One N Only Exclusive Cine Portal

ಈ ವಾರ ಎಂಟು ಸಿನಿಮಾ ರಿಲೀಸು!

PRO LOGOಅವಧಿ ಈ ವಾರ ಬಿಡುಗಡೆ

ಮಾಂಟ್ರಿಕ್ಸ್ ಮೀಡಿಯಾ ವರ್ಕ್ಸ್ ಸಂಸ್ಥೆಯ ಲಾಂಛನದಲ್ಲಿ ನಿರ್ಮಾಣವಾಗಿರುವ, ಸಾಯಿಕಿರಣ್ ಮುಕ್ಕಮಾಲಾ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣದ ಜೊತೆ ನಿರ್ದೇಶನ ಕೂಡ ಮಾಡಿರುವ ‘ಅವಧಿ’ ಚಿತ್ರವೂ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಆ ದೇವರು ಮನುಷ್ಯನ ಜೀವನದಲ್ಲಿ ಹುಟ್ಟು ಸಾವಿನ ನಡುವೆ ಹೇಗೆ ಆಟವಾಡುತ್ತಾನೆ ಎಂಬುದನ್ನು ಚಲನಚಿತ್ರವೊಂದರ ಮೂಲಕ ಅನಾವರಣಗೊಂಡಿದೆ. ಚಿತ್ರಕ್ಕೆ ಸುರೇಶ್ ಗೊಂಟ್ಲ ಛಾಯಾಗ್ರಹಣ, ಸಾಬು ವರ್ಗಿಸ್ ಸಂಗೀತ, ಅರಸು ಅಂತಾರೆ ಸಾಹಿತ್ಯ, ರಾಮ್ ಸುಂಕರ ಸಾಹಸ, ರಮೇಶ್ ಕೆ ಸಂಕಲನವಿದೆ. ತಾರಬಳಗದಲ್ಲಿ ರಂಜಿತ್, ಅರ್ಚನಾ, ರಮೇಶ್ ಭಟ್, ಮಂಜುನಾಥ್, ಜೈಜಗದೀಶ್, ಶ್ರೀನಿವಾಸ್ ಪ್ರಭು, ಸುಚಿತ್ರಾ ಇನ್ನು ಮುಂತಾದವರು ಅಭಿನಯಿಸಿದ್ದಾರೆ.

ಮಿ||ಎಲ್.ಎಲ್.ಬಿಯಲ್ಲಿ ಶಿಶಿರಾ-ಮೋನಿಕಾLLB

ಈ ಮೊದಲು ತಿಮ್ಮರಾಯ, ಗುಣವಂತ, ಬದ್ರಿ ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದ ರಘುವರ್ಧನ್ ಬಹಳ ದಿನಗಳ ಗ್ಯಾಪ್ ನಂತರ ಇದೀಗ ಮತ್ತೊಂದು ಚಿತ್ರದ ಮೂಲಕ ಗಾಂಧಿನಗರಕ್ಕೆ ಎಂಟ್ರಿಯಾಗುತ್ತಿದ್ದಾರೆ. ಮಿ|| ಎಲ್. ಎಲ್.ಬಿ. ಎಂಬ ಹೆಸರಿನ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಒಬ್ಬ ವಿಶಿಷ್ಟವಾದ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಯಾಗಿ ಈ ಚಿತ್ರದ ನಾಯಕ ಶಿಶಿರ ಕಾಣಿಸಿಕೊಳ್ಳಲಿದ್ದಾರೆ, ಒರಟು, ಧಿಮಾಕು, ಗಾಂಚಾಲಿಯಂತಹ ಎಲ್ಲಾ ವಿಶೇಷ ಗುಣಗಳನ್ನು ನಾಯಕ ಹೊಂದಿರುತ್ತಾನೆ. ಆದರೂ ಕೂಡ ಸ್ವಾಭಿಮಾನಿ ಹಾಗೂ ಹಾಸ್ಯಗಾರನಾಗಿರುತ್ತಾನೆ. ಈ ತರಹದ ವಿಶೇಷವಾದಂತಹ ಕಥಾನಕವನ್ನು ಇಟ್ಟುಕೊಂಡು ರಘುವರ್ದನ್ ಅವರು ಈ ಚಿತ್ರಕ್ಕೆ ಆಕ್ಷ್ಯನ್ ಕಟ್ ಹೇಳುತ್ತಿದ್ದಾರೆ.
ಈಗಾಗಲೇ ಮಂಜುಚರಣ್‌ರವರ ಸಂಗೀತ ನಿರ್ದೇಶನದಲ್ಲಿ ಐದು ಹಾಡುಗಳಿಗೆ ಧ್ವನಿಮುದ್ರಣ ಕೂಡ ಮುಗಿದಿದೆ. ಗೌಸ್‌ಫೀರ್, ಮಂಜುಚರಣ್ ಸಾಹಿತ್ಯ ರಚಿಸಿದ್ದಾರೆ ಬರುವ ೧೪ ರಂದು ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ಮೈಸೂರು, ಮದ್ದೂರು, ಮಡಿಕೇರಿ ಹಾಗೂ ಚಿಕ್ಕಮಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಆರ್.ವಿ ಕ್ರೀಯೇಷನ್ಸ್ ಅಡಿಯಲ್ಲಿ ನಿರ್ಮಾಣವಾಗಲಿದ್ದು ಚಿತ್ರಕ್ಕೆ ಸುರೇಶ್ ಬಾಬು ಛಾಯಾಗ್ರಹಣ, ಎಂ. ಗಿರೀಶ್ ಕುಮಾರ್ ಸಂಕಲನ ವಿದ್ದು, ಶಿಶಿರ ಹಾಗೂ ಮೋನಿಕಾ, ನಾಯಕ, ನಾಯಕಿಯಾಗಿ ಆಯ್ಕೆಯಾಗಿದ್ದು ಸುಜಯ್ ಹೆಗ್ಡೆ, ಶ್ರೀನಿವಾಸ್ ಗೌಡ, ಉಳಿದ ತಾಂತ್ರಿಕ ವರ್ಗದ ಹಾಗೂ ತಾರಾಗಣದ ಆಯ್ಕೆ ನಡೆಯುತ್ತಿದೆ.

