One N Only Exclusive Cine Portal

ಆಪತ್ಭಾಂಧವ…!

ಕನ್ನಡ ಚಿತ್ರಗಳಲ್ಲಿ ಪೋಷಕ ಪಾತ್ರಗಳ ಭಾವಪೂರ್ಣ ಅಭಿನಯದಿಂದಲೇ ಜನ ಮಾನಸವನ್ನು ಆವರಿಸಿಕೊಂಡಿರುವವರು ದಿವಂಗತ ಅಶ್ವತ್ಥ್. ಇಂಥಾ ಅಭಿಜಾತ ಕಲಾವಿದನ ಪುತ್ರ ಶಂಕರ್ ಅಶ್ವತ್ಥ್ ಕಷ್ಟ ನೀಗಿಕೊಳ್ಳಲು ಮೈಸೂರಿನಲ್ಲಿ ಊಬರ್ ಕ್ಯಾಬ್ ಡ್ರೈವರ್ ಆಗಿದ್ದಾರೆಂಬ ಸುದ್ದಿ ಈವತ್ತು ಎಲ್ಲೆಡೆ ಪ್ರಚಾರ ಪಡೆದುಕೊಂಡಿತ್ತಲ್ಲಾ? ಅದು ಗೊತ್ತಾದ ಕೂಡಲೆ ಕೆಲಸ ಕಾರ್ಯ ಬಿಟ್ಟು ಮೈಸೂರಿಗೆ ತೆರಳಿರೋ ಪ್ರಥಮ್ ತಮ್ಮ ‘ಬಿಲ್ಡಪ್ ಚಿತ್ರದಲ್ಲಿ ನಟಿಸೋ ಅವಕಾಶವನ್ನ ಶಂಕರ್ ಅಶ್ವತ್ಥ್‌ಗೆ ಕೊಟ್ಟು ಜೊತೆಗೆ ಅಡ್ವಾನ್ಸ್ ರೂಪದಲ್ಲಿ ಬ್ಲ್ಯಾಂಕ್ ಚೆಕ್ ಕೊಡೋ ಮೂಲಕ ಆಪತ್ಭಾಂಧವನಾಗಿದ್ದಾರೆ.
ಈವತ್ತು ಶಂಕರ್ ಅಶ್ವತ್ಥ್ ಬಗ್ಗೆ ಸುದ್ದಿಯಾದಾಗ ಪ್ರಥಮ್ ಡಬ್ಬಿಂಗ್‌ನಲ್ಲಿ ಪಾಲ್ಗೊಂಡಿದ್ದರು. ಆದರೆ ವಿಷಯ ಗೊತ್ತಾದಾಕ್ಷಣವೇ ಡಬ್ಬಿಂಗ್ ಕೆಲಸವನ್ನು ನಿಲ್ಲಿಸಿ ಮೈಸೂರಿಗೆ ಹೋಗಿ ಶಂಕರ್ ಅಶ್ವತ್ಥ್ ಅವರನ್ನು ಭೇಟಿಯಾದ ಪ್ರಥಮ್ ತಮ್ಮ ಮುಂದಿನ ಚಿತ್ರ ಬಿಲ್ಡಪ್‌ನಲ್ಲಿ ನಟಿಸೋ ಆಫರ್ ಕೊಟ್ಟಿದ್ದಾರೆ. ಶಂಕರ್ ಸ್ವಾಭಿಮಾನದಿಂದ ಬೇಡ ಅಂದರೂ ಅಡ್ವಾನ್ಸ್ ರೂಪದಲ್ಲಿ ಬ್ಲ್ಯಾಂಕ್ ಚೆಕ್ ಕೊಟ್ಟು ಬಂದಿದ್ದಾರಂತೆ!


ಅಂದಹಾಗೆ, ಶಂಕರ್ ಅಶ್ವತ್ಥ್ ಕನ್ನಡ ಚಿತ್ರ ಪ್ರೇಮಿಗಳಿಗೆ ಚಿರಪರಿಚಿತ ನಟ. ಅವರಿಗೆ ಬಿಲ್ಡಪ್ ಚಿತ್ರದಲ್ಲಿ ರಾಜನ ಆಸ್ಥಾನದ ಮಂತ್ರಿಯ ಪಾತ್ರವನ್ನು ಪ್ರಥಮ್ ಫಿಕ್ಸ್ ಮಾಡಿದ್ದಾರೆ. ಈ ಹಿಂದೆ ಗ್ಯಾಂಗ್ರೀನ್ ಕಾಯಿಲೆಯಿಂದ ಕಾಲು ಕಳಕೊಂಡಿದ್ದ ಸತ್ಯಜಿತ್ ಅವರಿಗೂ ಕೂಡಾ ಪ್ರಥಮ್ ತಮ್ಮ ಚಿತ್ರದಲ್ಲಿ ಅವಕಾಶ ಕೊಡೋ ಮೂಲಕ ಗಮನ ಸೆಳೆದಿದ್ದರು. ಈಗ ಕಷ್ಟದಲ್ಲಿದ್ದಾರೆನ್ನಲಾದ ಶಂಕರ್ ಅಶ್ವತ್ಥ್ ಅವರಿಗೂ ಅವಕಾಶ ಕೊಡೋ ಮೂಲಕ ನೆರವಾಗಿದ್ದಾರೆ.

Leave a Reply

Your email address will not be published. Required fields are marked *


CAPTCHA Image
Reload Image