Connect with us

cbn

ಅನೇಕ ಪ್ರತಿಭೆಗಳ ಸಂಗಮ ಜೀ ಕುಟುಂಬ ಅವಾರ್ಡ್ಸ್ 2017

Published

on

ದಶಕದ ಹಾದಿಯನ್ನು ದಾಟಿ ಮುನ್ನಡೆದಿರುವ ಜೀ ಕನ್ನಡ ವಾಹಿನಿ ಇತ್ತೀಚಿನ ದಿನಗಳಲ್ಲಿ ಕಿರುತೆರೆ ಉದ್ದಿಮೆಯಲ್ಲಿ ಕ್ರಾಂತಿಯನ್ನೇ ತಂದುದಲ್ಲದೆ, ಕನ್ನಡ ಕಲಾರಂಗಕ್ಕೆ ಹಲವು ಪ್ರತಿಭೆಗಳನ್ನು ಪರಿಚಯಿಸಿ ಕನ್ನಡಿಗರ ಮೆಚ್ಚುಗೆಗೆ ಕೂಡ ಪಾತ್ರವಾಗಿದೆ. ಜೀ ವಾಹಿನಿಯು ರಾಜ್ಯದ ನಾನಾ ಮೂಲೆಗಳಲ್ಲಿರುವ ಪ್ರತಿಭೆಗಳಿಗೆ ಒಂದು ವೇದಿಕೆಯಾಗಿ ಮಾರ್ಪಟ್ಟಿತ್ತಲ್ಲದೆ ಇದರೊಂದಿಗೆ ವೀಕ್ಷಕರೊಂದಿಗಿನ ಬಾಂಧವ್ಯವನ್ನು ಮತ್ತಷ್ಟು ಬೆಸೆದುಕೊಂಡಿದೆ. ಈ ಎಲ್ಲಾ ಖುಷಿಯನ್ನು ಸಂಭ್ರಮಿಸುವ ಮತ್ತೊಂದು ಅಪರೂಪದ ಕ್ಷಣವಾಗಿ ಜೀ ಕುಟುಂಬ ಅವಾರ್ಡ್ಸ್ ೨೦೧೭ ಮೂಡಿಬಂದಿದೆ.
ಯುವನಟಿ ಸಂಯುಕ್ತ ಹೆಗಡೆ ಹಾಗೂ ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮಗಳಾದ ಸರಿಗಮಪ ಲಿಟ್ಲ್ ಚಾಂಪ್ಸ್, ಡ್ರಾಮಾ ಜೂನಿಯರ್‍ಸ್‌ನ ಎಲ್ಲಾ ಪುಟಾಣಿಗಳ ಪ್ರತಿಭಾ ಪ್ರದರ್ಶನ ಜೀ ಕುಟುಂಬ ಕಾರ್ಯಕ್ರಮದ ಹೈಲೈಟ್ ಆಗಿ ಮೂಡಿಬಂದಿದೆ. ಅಪಾರ ಜನಮನ್ನಣೆ ಗಳಿಸಿರುವ ಧಾರಾವಾಹಿಗಳಾದ ನಾಗಿಣಿ, ಬ್ರಹ್ಮಗಂಟು, ಜೋಡಿಹಕ್ಕಿ, ಹಾಗೂ ಯಾರೇ ನೀ ಮೋಹಿನಿಯ ಕಲಾವಿದರು ವೀಕ್ಷಕರನ್ನು ವಿಶೇಷ ಪ್ರದರ್ಶನದ ಮೂಲಕ ರಂಜಿಸಲಿದ್ದಾರೆ.
ಈ ಅಪರೂಪದ ಕಾರ್ಯಕ್ರಮಕ್ಕೆ ಮೆರುಗು ಹೆಚ್ಚಿಸಿದ್ದು ಕನ್ನಡ ಚಿತ್ರರಂಗದ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್. ಅಭಿಮಾನಿಗಳ ಪ್ರೀತಿಯ ಅಪ್ಪು ವೇದಿಕೆಯ ಮೇಲೆ ಹಾಡಿಗೆ ಹೆಜ್ಜೆ ಹಾಕಿ, ಡ್ರಾಮಾ ಮಕ್ಕಳ ಜೊತೆ ಬೆರೆತು ಎಂಜಾಯ್ ಮಾಡಿದ್ದು ಕಾರ್ಯಕ್ರಮದ ಮತ್ತೊಂದು ಹೈಲೈಟ್. ಕಿಲಾಡಿ ಕುಟುಂಬದ ಸಾರಥಿ ನವರಸ ನಾಯಕ ಜಗ್ಗೇಶ್, ಹಿರಿಯ ನಟಿ ಜೂಲಿ ಲಕ್ಷ್ಮಿ, ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ, ಮತ್ತು ತಾರಾ ನಿರೂಪಕರಾದ ಅನುಶ್ರೀ ಮತ್ತು ಮಾಸ್ಟರ್ ಆನಂದ್ ಈ ಸಂಭ್ರಮದ ಇತರೆ ಆಕರ್ಷಣೆಗಳಾಗಿದ್ದರು.