ಕಂಠೀರವದಲ್ಲಿ ಹಳ್ಳಿ ಸೊಗಡುಗೆ ಅದ್ದೂರಿ ಚಾಲನೆ

ಅಭಿಮಾನ ಎನ್ನುವ ಪದಕ್ಕೆ ಎಂದಿಗೂ ಬೆಲೆ ಕಟ್ಟಲಾಗದು, ಅಭಿಮಾನಿಗಳೇ ದೇವರು ಎಂದು ನಟಸಾರ್ವಭೌಮ ಡಾ|| ರಾಜ್‌ಕುಮಾರ್ ರವರು ಆಗಲೇ ಹೇಳಿದ್ದರು, ಅಂತಹ ಒಬ್ಬ ಸಂಗೀತ ಅಭಿಮಾನಿಯೊಬ್ಬನ ಜೀವನದ ಕಥಾನಕವನ್ನು ಹೊಂದಿದ ಚಿತ್ರ ಹಳ್ಳಿ ಸೊಗಡು. ಈಗಾಗಲೇ ೧೦೦ ಚಿತ್ರಗಳ ಗಡಿ ತಲುಪುವ ಹಂತದಲ್ಲಿರುವ ನೃತ್ಯ ನಿರ್ದೇಶಕ ಎಂ.ಆರ್. ಕಪಿಲ್‌ರವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ೨ ನೇ ಚಿತ್ರವಾದ ಹಳ್ಳಿ ಸೊಗಡು ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ಮಹೂರ್ತ ಆಚರಿಸಿಕೊಂಡಿತು. ಚಿತ್ರದ ಮಹೂರ್ತ ದೃಶ್ಯಕ್ಕೆ ಹಿರಿಯ ನಿರ್ದೇಶಕರಾದ ಎಸ್.ಕೆ. ಭಗವಾನ್ ರವರು ಕ್ಲಾಪ್ ಮಾಡಿದರೆ, ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಕ ಉಮೇಶ್ ಬಣಕಾರ್ ಕ್ಯಾಮರಾ ಚಾಲನೆ ಮಾಡಿದರು.
ಮಹೂರ್ತದ ನಂತರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತಾನಾಡಿದ ಡಾ|| ದೊಡ್ಡರಂಗೇಗೌಡ ನನ್ನ ಒಂದು ಪುಸ್ತಕದ ಬಿಡುಗಡೆಯ ಸಂದರ್ಭದಲ್ಲಿ ಸತೀಶ್ ಕುಮಾರ್ ಮೆಹ್ತಾ, ಮಹಂತೇಶ್ ಹೆಚ್.ಎನ್. ದತ್ತಾತ್ರೇಯ ಸೇರಿ ನಾಲ್ಕು ಜನ ಗೆಳೆಯರು ಈ ಚಿತ್ರದ ಬಗ್ಗೆ ಹೇಳಿದರು. ನಾಲ್ಕು ದಶಕಗಳ ಕಾಲ ನಾನು ಬರೆದಂತಹ ಹಾಡುಗಳನ್ನು ಅಭಿಮಾನಿಯೊಬ್ಬ ಒಂದು ಆರ್ಕೆಸ್ಟ್ರಾ ತಂಡ ಕಟ್ಟಿಕೊಂಡು ಹಾಡುತ್ತಾ ತನ್ನ ಬದುಕನ್ನು ಸುಂದರ ಮಾಡಿಕೊಳ್ಳುತ್ತಾ ಹೋಗುತ್ತಾನೆ. ಈತನ ಜೊತೆ ಗೆಳತಿಯು ಬೆಂಬಲವಾಗಿ ನಿಲ್ಲುತ್ತಾಳೆ, ಒಮ್ಮೆ ಕಾಯಿಲೆಗೆ ತುತ್ತಾದ ನಾಯಕನನ್ನು ಮಾತಾನಾಡಿಸಲು ಸಾಹಿತಿ ಡಾ|| ದೊಡ್ಡರಂಗೇಗೌಡರೇ ಬಂದಾಗ ಜನ್ಮ ನೀಡಿದ ಭೂತಾಯಿಯ ನಾ ಹೇಗೆ ತಾನೇ ಮರೆಯಲಿ ಎಂಬ ಹಾಡನ್ನು ಅವರ ಬಾಯಿಂದ ಕೇಳಲು ಇಷ್ಟ ಪಡುತ್ತಾನೆ. ಆ ಹಾಡಿನಿಂದ ಆತ ಮರು ಜನ್ಮ ಪಡೆಯುತ್ತಾನೆ. ಈ ಕನ್ಸೆಪ್ಟ್ ಇಟ್ಟುಕೊಂಡು ಸಿನಿಮಾ ಮಾಡುವುದಾಗಿ ಹೇಳಿ ನನ್ನ ಪಾತ್ರವನ್ನು ನಾನೇ ಮಾಡಬೇಕೆಂದು ಕೇಳಿದರು. ಇದು ಸಂಪೂರ್ಣ ಗ್ರಾಮೀಣ ಸೊಗಡಿನ ಚಿತ್ರ ೧೦ ಹಳ್ಳಿಗಳಲ್ಲಿ ಶೂಟಿಂಗ್ ಮಾಡಿ ೧ ಹಳ್ಳಿಯಂತ ತೊರಿಸುವಲ್ಲಿ ಪುಟ್ಟಣ್ಣ ನಿಪುಣರು, ಇಲ್ಲಿಯೂ ಅಂತಹ ಪ್ರಯತ್ನ ಮಾಡಲಾಗುತ್ತದೆ. ಇಲ್ಲಿ ನನ್ನ ೨೭ ಜನಪ್ರಿಯ ಚಿತ್ರಗೀತೆಗಳ ಚರಣವನ್ನು ಮಾತ್ರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ನಿರ್ದೇಶಕ ಕಪಿಲ್ ಮಾತನಾಡಿ ಇಂದಿನಿಂದ ೧೦ ದಿನಗಳ ಕಾಲ ಹಾಡುಗಳನ್ನು ಚಿತ್ರೀಕರಿಸಿ ನಂತರ ಮಧುಗಿರಿ ಡಾ|| ದೊಡ್ಡರಂಗೇಗೌಡರ ಹುಟ್ಟೂರಲ್ಲಿ ೧೮ ದಿನಗಳ ಕಾಲ ಗೌಡರ ಬಾಲ್ಯ ದಿನಗಳನ್ನು ಕಳೆದ ಜಾಗದಲ್ಲಿ ಚಿತ್ರೀಕರಿಸುವ ಪ್ಲಾನ್ ಹಾಕಿಕೊಂಡಿದ್ದೇವೆ. ಮಾಗಿಯ ಕನಸು ಚಿತ್ರದಿಂದ ಅರುಣರಾಗ ಸಿನಿಮಾದವರೆಗೆ ಅವರು ಬರೆದಂತಹ ಹಾಡುಗಳನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗುತ್ತದೆ ಎಂದು ಅವರು ಹೇಳಿದರು.
ಚಿತ್ರದ ನಾಯಕ ಅರವ್ ಸೂರ್ಯ ಮಾತಾನಾಡಿ ಶ್ರೀ ಚಕ್ರಂ ನಂತರ ಇದು ನನ್ನ ಮೂರನೇ ಚಿತ್ರ ಶಿವಣ್ಣ ಎಂಬ ಗಾಯಕನಾಗಿ ನಾನು ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದೆನೆ ಎಂದು ಹೇಳಿದರು. ನಾಯಕಿ ಅಕ್ಷರಾ ಮಾತಾನಾಡಿ ಜಾಕಿ ಚಿತ್ರದಲ್ಲಿ ಬಾಲನಟಿಯಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದು, ನಾನು ಒಂದೆರಡು ಆಡ್ ಕಂಪನಿಗಳಿಗೂ ಮಾಡೆಲ್ ಆಗಿದ್ದೆ, ನಾಯಕಿಯಾಗಿ ಮೊದಲ ಚಿತ್ರವಿದು ಮೂಲತಃ ಭರತನಾಟ್ಯ ಕಲಾವಿದೆಯಾದ ನಾನು ಚಿತ್ರದಲ್ಲೂ ಅದೇ ಪಾತ್ರ ನಿರ್ವಹಿಸುತ್ತಿದ್ದೇನೆ ಎಂದು ಹೇಳಿದರು. ಚಿತ್ರದ ನಿರ್ಮಾಪಕರಾದ ಸತೀಶ್ ಕುಮಾರ್ ಮೆಹ್ತಾ, ಹೆಚ್. ಎನ್. ದತ್ತಾತ್ತ್ರೇಯ, ರಜತ ರಘುನಾಥ್ ಹಾಗೂ ಕೆ.ಎಸ್. ಮಹಂತೇಶ್ ಹಾಜರಿದ್ದು ಮಾತಾನಾಡಿದರು.

