One N Only Exclusive Cine Portal

ಅಂಬಿ ಮಗ ಅಭಿಷೇಕ್ ಸಿನಿಮಾ ಎಂಟ್ರಿ ಪಕ್ಕಾ!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಖಂಡಿತಾ ರಾಜಕೀಯ ಕ್ಷೇತ್ರವನ್ನೇ ಆರಿಸಿಕೊಳ್ಳುತ್ತಾರೆಂಬ ಬಗ್ಗೆ ಇತ್ತೀಚಿನ ವರೆಗೂ ಸುದ್ದಿಗಳು ಹರಡಿಕೊಳ್ಳುತ್ತಿದ್ದವು. ಆದರೆ ರಾಜಕಾರಣದಲ್ಲಿ ಉನ್ನತ ಅಧಿಕಾರ ಅನುಭವಿಸಿ, ಅದರ ಎಲ್ಲ ಮಜಲುಗಳನ್ನು ಅರಿತಿರೋ ಅಂಬಿಗೆ ಮಗನ ರಾಜಕೀಯ ಪ್ರವೇಶ ಸುತಾರಾಂ ಇಷ್ಟವಿಲ್ಲ.
ಮಗನ ಇಷ್ಟಾರ್ಥಗಳಿಗೆ ನಾನು ಬೇಲಿ ಹಾಕೋದಿಲ್ಲ ಅನ್ನುತ್ತಲೇ ಅಂಬರೀಶ್ `ಅವನು ರಾಜಕೀಯಕ್ಕಂತೂ ಬರೋದು ಬೇಡ ಅಂತ ಖಂಡತುಂಡವಾಗಿ ಹೇಳಿದ್ದಾರೆ.
ಹಾಗಾದರೆ ಅಭಿ ಬೇರೇನು ಮಾಡ್ತಾರೆ ಎಂಬ ಪ್ರಶ್ನೆಗೂ ಅಂಬಿಯೇ ಉತ್ತರ ನೀಡಿದ್ದಾರೆ. ಅವರೇ ಹೇಳಿರೋ ಪ್ರಕಾರ ಅಭಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡೋದು ಪಕ್ಕಾ. ಇದಕ್ಕೆ ಅಂಬಿ ಕೂಡಾ ಸಾಥ್ ನೀಡುತ್ತಿದ್ದಾರೆ. ಈ ಸಂಬಂಧವಾಗಿ ತಯಾರಿ ಆರಂಭಿಸಿರೋ ಅಭಿಷೇಕ್ ವಿದೇಶದಲ್ಲಿ ಸಾಹಸ ಕಲೆಯನ್ನು ಕರಗತ ಮಾಡಿಕೊಳ್ಳುತ್ತಿದ್ದಾರಂತೆ.
ಈಗಾಗಲೇ ಅಭಿಷೇಕ್ ಚಿತ್ರ ನಿರ್ಮಾಣ ಮಾಡಲು ಕನ್ನಡದ ಪ್ರಖ್ಯಾತ ನಿರ್ಮಾಣ ಸಂಸ್ಥೆಗಳು ಮುಂದೆ ಬರುತ್ತಿವೆಯಂತೆ. ಇದುವರೆಗೂ ಯಾವುದೂ ಫೈನಲ್ ಆಗಿಲ್ಲ. ಆದರೆ ಅಭಿಶೇಕ್ ಸಿನಿಮಾದ ಕಥೆಯನ್ನು ಮಾತ್ರ ಖುದ್ದಾಗಿ ಅಂಬರೀಶ್ ಅವರೇ ಫೈನಲ್ ಮಾಡ್ತಾರಂತೆ!

copying or reproducing the above content in any format without approval is criminal offence and will be prosecuted in Bengaluru court © CINIBUZZ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Leave a Reply

Your email address will not be published. Required fields are marked *


CAPTCHA Image
Reload Image