ಇತ್ತೀಚಿನ ವರ್ಷಗಳಲ್ಲಿ ಜೀ ಕನ್ನಡ ವಾಹಿನಿ, ಕನ್ನಡಿಗ ಕುಟುಂಬಗಳನ್ನು ಮನದಲ್ಲಿಟ್ಟುಕೊಂಡು ಪ್ರಸ್ತುತಪಡಿಸಿದ ವೈವಿಧ್ಯಮಯ ಅಲೋಚನೆಗಳ ತಾಜಾ ಕಾರ್ಯಕ್ರಮಗಳಿಗೆ ವೀಕ್ಷಕರಿಂದ ಅಪಾರ ಮನ್ನಣೆ ಸಿಕ್ಕಿದೆ. ಈ ಯಶಸ್ಸಿಗೆ ಶ್ರಮಿಸಿದ ಜೀ ಕುಟುಂಬದ ಎಲ್ಲಾ ಸದಸ್ಯರನ್ನು ಗುರುತಿಸಿ, ಗೌರವಿಸುವುದೇ ಜೀ ಕುಟುಂಬ ಆವಾರ್ಡ್ಸ್‌ನ ಮುಖ್ಯ ಉದ್ದೇಶ ಎಂದು ಜೀ ಕನ್ನಡದ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಹೇಳಿದರು.

ಇನ್ನು ಜೀ ಕುಟುಂಬ ಅವಾರ್ಡ್ಸ್ ೨೦೧೭ರ ಸಮಾರಂಭದಲ್ಲಿ ಒಟ್ಟು ೩೬ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಿದ್ದು. ೭ ಜನಪ್ರಿಯ ವಿಭಾಗಗಳಿಗೆ ವೀಕ್ಷಕರೇ ನಿರ್ಣಾಯಕರಾಗಿದ್ದರು. ಜನಪ್ರಿಯ ಧಾರಾವಾಹಿ, ಜನಪ್ರಿಯ ಜೋಡಿ, ನಾಯಕ ನಟ, ನಟಿ, ರಿಯಾಲಿಟಿ ಶೋ ಸ್ಪರ್ಧಿಗಳು ಹಾಗೂ ನಿರೂಪಕರ ವಿಭಾಗಗಳಿಗೆ ವಾಹಿನಿಯು ವೀಕ್ಷಕರಿಂದ ನೇರವಾಗಿ ಮತಗಳನ್ನು ಪಡೆದು ವಿಜೇತರನ್ನು ಆಯ್ಕೆ ಮಾಡಿದೆ. ಇನ್ನಿತರ ವಿಭಾಗಗಳಿಗೆ ವಾಹಿನಿಯ ತೀರ್ಪುಗಾರರ ತಂಡ ಆಯ್ಕೆ ಪ್ರಕ್ರಿಯೆಯನ್ನ ನಡೆಸಿ ಸೆಲೆಕ್ಟ್ ಮಾಡಿದೆ.