ಈ ವಾರ ತೆರೆಗೆ ‘ಸಿಕ್ಕಾಪಟ್ಟೆ ಇಷ್ಟಪಟ್ಟೆ’Sikkapatte_ishtapatte_2

ಪ್ರಿಯಂ ಕ್ರಿಯೇಷನ್ಸ್ ಲಾಂಛನದಲ್ಲಿ ಸಿ.ಆರ್. ಮನೋಹರ್ ನಿರ್ಮಾಣದ ‘ಸಿಕ್ಕಾಪಟ್ಟೆ ಇಷ್ಟಪಟ್ಟೆ’ ಚಿತ್ರ ಇದೇ ವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ.
ಹರಿರಾಜನ್ ನಿರ್ದೇಶನದ ಈ ಚಿತ್ರಕ್ಕೆ ಜೆ.ಜೆ. ಕೃಷ್ಣ ಛಾಯಾಗ್ರಹಣ, ಕಾರ್ತಿಕ್ ಭೂಪತಿರಾಜ ಸಂಗೀತ, ತಿಭುವನ್, ಪ್ರಸಾದ್ ನೃತ್ಯ, ಕೌರವ ವೆಂಕಟೇಶ್ ಸಾಹಸ, ಬಾಬುಖಾನ್ ಕಲೆ, ಥಾಮಸ್ ಮತ್ತು ಚಿದಂಬರಂ ಅವರ ನಿರ್ವಹಣೆ ಈ ಚಿತ್ರಕ್ಕಿದೆ.
ತಾರಾಗಣದಲ್ಲಿ ನಮಿತಾ, ಸಾವಂತ್, ಕಿರಣ್ ರಾಥೋಡ್, ರವೀಂದ್ರನಾಥ್, ಮೇಘನಾ ನಾಯ್ಡು, ಅನೀಶ್, ಮನೀಶ್, ಕೀರ್ತಿ ಚಾವ್ಲಾ, ಆರತಿ, ಹರಿರಾಜನ್, ಅಶೋಕ್ ರಾವ್, ಸತ್ಯಪ್ರಕಾಶ್, ಶಿವಾನಿ ಮುಂತಾದವರಿದ್ದಾರೆ.
ಈ ವಾರ ತೆರೆಗೆ ‘ನೀರ್‌ದೋಸೆ
ಸ್ಕಂದ ಎಂಟರ್‌ಟೈನ್‌ಮೆಂಟ್ ಲಾಂಛನದಲ್ಲಿ ಪ್ರಸನ್ನ ಮತ್ತು ಶಶಿಕಲಾಬಾಲಾಜಿ ಅವರು ನಿರ್ಮಿಸಿರುವ ‘ನೀರ್‌ದೋಸೆ’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ವಿಜಯ್‌ಪ್ರಸಾದ್ ರಚನೆ ಹಾಗೂ ನಿರ್ದೇಶನದ ಈ ಚಿತ್ರದ ನಾಯಕರಾಗಿ ನವರಸ ನಾಯಕ ಜಗ್ಗೇಶ್ ಅಭಿನಯಿಸಿದ್ದಾರೆ. ಹರಿಪ್ರಿಯ, ದತ್ತಣ್ಣ, ಸುಮನ್ ರಂಗನಾಥ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಸುಜ಼್ಞಾನ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸುರೇಶ್ ಅರಸ್ ಅವರ ಸಂಕಲನವಿದೆ. ನಾರಾಯಣ ಪಿಳ್ಳೈ ಅವರು ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರಕ್ಕೆ ಹೊಸ್ಮನೆ ಮೂರ್ತಿ ಅವರ ಕಲಾ ನಿರ್ದೇಶನವಿದೆ.

