನಿಪುತ್ರದ ಬಗ್ಗೆ ಭಾರೀ ನಿರೀಕ್ಷೆಗಳಿವೆ.
ಪವರ್ ಸ್ಟಾರ್ ಸಿನಿಮಾಗಳ ಮೇಲೆ ಕ್ರೇಜ್ ಏನೂ ಹೊಸದಲ್ಲ. ಆದರೆ ಅಂಜನಿಪುತ್ರ ಚಿತ್ರ ಯಾವ ಮಟ್ಟದ ಗೆಲುವು ಕಾಣಬಹುದು ಅಂತೊಂದು ಪ್ರಶ್ನೆ ಇದೀಗ ವ್ಯಾಪಕವಾಗಿ ಹರಡಿಕೊಂಡಿದೆ. ಇದಕ್ಕೆ ಕಾರಣವಾಗಿರೋದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಸಿನಿ ಬದುಕಿನ ಗ್ರಾಫ್ ಅಂದರೆ ಅಚ್ಚರಿಯೇನಿಲ್ಲ! ರಿಮೇಕ್ ಆದರೂ ಪರವಾಗಿಲ್ಲ ಈ ನೆಲದ ಅಸಲೀ ಕಥೆ ಹೊಂದಿರೋ ಚಿತ್ರಗಳನ್ನು ಪುನೀತ್ ಅಭಿಮಾನಿಗಳು ಅಪ್ಪಿಕೊಂಡಿದ್ದಾರೆ. ಈ ಮೂಲಕ ಪುನೀತ್ ಮತ್ತು ರಶ್ಮಿಕಾ ಮಂದಣ್ಣ ಜೋಡಿ ಮೋಡಿ ಮಾಡೋ ಸೂಚನೆಗಳೂ ಗ್ಯಾರೆಂಟಿಯಾಗಿದೆ.
ಯಾವುದೇ ದೃಶ್ಯ ಕಟ್, ಮ್ಯೂಟ್ ಮಾಡದೆ ಈ ಚಿತ್ರಕ್ಕೆ ಯುಎ ಸಿಕ್ಕಿದೆ. “ಪುನೀತ್ ಸರ್ ಪರಿಚಯ ಹದಿನೇಳು ವರ್ಷ ಹಳೆಯದು. ಆದರೆ ಅವರಿಗೆ ಆಕ್ಷನ್ ಕಟ್ ಹೇಳಿರುವುದು ಇದೇ ಫಸ್ಟ್.. ಅಲ್ಲದೆ ರಂಗ ಎಸ್‌ಎಸ್‌ಎಲ್‌ಸಿ ಚಿತ್ರದ ಮೂಲಕ ನೃತ್ಯ ನಿರ್ದೇಶಕ, ಕಾಶಿ ಫ್ರಂ ವಿಲೇಜ್‌ದಲ್ಲಿ ನಟನಾಗಿ ಪಾದಾರ್ಪಣೆ, ಗೆಳೆಯರು ಚಿತ್ರದಿಂದ ನಿರ್ದೇಶನ ಇವೆಲ್ಲದಕ್ಕೂ ನಿರ್ಮಾಪಕ ಎಂ.ಎನ್.ಕುಮಾರ್ ಆಗಿರುವುದು ಕಾಕತಾಳಿಯವಾಗಿದೆ. ರವಿಬಸ್ರೂರ್ ಸಂಗೀತದಲ್ಲಿ ಎರಡು ಹಾಡುಗಳು ಹಿಟ್ ಆಗಿದೆ. ರಿಮೇಕ್ ಆಗಿದ್ದರೂ ಶೇಕಡ ೪೦ ರಷ್ಟು ಬದಲಾವಣೆ ಮಾಡಲಾಗಿದೆ ಇದು ನಿರ್ದೇಶಕ ಹರ್ಷ ಅವರ ಮಾತು.