ಜೀ ಕುಟುಂಬದವರೆಲ್ಲಾ ಒಂದೇ ವೇದಿಕೆಯಲ್ಲಿ ಸೇರಿದ ಈ ಸಮಾರಂಭದಲ್ಲಿ ವಾಹಿನಿಯ ಕಲಾವಿದರು ಹಾಗೂ ತಂತ್ರಜ್ಞರನ್ನು ಗೌರವಿಸುವ ಅಪೂರ್ವ ಸಂಭ್ರಮದ ಕಾರ್ಯಕ್ರಮ ಜೀ ಕುಟುಂಬ ಅವಾರ್ಡ್ಸ್ ೨೦೧೭ ಇದೇ ಅಕ್ಟೋಬರ್ ೧೪ ಹಾಗೂ ೧೫ರ ಶನಿವಾರ ಮತ್ತು ಭಾನುವಾರ ರಾತ್ರಿ ೭.೩೦ಕ್ಕೆ ಪ್ರಸಾರವಾಗಲಿದೆ.

 

cbn

ಇದು ಅಣ್ಣಾವ್ರ ಕಡೆಯ ಸಿನಿಮಾ ಆಗಬೇಕಿತ್ತು!

Published

on

`ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ…’ ಹಾಡಿನ ಮೊದಲ ಸಾಲು ಈಗ ಸಿನಿಮಾ ಆಗಿ ಬಿಡುಗಡೆಗೊಂಡಿದೆ. ಕಾಂತ ಕನ್ನಲ್ಲಿ ನಿರ್ದೇಶನದಲ್ಲಿ ಮೂಡಿಬಂದಿರುವ ಸಿನಿಮಾ ನೋಡಿದ ಎಲ್ಲರನ್ನೂ ಸೆಳೆಯುತ್ತಿದೆ. ಸಿನಿಮಾ ನೋಡಿ ಹೊರಬಂದ ಪ್ರತಿಯೊಬ್ಬರ ಮುಖದಲ್ಲೂ ಮಂದಹಾಸ ಮೂಡಿಸುವ ಸಿನಿಮಾ ಇದು.

ಅಂದಹಾಗೆ ಇದೇ `ಇರುವುದೆಲ್ಲವ ಬಿಟ್ಟು’ ಶೀರ್ಷಿಕೆ ವರನಟ ಡಾ. ರಾಜ್ ಕುಮಾರ್ ಅವರ ನಟನೆಯ ಕೊನೆಯ ಸಿನಿಮಾ ಆಗಬೇಕಿತ್ತು ಅನ್ನೋ ವಿಚಾರವೊಂದು ಹೊರಬಿದ್ದಿದೆ. ಮೊನ್ನೆದಿನ ಈ ಸಿನಿಮಾವನ್ನು ನೋಡಿದ ಕೆ.ಎಂ.ಎಫ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಎ.ಎಸ್. ಪ್ರೇಮನಾಥ್ ಖುದ್ದು ನಿರ್ದೇಶಕರ ಬಳಿ ಈ ವಿಷಯವನ್ನು ಹೇಳಿದರಂತೆ. ಪ್ರೇಮ್‌ನಾಥ್ ಡಾ.ರಾಜ್ ಕುಟುಂಬದ ಜೊತೆ ತೀರಾ ನಿಕಟ ಸಂಪರ್ಕ ಹೊಂದಿರುವವರು. ಹೀಗಾಗಿ ಅಣ್ಣಾವ್ರ ಕುರಿತ ಸಾಕಷ್ಟು ಇಂಟರೆಸ್ಟಿಂಗ್ ವಿಚಾರಗಳು ಪ್ರೇಮನಾಥ್ ಅವರಿಗೆ ಸಹಜವಾಗೇ ಗೊತ್ತಿರುತ್ತದೆ.

