One N Only Exclusive Cine Portal

ಆಹಾ ಅಳೀಮಯ್ಯ!

ತೀರಾ ಈ ಮಟ್ಟಕ್ಕೆ ಮಾವನ ಹೆಸರನ್ನು ಬಳಸಿಕೊಳ್ಳುವ ಅಳಿಯ ಬೇರೊಬ್ಬನಿಲ್ಲವೇನೋ!
ಭಾರತಿ ವಿಷ್ಣುವರ್ಧನ್ ತಮ್ಮ ಅಳಿಯನನ್ನು ಸದಾ ಕಂಕುಳಿಗೇರಿಸಿಕೊಂಡು ಓಡಾಡುವುದು ಇತ್ತೀಚೆಗೆ ಹಾಸ್ಯಾಸ್ಪದವಾಗಿ ಪರಿಣಮಿಸಿದೆ.
ಯಾವ ಪ್ರೆಸ್ ಮೀಟಾಗಲಿ, ಸಭೆ ಸಮಾರಂಭಗಳಲ್ಲಾಗಲಿ ಭಾರತಿಯವರು ಆಗಮಿಸಿದರೆ, ಅಲ್ಲಿ ಅಳಿಯ ಅನಿರುದ್ದನ ಹಾಜರಾತಿ ಇಲ್ಲದಿರುವುದಿಲ್ಲ. ಇರಲಿ, ವಿಷ್ಣುವನ್ನು ಕಳೆದುಕೊಂಡ ಕುಟುಂಬಕ್ಕೆ ಎಲ್ಲವನ್ನೂ ನಿಭಾಯಿಸಬಲ್ಲ ಒಬ್ಬ ಗಂಡಿನ ಅವಶ್ಯಕತೆ ಇರುತ್ತದೆ. ಆದರೆ, ಪ್ರತಿ ವಿಚಾರಕ್ಕೂ ಅನಿರುದ್ಧ ವಿಷ್ಣುವನ್ನು ಅನುಕರಿಸುವುದು ಲೇವಡಿ ಮಾಡುವವರಿಗೆ ಆಹಾರವಾಗಿದೆ. ವಿಷ್ಣು ವರ್ಧನ್‌ಗೂ ಅನಿರುದ್ದ ನಟಿಸುವ ತರಕಲು ಪರಕಲು ಸಿನಿಮಾಗಳಿಗೂ ಎಲ್ಲಿಯದೆಲ್ಲಿ ಸಂಬಂಧ? ತನ್ನ ಸಿನಿಮಾದ ಬಗ್ಗೆ ಮಾತಾಡುವಾಗಲೂ ಅನಿರುದ್ದ `ಅಪ್ಪಾವ್ರು ಹೀಗನ್ನುತ್ತಿದ್ದರು. ಹಾಗನ್ನುತ್ತಿದ್ದರು ಎಂದು ಮಾವನವರ ಬಗ್ಗೆ ಪ್ರವಚನ ಶುರುಮಾಡಿಬಿಡುತ್ತಾರೆ. ಹೋಗಲಿ ಬಿಡಿ ಎಂದುಕೊಂಡರೆ, ಕ್ಯಾಮೆರಾ ಮುಂದೆ ನಿಂತಾಗಲೂ ವಿಷ್ಣುವಂತೆಯೇ ಆಡಲು ಶುರುಮಾಡುತ್ತಾರೆ ಅನ್ನೋದು ಪ್ರತ್ಯಕ್ಷದರ್ಶಿಗಳ ಆರೋಪ! ನಿರ್ದೇಶಕ `ಆಕ್ಷನ್ ಎನ್ನುತ್ತಿದ್ದಂತೇ ಥೇಟು ವಿಷ್ಣುವಿನಂತೆ ಹೆಜ್ಜೆ ಹಾಕುವುದು, ಎಡಗೈ ಮುಂದೆ ಮಾಡಿ ನಟಿಸುವುದು ಅನಿರುದ್ದನಿಗೆ ಅಭ್ಯಾಸವಾಗಿಬಿಟ್ಟಿದೆ. ನಿಜಕ್ಕೂ ಈತ ಪ್ರತಿಭಾವಂತನೇ ಆಗಿದ್ದರೆ, ತನ್ನ ಮಾವನ ನೆರಳನ್ನು ಬಿಟ್ಟು ನಟಿಸಲಿ. ಆಗ ಈತನ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಾಗುತ್ತದೆ. ಅದುಬಿಟ್ಟು ವಿಷ್ಣುವನ್ನು ಅನುಕರಿಸಿದ ಮಾತ್ರಕ್ಕೆ ಈತ ಸಾಹಸಸಿಂಹನಾಗಲು ಸಾಧ್ಯವೇ ಎನ್ನುವುದು ಚಿತ್ರೋದ್ಯಮದವರ ಅಭಿಪ್ರಾಯ.
ಇಷ್ಟೆಲ್ಲಾ ಹೇಳಿದ್ಯಾಕೆ ಅಂದ್ರೆ, ಅನಿರುದ್ಧ ಹೊಸ ಸಿನಿಮಾದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ಹೆಸರು ರಾಜಾ ಸಿಂಹ. ಇದರ ಆಮಂತ್ರಣ ಪತ್ರಿಕೆ ಪಬ್ಲಿಸಿಟಿಗಳಲ್ಲಿ ವಿಷ್ಣುವರ್ಧನ್ ಅವರನ್ನೇ ಬಳಸಿಕೊಳ್ಳಲಾಗಿದೆ. ಈ ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಪಾತ್ರವನ್ನೂ ಗ್ರಾಫಿಕ್ಸ್ ಮೂಲಕ ಸೃಷ್ಟಿಸಲಾಗುತ್ತಿದೆಯಂತೆ. ವಿಷ್ಣು ಬದುಕಿದ್ದಾಗಲೂ ಅಳಿಯನನ್ನು ಮೇಲೆತ್ತಲು ಆತನ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಅದೆಲ್ಲಾ ವರ್ಕ್‌ಔಟ್ ಆಗಿರಲಿಲ್ಲ. ಈಗ ಅವರು ಮರೆಯಾದಮೇಲೂ ಅಳಿಯ ಮಾವನನ್ನು ಬಳಸಿಕೊಳ್ಳುತ್ತಿದ್ದಾರೆ… ಹೀರೋ ಆಗಿ ಗೆಲ್ಲಲು… ಅನಿರುದ್ದ ದೊಡ್ಡ ಹೀರೋ ಆಗಿ ಹೊರಹಿಮ್ಮಲಿ…

Leave a Reply

Your email address will not be published. Required fields are marked *


CAPTCHA Image
Reload Image