One N Only Exclusive Cine Portal

ಅನು ಪ್ರಭಾಕರ್ weds ರಘು ಮುಖರ್ಜಿ…

ನಟಿ ಅನುಪ್ರಭಾಕರ್ ಮತ್ತು ರಘು ಮುಖರ್ಜಿ ಇಂದು ಮದುವೆಯಾಗುತ್ತಿದ್ದಾರೆ. ಬಾಲನಟಿಯಾಗಿ, ನಂತರ ಹೃದಯಾ ಹೃದಯಾ ಚಿತ್ರದ ಮೂಲಕ ನಾಯಕಿಯಾಗಿದ್ದವರು ಅನುಪ್ರಭಾಕರ್. ಅಪಾರವಾದ ಅವಕಾಶಗಳಿದ್ದಾಗಲೇ ನಟಿ ಜಯಂತಿ ಪುತ್ರ ಕೃಷ್ಣಕುಮಾರ್ ರನ್ನು ವರಿಸಿದ್ದರು. ಅನು ಪ್ರಭಾಕರ್ ರ ತಾಯಿ ಗಾಯತ್ರಿ ಪ್ರಭಾಕರ್ ಸಹ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಪೋಷಕ ಕಲಾವಿದರಾಗಿ ಹೆಸರು ಮಾಡಿದ್ದವರು.
ಸರಿ ಸುಮಾರು ಒಂದು ದಶಕಗಳ ಕಾಲ ಕೃಷ್ಣಕುಮಾರ್ ಜೊತೆ ಸಂಸಾರ ನಡೆಸಿದ್ದ ಅನು ನಂತರ ಹೊಂದಾಣಿಕೆಯ ಸಮಸ್ಯೆಯಿಂದ ವಿಚ್ಛೇದನದ ಮೊರೆ ಹೋಗಿದ್ದರು.
ಕಳೆದ ಒಂದು ವರ್ಷದಿಂದ ಅನು ಪ್ರಭಾಕರ್ ಮದುವೆ ಬಗ್ಗೆ ಬಗೆಬಗೆಯ ಗಾಸಿಪ್ ಗಳು ಹರಿದಾಡಲಾರಂಭಿಸಿದ್ದವು. ಈಗ ಆ ಎಲ್ಲ ಗಾಳಿ ಸುದ್ದಿಗೂ ಬ್ರೇಕ್ ಬಿದ್ದು, ಅಂತಿಮವಾಗಿ ಅನು ಪ್ರಭಾಕರ್ ರಘು ಮುಖರ್ಜಿ ಅವರನ್ನು ವರಿಸುತ್ತಿದ್ದಾರೆ.
ಹ್ಯಾಂಡ್ ಸಮ್ ಹೀರೋ ರಘು ಮುಖರ್ಜಿ ನಾಗತಿಹಳ್ಳಿ ಚಂದ್ರಶೇಖರ್ ಅವರ ಪ್ಯಾರಿಸ್ ಪ್ರಣಯ ಚಿತ್ರದ ಮೂಲಕ ಹೀರೋ ಆದವರು. ಸವಾರಿ ಕೂಡಾ ರಘು ಮುಖರ್ಜಿ ಅವರಿಗೆ ಬ್ರೇಕ್ ನೀಡಿತ್ತು.
ಈ ಜೋಡಿ ಒಂದಾಗಿದ್ದು ಹೇಗೆ? ಇವರ ಪ್ರೀತಿ ಮದುವೆಯ ತನಕ ಬಂದು ನಿಂತಿದ್ದರ ಹಿನ್ನೆಲೆ ಏನು?
ಈ ಬಗ್ಗೆ ಪೂರ್ತಿ ಡಿಟೇಲ್ಸ್ ಕೊಡ್ತೀವಿ… ಮುಂದಿನ ಪೋಸ್ಟ್ ನಲ್ಲಿ

Leave a Reply

Your email address will not be published. Required fields are marked *


CAPTCHA Image
Reload Image