ಡಾ. ರಾಜ್‌ಕುಮಾರ್ ನಟಿಸಬೇಕಿದ್ದ ಆ ಸಿನಿಮಾಗೆ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕಥೆಯನ್ನೂ ಹೇಳಿದ್ದರಂತೆ. `ಇರುವುದೆಲ್ಲವ ಬಿಟ್ಟು’ ಅನ್ನೋ ಶೀರ್ಷಿಕೆಯನ್ನು ರಾಜಣ್ಣ ಬಹುವಾಗಿ ಇಷ್ಟಪಟ್ಟಿದ್ದರಂತೆ. ಅವರ ಅನಾರೋಗ್ಯ ಮತ್ತಿತರ ಕಾರಣಗಳಿಗೆ ಆ ಸಿನಿಮಾ ಸೆಟ್ಟೇರಿರಲಿಲ್ಲ. ಒಂದು ವೇಳೆ ಅಣ್ಣಾವ್ರು ಈಗಲೂ ಇರುವಂತಾಗಿ, ಅದೇ ಶೀರ್ಷಿಕೆಯೊಂದಿಗೆ ಇಷ್ಟು ಮುದ್ದಾದ ಸಿನಿಮಾ ಮೂಡಿಬಂದಿರೋದನ್ನು ನೋಡಿದ್ದಿದ್ದರೆ ಅದೆಷ್ಟು ಖುಷಿಪಡುತ್ತದ್ದರೋ…?

Continue Reading

cbn

ಶಿವಣ್ಣನಿಗೆ ನಾಯಕಿಯಾದಳು ತೆಲುಗು ಹುಡುಗಿ ಇಶಾ!

Published

on

ಶಿವರಾಜ್ ಕುಮಾರ್ ನಟಿಸುತ್ತಿರೋ ಸಾಲು ಸಾಲು ಚಿತ್ರಗಳ ಗದ್ದಲದ ನಡುವೆ ‘ಎಸ್‌ಆರ್‌ಕೆ’ ಚಿತ್ರ ಅದೇಕೋ ಮರೆಯಾದಂತಿತ್ತು. ಯಾಕೆಂದರೆ, ಇದು ಕಳೆದ ವರ್ಷವೇ ಶಿವಣ್ಣ ಒಪ್ಪಿಕೊಂಡು ಸೆಟ್ಟೇರಿದ್ದ ಚಿತ್ರ. ಇದೀಗ ಆ ಚಿತ್ರಕ್ಕೆ ಹೊಸಾ ವೇಗ ಸಿಕ್ಕಿದೆ. ಈ ಚಿತ್ರಕ್ಕೆ ಶಿವಣ್ಣನ ನಾಯಕಿಯ ಆಯ್ಕೆಯೂ ನಡೆದಿದೆ.

ಲಕ್ಕಿ ಗೋಪಾಲ್ ನಿರ್ದೇಶನ ಮಾಡಲಿರೋ ಈ ಚಿತ್ರ ಇದೇ ಡಿಸೆಂಬರಿನಿಂದ ಚಿತ್ರೀಕರಣ ಆರಂಭಿಸಲಿದೆ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಡ್ಯಾನ್ಸ್ ಮಾಸ್ಟರ್ ಪಾತ್ರದಲ್ಲಿ ನಟಿಸಲಿದ್ದಾರೆ. ನಾಯಕಿಯದ್ದು ಉಪನ್ಯಾಸಕಿಯ ಪಾತ್ರ. ಆ ಪಾತ್ರಕ್ಕೆ ತೆಲುಗಿನ ನಟಿ ಇಶಾ ರಬ್ಬಾ ಆಯ್ಕೆಯಾಗಿದ್ದಾರೆ. ಈಗಾಗಲೇ ತೆಲುಗಿನಲ್ಲಿ ಶೈನಪ್ ಆಗಿರೋ ಇಶಾ ಈ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಜ್ಯೂನಿಯರ್ ಎನ್‌ಟಿಆರ್ ರಂಥಾ ಸ್ಟಾರ್ ನಟರ ಜೊತೆ ಹಿಟ್ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವಾಕೆ ಇಶಾ. ಈಕೆ ಈಗಾಗಲೇ ಆರೇಳು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾಳೆ. ನಟನೆ, ಸೌಂದರ್ಯಾ ಎಲ್ಲವನ್ನೂ ಹೊಂದಿರುವ ಇಶಾ ಇಷ್ಟರಲ್ಲಿಯೇ ಬಾಲಿವುಡ್‌ಗೆ ಹಾರಲಿದ್ದಾಳೆಂಬ ಸುದ್ದಿ ತೆಲುಗು ಚಿತ್ರರಂಗದ ತುಂಬಾ ತುಂಬಿಕೊಂಡಿತ್ತು. ಆದರೆ ಆಕೆ ಕನ್ನಡ ಚಿತ್ರರಂಗದತ್ತ ಬಂದಿದ್ದಾಳೆ.