ಈ ವಾರ ತೆರೆಗೆ ‘ಜಿಲ್ ಜಿಲ್

ಶ್ರೀಬೆಳಗುಲಿ ಹೊನ್ನಮ್ಮದೇವಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ವೆಂಕಟೇಶ್ ಪ್ರಸಾದ್ ಬೆಳಗುಲಿ ಅವರು ನಿರ್ಮಿಸಿರುವ ‘ಜಿಲ್ ಜಿಲ್’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಮಧು ಅವರು ನಿರ್ದೇಶನದೊಂದಿಗೆ ಈ ಚಿತ್ರಕ್ಕೆ ಸಂಗೀತವನ್ನು ನೀಡಿದ್ದಾರೆ. ರವಿಕುಮಾರ್ ಬ್ಯಾಡರಹಳ್ಳಿ ಛಾಯಾಗ್ರಹಣ, ಶಿವರಾಜ್ ಮೇಹು ಸಂಕಲನ, ಹರಿಕೃಷ್ಣ ನೃತ್ಯ ನಿರ್ದೇಶನ ಹಾಗೂ ವೇಲು ಅವರ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಧನಂಜಯ್, ಪೂವಿಶ, ರವಿಕುಮಾರ್ ಎನ್.ಎಸ್, ಸುಮತಿ ಪಾಟೀಲ್, ಮೋನಿ ಮುಂತಾದವರಿದ್ದಾರೆ.

ಈ ವಾರ ತೆರೆಗೆ ‘ಕೆಂಪಮ್ಮನ ಕೋರ್ಟ್ ಕೇಸ್’

ಇದೊಂದು ವಾಸ್ತವಕ್ಕೆ ಕನ್ನಡಿ ಹಿಡಿಯುವ ಸಿನಿಮಾ. ತೀರ್ಪು ನೀಡುವುದು ವಿಳಂಬ ಆದರೆ ತೀರ್ಪು ದಕ್ಕದ ಹಾಗೆ ಜಸ್ಟಿಸ್ ಡಿಲೈಡ್, ಜಸ್ಟಿಸ್ ದಡಿನೈಡ್ ಎಂಬ ಮಾತಿದೆ. ಅದನ್ನೇ ಈ ಸಿನಿಮಾಕ್ಕೆ ಆಧಾರವಾಗಿಟ್ಟುಕೊಂಡು ಜನಪ್ರಿಯ ನಟ ಎಡಕಲ್ಲು ಗುಡ್ಡ ಚಂದ್ರಶೇಖರ್ ಅವರು ನಿರ್ದೇಶನ ಮಾಡಿರುವ ಚಿತ್ರ ಸುಂದರ್ ರಾಜ್ ಅವರ ಕಥೆ, ವಸುವೀ ಪ್ರೊಡಕ್ಷನ್ ಅಡಿಯಲ್ಲಿ ಶ್ರೀಮತಿ ಮಮತ ಸುಂದರ್ ರಾಜ್ ಹಾಡು ಎಂ ಡಿ ಸುಂದರ್ ರಾಜ್ ನಿರ್ಮಾಣದ ಚಿತ್ರ ‘ಕೆಂಪಮ್ಮನ ಕೋರ್ಟ್ ಕೇಸ್’.
ಈ ಹಿಂದೆ ಎಡಕಲ್ಲು ಗುಡ್ಡ ಚಂದ್ರಶೇಖರ್ ಅವರು ‘ಪೂರ್ವಾಪರ’ (ಎಂ ಕೆ ಇಂದಿರ ಕಾದಂಬರಿ) ಸಿನಿಮಾ ನಿರ್ದೇಶನ ಮಾಡಿದ್ದರು. ಎಡಕಲ್ಲು ಚಂದ್ರಶೇಖರ್ ಅವರೇ ಚಿತ್ರಕಥೆ ರಚಿಸಿದ್ದಾರೆ. ಬಿದರಳ್ಳಿ ವಾಸು ಅವರ ಸಂಭಾಷಣೆ ಬರೆದಿದ್ದಾರೆ.
ನಿಧಾನಗತಿಯ ತೀರ್ಪಿನ ಬಗ್ಗೆ ಪ್ರಸ್ತಾಪ ಅಲ್ಲದೆ, ರೈತರ ಸಮಸ್ಯೆ, ಹೆಣ್ಣಿನ ಮೇಲಿನ ದೌರ್ಜನ್ಯ ಹಾಗೂ ಡ್ರಗ್ ಅಬ್ಯುಸ್ ಬಗ್ಗೆ ಸಹ ?ಕೆಂಪಮ್ಮನ ಕೋರ್ಟ್ ಕೇಸ್? ಸಿನಿಮಾದಲ್ಲಿ ಪ್ರಸ್ತಾಪ ಇದೆ. ರಾಜ್ ರುಮಾಲಿ ಅವರ ಛಾಯಾಗ್ರಹಣ, ಹಿರಿಯ ಛಾಯಾಗ್ರಾಹಕ ಬಿ ಎಸ್ ಬಸವರಾಜ್ ಅವರ ನೆರವು, ಸುರೇಶ್ ಅರಸ್ ಅವರ ಸಂಕಲನ, ಶ್ರೀಧರ್ ಸಂಭ್ರಮ್ ಅವರ ಸಂಗೀತ ಇದೆ.

