One N Only Exclusive Cine Portal

‘ಆಕೆ’ ಲಂಡನ್ ನಿಂದ ಬಂದಿದ್ದಾಳೆ!

“ಆಕೆ – it is a Kannada word. It means her.” ಎಂದು ಚಿತ್ರದ ನಾಯಕ ನಟ ಬ್ರಿಟಿಷ್ ಪಾತ್ರಕ್ಕೆ ವಿವರಿಸುತ್ತಾನೆ. ಕೌತುಕಗಳಿಂದ ತುಂಬಿರುವ ‘ಆಕೆ’ ಸಿನೆಮಾ, ಪ್ರೇಕ್ಷಕರನ್ನು ಕುರ್ಚಿ ತುದಿಯಲ್ಲಿ ಕೂತು ಮುಂಬರುವ ದೃಶ್ಯಗಳಿಗೆ ಕಾತುರದಿಂದ ಕಾಯುವಂತೆ ಮಾಡುವ ವೇಗದ ಚಿತ್ರ.
ಶಿವ ಲಂಡನ್ನಿನಲ್ಲಿರುವ ಚಿತ್ರ ಕಲಾವಿದ. ಶರ್ಮಿಳ ಬೆಂಗಳೂರಿನಲ್ಲಿರುವ ಹುಡುಗಿ. ಗಂಡನಿಂದ ಬೇರೆಯಾಗಿ, ತನ್ನ ಸಣ್ಣ ಕೂಸನ್ನು ನೋಡಿಕೊಳ್ಳುತ್ತ, ಸಿನೆಮಾ ನಟಿ ಆಗಬೇಕೆಂಬ ಆಸೆ ಇಟ್ಟುಕೊಂಡಿರುವವಳು. ಅನೇಕ ವಿಚಿತ್ರ ಘಟನೆಗಳು ಇಬ್ಬರ ಜೀವನವನ್ನು ಅಸ್ತವ್ಯಸ್ತ ಗೊಳಿಸುತ್ತವೆ. ಬರಬರುತ್ತ ಇಬ್ಬರ ಕಥೆಗಳು ಒಂದೇ ದಿಕ್ಕಿನ ಕಡೆ ಸಾಗುತ್ತದೆ.
ಇರೋಸ್ ಇಂಟರ್ ನ್ಯಾಶನಲ್ ಸಂಸ್ಥೆಯ ಹೆಮ್ಮೆಯ ಮೊದಲ ಕೊಡುಗೆ ’ಆಕೆ’. ಕಲೈ, ಸೂರಿ ಹಾಗು ಸುನಂದ ಮುರಳಿ ಮನೋಹರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ನಿರ್ದೇಶಕ ಕೆ. ಎಂ. ಚೈತನ್ಯ ’ಆಕೆ’ ಯ ನಿರ್ದೇಶಕ.
ಚೈತನ್ಯ, ಚಿರು ಸರ್ಜಾ ಹಾಗು ಯೊಗೀಶ್ ದ್ವಾರಕೀಶ್ ಕಾಂಬಿನೇಷನ್ ಈಗಾಗಲೆ ‘ಆಟಗಾರ’ದಲ್ಲಿ ಒಂದಾಗಿತ್ತು. ‘ಆಕೆ’ ಚಿತ್ರದಲ್ಲಿ ಮತ್ತೆ ಈ ಮೂವರು ಕೈ ಜೋಡಿಸಿದ್ದಾರೆ. ಯೋಗಿಶ್ ದ್ವಾರಕೀಶ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯವಹಿಸಿದ್ದಾರೆ.
ಈ ಚಿತ್ರದ ಬಹುತೇಕ ಚಿತ್ರೀಕರಣ ಬ್ರಿಟನ್ ದೇಶದಲ್ಲಿ ನಡೆದಿದೆ. ಹಲವಾರು ಬ್ರಿಟಿಷ್ ತಂತ್ರಜ್ಞಾರು ಇದರಲ್ಲಿ ಕೆಲಸ ಮಾಡಿದ್ದಾರೆ.
ಹ್ಯಾರಿ ಪಾಟರ್ ಸಿನೆಮಾದಲ್ಲಿ ಛಾಯಾಗ್ರಹಣ ವಿಭಾಗದಲ್ಲಿ ಆಪರೇಟೀವ್ ಕ್ಯಾಮೆರಾಮನ್ ಆಗಿ ಕೆಲಸ ಮಾಡಿದ ಇಯನ್ ಹಾವ್ಸ, ಹಾಲಿವುಡ್ ನ The Magnificent Eleven ಹಾಗು The Knot ಚಿತ್ರಗಳಲ್ಲಿ ಕೆಲಸ ಮಾಡಿದ ವಿನ್ಯಾಸಕ ಪಾಲ್ ಬರ್ನ್ಸ್ ಹೀಗೆ ಹಲವಾರು ಹಾಲಿವುಡ್ ತಂತ್ರಜ್ಞರು ’ಆಕೆ’ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ.
ಇವರೊಂದಿಗೆ ಪ್ರಖಾತ ಸಂಗೀತ ನಿರ್ದೇಶಕ ಗುರು ಕಿರಣ್ ಹಾಗು ಛಾಯಾಗ್ರಾಹಕ ಮಲ್ಲ್ರಭಟ್ ಜೋಶಿ ಕೈ ಜೋಡಿಸಿದ್ದಾರೆ. ಹೀಗೆ ಕನ್ನಡ ಹಾಗೂ ಬ್ರಿಟಿಷ್ ಪ್ರತಿಭೆಗಳ ಸಮ್ಮಿಲನದಿಂದ ಮೂಡಿಬಂದ ಅಪರೂಪದ ಚಿತ್ರ ‘ಆಕೆ’.

Leave a Reply

Your email address will not be published. Required fields are marked *


CAPTCHA Image
Reload Image