ಈಗಾಗಲೇ ಒಂದಷ್ಟು ಚಿತ್ರಗಳಿಗೆ ಕೆಲಸ ಮಾಡಿ ಪಳಗಿಕೊಂಡಿರುವ ಲಕ್ಕಿ ಗೋಪಾಲ್ ಎಸ್‌ಆರ್‌ಕೆ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಆರಂಭದಿಂದಲೂ ತಾನು ನಿರ್ದೇಶಕನಾದರೆ ಶಿವಣ್ಣನ ಚಿತ್ರ ಮಾಡಬೇಕೆಂಬ ಕನಸು ಹೊಂದಿದ್ದವರು ಗೋಪಾಲ್. ಮೊದಲ ಚಿತ್ರದಲ್ಲಿಯೇ ಅವರು ಆ ಕನಸನ್ನು ನನಸು ಮಾಡಿಕೊಂಡಿದ್ದಾರೆ.

Continue Reading

cbn

ಅಂಬಿ ಜೊತೆ ಶಿವಣ್ಣ!

Published

on

ಅಂಬಿ ನಿಂಗೆ ವಯಸಾಯ್ತೋ ಚಿತ್ರವೀಗ ರಾಜ್ಯಾದ್ಯಂತ ಯಶಸ್ವೀ ಪ್ರದಶನ ಕಾಣುತ್ತಿದೆ. ಅಂಬರೀಶ್ ಅವರ ಸಹಜಾಭಿನಯ, ಇಡೀ ಚಿತ್ರವನ್ನು ರೀಮೇಕ್ ಎಂಬ ಭಾವವೇ ಕಾಡದಂತೆ ನಿರ್ದೇಶನ ಮಾಡಿರೋ ಗುರುದತ್ತ ಗಾಣಿಗರ ಕಸುಬುದಾರಿಕೆ… ಇವೆಲ್ಲವೂ ಸೇರಿ ಈ ಚಿತ್ರ ಹೌಸ್‌ಫುಲ್ ಪ್ರದರ್ಶನ ಕಾಣುವಂತೆ ಮಾಡಿದೆ. ಕನ್ನಡ ಚಿತ್ರರಂಗದ ತಾರೆಯರೂ ಕೂಡಾ ಅಂಬಿ ನಿಂಗೆ ವಯಸಾಯ್ತೋ ಚಿತ್ರವನ್ನು ವೀಕ್ಷಿಸಿ ಮುಕ್ತ ಕಂಠದಿಂದ ಮೆಚ್ಚಿಕೊಳ್ಳುತ್ತಿದ್ದಾರೆ.