ಕೆಂಪಮ್ಮನಾಗಿ ರಾಧ ರಾಮಚಂದ್ರ, ಸಿದ್ದಾರ್ತ್, ವಿಶ್ವೇಶ್ವರ ಗುತಾಲ್ (ಹೊಸ ಪರಿಚಯ), ಹಿತ ಚಂದ್ರಶೇಖರ್, ತಾನಿಯ ಚಂದ್ರಶೇಖರ್ (ಹೊಸ ಪರಿಚಯ), ಆಶಾ, ಡಾ ಶ್ರೀನಾಥ್, ಜೈ ಜಗದೀಶ್,ವೆಂಕಟೇಶ್ ಪ್ರಸಾದ್ ತಾರಾಗಣದಲ್ಲಿ ಇದ್ದಾರೆ.

‘ಬಬ್ಲುಷಾ’ ಈ ವಾರ ತೆರೆಗೆ

ಚಾರಿತ್ರಿಕ ಹಿನ್ನಲೆ ಇರುವ ವೆಂಕಟ್ ಭಾರದ್ವಾಜ್ ಅವರ ?ಬಬ್ಲುಷಾ? ೨ ಘಂಟೆ ೧೨ ನಿಮಿಷ ಆವದಿಯ ಚಿತ್ರ ಇದೆ ಶುಕ್ರವಾರ ವೀಕ್ಷಣೆಗೆ ಸಜ್ಜಾಗಿದೆ. ನಿರ್ದೇಶಕ ನಿರ್ದೇಶಕ ವೆಂಕಟ್ ಭಾರದ್ವಾಜ್ ಅಮೃತ ಫಿಲ್ಮ್ ಸೆಂಟರ್ ಅಡಿಯಲ್ಲಿ ತಯಾರಿಸಿರುವ ಈ ಚಿತ್ರದ ನಿರ್ಮಾಪಕರು ಹಿರಿಯ ಕನ್ನಡ ಸಿನಿಮಾಗಳ ನಿರ್ದೇಶಕ ಹಾಗೂ ಸಾಹಿತಿ ಸಿ ವಿ ಶಿವಶಂಕರ್. ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾರುಗಳು ತೇಹಸ್ವಿ, ಪಿ ಡಿ ಅರಸ್, ವೇಣು, ಮುರಳಿ, ಜಯಪ್ರಕಾಶ್, ಜಗದೀಶ್ ಹಾಗೂ ಡಾ ರಾಜಕಮಲ್ ಶ್ರೀಹರ್ಷ.
೫೫ಂ ವರ್ಷಗಳ ಹಿಂದಿನ ಇತಿಹಾಸವನ್ನು ತೆರೆಯ ಮೇಲೆ ತಂದಿರುವ ?ಬಬ್ಲುಷಾ? ಸಿನಿಮಾ ವಿಜಯನಗರ ಸಾಮ್ರಾಜ್ಯವನ್ನು ನೆನಪಿಗೆ ತರುತ್ತದೆ. ಈ ಚಿತ್ರದ ಚಿತ್ರೀಕರಣ ಮಳವಳ್ಳಿ, ಕನಕಪುರ, ಮಲ್ಲಿನಾಥಪುರ, ರಾಮನಗರ ಹಾಗೂ ಇನ್ನಿತರ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ೧೬ ಕಲಾವಿದರು ಒಳಗೊಂಡ ಮದನ್ ಹಾಗೂ ಹರಿಣಿ ಅವರ ನೃತ್ಯ ಸಂಯೋಜನೆ ಇರುವ ಹಾಡು ಚಿತ್ರದ ಅನೇಕ ವಿಶೇಷಶಗಳಲ್ಲಿ ಒಂದು.
