One N Only Exclusive Cine Portal

ಆರಾಮಾಗಿದ್ದಾರೆ ದಿಲೀಪ್ ಕುಮಾರ್ ….

ಬೀಟೌನಿನಲ್ಲಿ ಮಹಮದ್ ಯೂಸುಫ್ ಖಾನ್ ಅಂದರೆ ಯಾರು ಅಂತ ಯಾರಿಗೂ ಗೊತ್ತಾಗೋದಿಲ್ಲ. ದಿಲೀಪ್ ಕುಮಾರ್ ಹೆಸರೇಳುತ್ತಲೇ ಸಿನೆಮಾಪ್ರಿಯರ ಕಣ್ಣಲ್ಲಿ ಕಪ್ಪು ಬಿಳುಪಿನ ನೆನಪು ಮೆರವಣಿಗೆ ಹೊರಡುತ್ತದೆ. ದಿಲೀಪ್ ಕುಮಾರ್ ಭಾರತೀಯ ಚಿತ್ರರಂಗ ಕಂಡ ಸಜ್ಜನ ನಟ. 70 – 80ರ ದಶಕದಲ್ಲಿ ಹಿಂದಿ ಸಿನೆಮಾ ಸಾಮ್ರಾಜ್ಯವನ್ನು ಬಹುತೇಕವಾಗಿ ಆಳಿದವರಲ್ಲಿ ಇವರೂ ಒಬ್ಬರು. ದಿಲೀಪ್ ತಮ್ಮ ಪಾತ್ರವೈವಿಧ್ಯ ಮತ್ತು ತಣ್ಣನೆಯ ನಿಲುವಿನಲ್ಲೇ ಅಭಿವ್ಯಕ್ತಿ ಹೊಮ್ಮಿಸುವ ವಿಶಿಷ್ಟ ಮ್ಯಾನರಿಸಮ್ಮಿನಿಂದ ದೊಡ್ಡ ಅಭಿಮಾನಿ ಬಳಗ ಸೃಷ್ಟಿಸಿಕೊಂಡವರು. ಇಂದಿನ ಹೊಸ ಪೀಳಿಗೆಗೂ ಇವರು ‘ಟ್ರಾಜಿಡಿ ಕಿಂಗ್’ ಎಂದು ಪರಿಚಿತರು. ಇಂಥಾ ದಿಲೀಪ್ ಕುಮಾರ್ ಇತ್ತೀಚೆಗೆ ವೃದ್ಧಾಪ್ಯದ ಹತ್ತು ಹಲವು ಸಮಸ್ಯೆಗಳಿಂದ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂದರ್ಭದಲ್ಲಿ ಭಾರತೀಯ ಚಿತ್ರರಂಗ ಮತ್ತು ಪತ್ರಿಕೆಗಳು ದಿಲೀಪ್ ಗುಣಮುಖರಾಗಲೆಂದು ಹಾರೈಕೆಯ ಹೊಳೆ ಹರಿಸಿದ್ದವು. ಅದೀಗ ಫಲಿಸಿದೆ. ದಿಲೀಪ್ ಚೇತರಿಸಿಕೊಂಡಿದ್ದಾರೆ. ಪತ್ನಿ, ನಟಿ ಸಾಯಿರಾಬಾನು ಹಸನ್ಮುಖಿ ದಿಲೀಪರ ಫೋಟೋವನ್ನು ಮಾಧ್ಯಮಗಳಿಗೆ ಕಳಿಸಿಕೊಟ್ಟಿದ್ದಾರೆ. ಈ ನಡುವೆ ಕೆಲವರು ದಿಲೀಪ್ ಕುಮಾರ್ ಇನ್ನಿಲ್ಲ ಅನ್ನುವ ಗಾಸಿಪ್ ಹರಿಬಿಟ್ಟಿದ್ದಾರೆ. 93 ವರ್ಷದ ಈ ಮೇರುನಟ, ಶತಾಯುಷ ಕಾಣಲಿ ಅನ್ನೋದು ಸಿನಿಬಜ್ ಹಾರೈಕೆ

Leave a Reply

Your email address will not be published. Required fields are marked *


CAPTCHA Image
Reload Image