ಇದೀಗ ತಮ್ಮ ಚಿತ್ರಗಳ ಚಿತ್ರೀಕರಣಕ್ಕೊಂದು ಬ್ರೇಕ್ ಕೊಟ್ಟು ಈ ಚಿತ್ರವನ್ನು ನೋಡಲು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮುಂದಾಗಿದ್ದಾರೆ. ಇಂದು ಮಧ್ಯಾಹ್ನ ೧.೩೦ಕ್ಕೆ ಶಿವಣ್ಣ ಒರಾಯನ್ ಮಾಲ್‌ನಲ್ಲಿ ಅಂಬಿ ನಿಂಗೆ ವಯಸಾಯ್ತೋ ಚಿತ್ರವನ್ನು ವೀಕ್ಷಿಸಲಿದ್ದಾರೆ. ಇವರ ಜೊತೆಗೆ ಕನ್ನಡದ ಯುವ ನಿರ್ದೇಶಕರಾದ ಸಂತೋಷ್ ಆನಂದ್‌ರಾಮ್, ತರುಣ್ ಸುಧೀರ್, ಪವನ್ ಒಡೆಯರ್ ಸೇರಿದಂತೆ ಕೆಸಿಸಿ ಸದಸ್ಯರೆಲ್ಲರೂ ಈ ಸಿನಿಮಾವನ್ನು ವೀಕ್ಷಿಸಲಿದ್ದಾರೆ.

ಈಗಾಗಲೇ ಕನ್ನಡದ ಬಹುತೇಕ ನಟ ನಟಿಯರು ಈ ಚಿತ್ರವನ್ನು ವೀಕ್ಷಿಸಿದ್ದಾರೆ. ಅಂಬರೀಶ್ ಅವರ ಸಹಜಾಭಿನಯಕ್ಕೆ ಮನ ಸೋತಿದ್ದಾರೆ. ರೀಮೇಕ್ ಬಗ್ಗೆ ಇರೋ ಭಾವನೆಗಳನ್ನು ಬುಡ ಮೇಲು ಮಾಡುವಂತೆ ಕಥೆಯನ್ನು ನೇಟಿವಿಟಿಗೆ ಒಗ್ಗಿಸಿಕೊಂಡು ದೃಶ್ಯ ಕಟ್ಟಿರುವ ಗುರುದತ್ ಬಗ್ಗೆಯೂ ಎಲ್ಲರಲ್ಲಿಯೂ ಮೆಚ್ಚುಗೆ ಇದೆ. ಈ ಮೂಲಕವೇ ಕನ್ನಡ ಚಿತ್ರರಂಗಕ್ಕೊಬ್ಬ ಪ್ರತಿಭಾವಂತ ಯುವ ನಿರ್ದೇಶಕನ ಆಗಮನವಾಗಿದೆ ಎಂಬ ಅಭಿಪ್ರಾಯಗಳೇ ಎಲ್ಲೆಡೆ ಕೇಳಿ ಬರುತ್ತಿವೆ.

ಒಟ್ಟಾರೆಯಾಗಿ ಅಂಬಿ ಈ ಚಿತ್ರದ ಮೂಲಕ ಮತ್ತೊಮ್ಮೆ ನಾಯಕನಾಗಿ ಪ್ರೇಕ್ಷಕರನ್ನು ಆವರಿಸಿಕೊಂಡಿದ್ದಾರೆ. ಕಿಚ್ಚಾ ಸುದೀಪ್ ತಮ್ಮೆಲ್ಲ ಕೆಲಸ ಕಾರ್ಯಗಳ ನಡುವೆಯೂ ಈ ಚಿತ್ರವನ್ನು ಬಲು ಆಸ್ಥೆಯಿಂದ ಪೊರೆದಿದ್ದರು. ನಿರ್ಮಾಣದ ಜೊತೆಗೆ ಜ್ಯೂನಿಯರ್ ಅಂಬಿಯಾಗಿಯೂ ನಟಿಸಿದ್ದರು. ಇಮೇಜುಗಳಾಚೆಗಿನ ಅವರ ನಟನೆಯೂ ಜನ ಮನ ಗೆದ್ದಿದೆ. ಈ ಮೂಲಕ ಗುರುದತ್ ಗಾಣಿಗ ಮೇಲೆ ಅವರಿಟ್ಟಿದ್ದ ನಂಬಿಕೆಯೂ ನಿಜವಾಗಿದೆ.

Continue Reading

Trending

Copyright © 2018 Cinibuzz