ಪ್ರತಿಬೆಗಳನ್ನು ವೆಂಕಟ್ ಭಾರದ್ವಾಜ್ ಬಿಜಾಪುರ ಹಾಗೂ ಅನೇಕ ಸ್ಥಳಗಳಿಂದ ಆಯ್ಕೆ ಮಾಡಿಕೊಂಡಿದ್ದಾರೆ. ಹರ್ಷಾರ್ಜುನ, ಮಣಿ ಶೆಟ್ಟಿ, ಸಿಂಚನ, ಮೃದುಲ ಭಾಸ್ಕರ್ ಅಲ್ಲದೆ ಹಿರಿಯ ಕಲಾವಿದರಾದ ಶೋಭರಾಜ್, ಅವಿನಾಶ್, ಶ್ರೀಕಾಂತ್ ಹೆಬ್ಳೀಕರ್, ಬೇಬಿ ಶಮಾ, ಶಾಂತ ನಾಗೇಂದ್ರ ಸ್ವಾಮಿ ಸಹ ತಾರಾಗಣದಲ್ಲಿ ಇದ್ದಾರೆ.
ಸನ್ನಿ ಮಾದವನ್ ಅವರ ಸಂಗೀತ, ಅಕ್ಷಯ್ ಪಿ ರಾವ್ ಅವರ ಸಂಕಲನ, ವಿಶ್ವಜಿತ್ ಬಿ ರಾವ್ ಅವರ ಛಾಯಾಗ್ರಹಣ, ರಾಜೆ ಗೌಡ ಅವರ ವಸ್ತ್ರಲಂಕಾರ, ಮದನ್ ಹರಿಣಿ ಅವರ ನೃತ್ಯ ಇರುವ ಈ ಚಿತ್ರಕ್ಕೆ ಸಂಭಾಷಣೆ ಸಿ ವಿ ಶಿವಶಂಕರ್, ವಿನಯ್ ಶಾಸ್ತ್ರೀ ಹಾಗೂ ವೆಂಕಟ್ ಭಾರದ್ವಾಜ್ ಬರೆದಿದ್ದಾರೆ.

‘ಸೆಲ್ಫಿ’ ಈ ವಾರ ತೆರೆಗೆ

ಇದು ಸೆಲ್ಫಿ ಯುಗ. ಅದೇ ಶೀರ್ಷಿಕೆ ಹೊತ್ತ ಕನ್ನಡ ಸಿನೆಮಾ ?ಸೆಲ್ಫಿ? ಈ ವಾರ ತೆರೆ ಕಾಣುತ್ತಿದೆ. ?ಸೆಲ್ಫಿ? ಕ್ಲಿಕ್ ಅಲ್ಲಿ ಕಿಕ್….ಎಂಬ ಅಡಿ ಬರಹ ಇರುವ ಈ ಚಿತ್ರ ಸಾಫ್ಟ್ವೇರ್ ಉದ್ಯೋಗಿಗಳು ರಜ ದಿನಗಳಲ್ಲಿ ಚಿತ್ರೀಕರಣ ಮಾಡಿ, ಬಿಡುಗಡೆ ಮಾಡುತ್ತಿದ್ದಾರೆ ಇದೆ ಶುಕ್ರವಾರ.
ನವೀನ್ ಕೈಪು ವಿದೇಶದಲ್ಲಿ ೧ಂ ವರ್ಷ ಇದ್ದುಕೊಂಡು ಸ್ವಂತ ಕಥೆ ರಚಿಸಿ, ವಸ್ತ್ರ ವಿನ್ಯಾಸ ಸಹ ಮಾಡಿರುವರು. ಫಣಿ ಕೋಟಪ್ರೋಲು ಈ ಹಾರರ್, ಮರ್ಡರ್ ಮಿಸ್ಟರೀ ಸಿನಿಮಾಕ್ಕೆ ಸಂಕಲನ, ನಿರ್ದೇಶನ ಹಾಗೂ ಛಾಯಾಗ್ರಹಣ ಸಹ ಮಾಡಿದ್ದಾರೆ. ಅರ್ಜುನ್ ರಾಕ್ ಅವರ ಸಂಗೀತ ಐದು ಹಾಡುಗಳಿಗೆ ಇದೆ. ತ್ರಿಲೋಕ್, ದೀಪ ಗೌಡ, ಪೂಜಾ, ಕೃಪಾಲನಿ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ. ಮೈಸೂರಿ ಟಾಕೀಸ್ ಅಡಿಯಲ್ಲಿ ಈ ಚಿತ್ರ ವಿತರಣೆ ಮಾಡುತ್ತಾ ಇರುವವರು ಜ್ಯಾಕ್ ಮಂಜುನಾಥ್ ಅವರು.