ಇದೇ ೨೧ರಂದು ಬರಲು ಹಿಂದೆಯೇ ತೀರ್ಮಾನಿಸಲಾಗಿತ್ತು. ಆದರೆ ಸೆನ್ಸಾರ್ ಆಗಬೇಕಾದ ಕಾರಣದಿಂದ ಸುದ್ದಿಯನ್ನು ತಿಳಿಸಿರಲಿಲ್ಲ. ಹಿಂದಿನ ಚಿತ್ರಕ್ಕೆ ಆಶಿರ್ವಾದ ಮಾಡಿದಂತೆ ಇದಕ್ಕೂ ಹರಸಿ, ರಾಜಕುಮಾರ ಒಂದು ಮಟ್ಟಿಗೆ ಹಿಟ್ ಆಗಿತ್ತು. ಇದು ಅದಕ್ಕಿಂತಲೂ ಜಾಸ್ತಿ ಆಗಲಿ. ನನಗಿಂತ ಅರ್ಧ ವಯಸ್ಸಿನ ಹುಡುಗಿ ನಾಯಕಿ ಆಗಿದ್ದಾರೆ. ನಾನು ರಮ್ಯಕೃಷ್ಣ ಅಭಿಮಾನಿಯಾಗಿದ್ದು, ಅವರೊಂದಿಗೆ ನಟಿಸಿದ್ದು ಮರೆಯಲಾಗದ ಅನುಭವ. ಅಖಿಲೇಶ್‌ಮಿಶ್ರ, ಮುಖೇಶ್‌ತಿವಾರಿ ಕಾಣಿಸಿಕೊಂಡಿದ್ದಾರೆ ಅಂಥಾ ಸ್ವತಃ ಪುನೀತ್‌ರಾಜ್‌ಕುಮಾರ್ ಹೇಳಿದ್ದಾರೆ.
ಅಪ್ಪು ಸರ್ ಜೊತೆ ನಟಿಸಿದ್ದು ನನ್ನ ಸುಕೃತ ಎನ್ನಬಹುದು. ಅವಕಾಶ ನೀಡಿದ್ದಕ್ಕೆ ನಿರ್ಮಾಪಕ, ನಿರ್ದೇಶಕರಿಗೆ ಥ್ಯಾಂಕ್ಸ್, ಹಾಡುಗಳು ಚೆನ್ನಾಗಿವೆ. ರವಿಬಸ್ರೂರು ಅಭಿಮಾನಿ ಅಂತ ಹುಸಿನಗೆ ಚೆಲ್ಲಿರುವವರು ನಾಯಕಿ ರಶ್ಮಿಕಾಮಂದಣ್ಣಾ. ಸ್ಯಾಂಡಲ್‌ವುಡ್‌ನಲ್ಲಿ ಪ್ರತಿಭೆ ಇರುವವರನ್ನು ಗುರುತಿಸಿದ್ದಾರೆ. ನನ್ನೋಳಗಿರುವ ಪ್ರತಿಭೆಗೆ ಅವಕಾಶ ಸಿಕ್ಕಿದ್ದು ಅದೃಷ್ಟ ಅಂತಾರೆ ರವಿಬಸ್ರೂರು.
ಈ ಚಿತ್ರದ ಬಿಡುಗಡೆಗಾಗಿ 400ಕ್ಕೂ ಹೆಚ್ಚು ಕೇಂದ್ರಗಳು ಈಗಾಗಲೆ ಕಾಯ್ದಿರಿಸಲಾಗಿದೆ. ಮುಂದೆ ಕೆನಡಾ, ಸಿಂಗಪೂರ್, ದುಬೈ, ಸಿಂಗಪೂರ್, ಅಮೇರಿಕಾ ಸ್ಥಳಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಒಟ್ಟಾರೆಯಾಗಿ ಅಂಜನಿಪುತ್ರ ಪುನೀತ್ ಚಿತ್ರ ಜೀವನದಲ್ಲಿ ಯಾವ ಥರದ ಛಾಪು ಮೂಡಿಸಲಿದೆ ಎಂಬುದು ಜಾಹೀರಾಗಲು ಕೆಲ ಕ್ಷಣಗಳು ಮಾತ್ರವೇ ಬಾಕಿ ಉಳಿದಿವೆ!

Leave a Reply

Your email address will not be published. Required fields are marked *


CAPTCHA Image
Reload Image