prema_geema_janedo

‘ಪ್ರೇಮ ಗೀಮ ಜಾನೆ ದೊ’ ಈ ವಾರ ಬಿಡುಗಡೆ

ಅಂದಿನ ಜನಪ್ರಿಯ ಕನ್ನಡ ಚಿತ್ರ ?ಬಣ್ಣದ ಗೆಜ್ಜೆ? ಹಾಡಿನ ಸಾಲು ?ಪ್ರೇಮ ಗೀಮಾ ಜಾನೆ ದೊ? ಈಗ ಚಲನಚಿತ್ರ ಶೀರ್ಷಿಕೆ ಆಗಿ ಪ್ರೇಕ್ಷಕರಿಗೆ ಮನರಂಜನೆ ನೀಡಲು ಈ ವಾರ ತೆರೆಗೆ ಬರುತ್ತಿದೆ ಹೊರೈಜಾನ್ ಫಿಲ್ಮ್ಸ್ ಅಡಿಯಲ್ಲಿ.
ಇದು ಕೆಂಜ ಚೇತನ್ ಕುಮಾರ್ ಅವರ ಮೊದಲ ಪ್ರಯತ್ನ. ಕಥೆ, ಚಿತ್ರಕಥೆ, ನಿರ್ದೇಶನ ಮಾಡಿರುವ ಇವರು ೯ ವರ್ಷಗಳ ಕಾಲ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ನಿರ್ದೇಶಕರ ಪ್ರಕಾರ ಯುವಕರ ಜೀವನದಲ್ಲಿ ನಾಲ್ಕು ಹಂತಗಳು. ಅದರಲ್ಲಿ ಒಂದು ಹಂತವನ್ನು ಮಾತ್ರ ಈ ಚಿತ್ರದಲ್ಲಿ ಸೆರೆಹಿಡಿಯಲಾಗಿದೆ. ಈ ಚಿತ್ರಕ್ಕಾಗಿ ೨೭ ಮಂದಿ ಹಣ ಹೂಡಿದ್ದಾರೆ. ರಾಜ್ಯ ಪ್ರಶಸ್ತಿ ವಿಜೇತ ಪೂರ್ಣಚಂದ್ರ ತೇಜಸ್ವಿ ನಾಲ್ಕು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ರುದ್ರಮುನಿ ಅವರು ಛಾಯಾಗ್ರಹಣ ಮಾಡಿದ್ದಾರೆ. ವಿಶ್ವ ಅವರ ಸಂಕಲನ, ಕೌರವ ವೆಂಕಟೇಶ್ ಅವರ ಸಾಹಸ ಈ ಚಿತ್ರಕ್ಕಿದೆ. ಗೌತಮ್, ಶ್ರುತಿ ತಿಮ್ಮಯ್ಯ, ಪಲ್ಲವಿ ಗೌಡ, ಶೀತಲ್ ಶೆಟ್ಟಿ, ರಮೇಶ್ ಭಟ್, ಪ್ರಶಾಂತ್ ಸಿದ್ದಿ, ಸುಧಾಕರ್, ಕಿಷನ್ ಸಿಂಗ್, ಸಂಗೀತ, ಮನದೀಪ್ ರಾಯ್, ಅನಂತ ವೇಲು ಹಾಗೂ ಇನ್ನಿತರರು ತಾರಾಗಣದಲ್ಲಿ ಇದ್ದಾರೆ.

ಈ ವಾರ ತೆರೆಗೆ ‘ಜಿಲ್ ಜಿಲ್

ಶ್ರೀಬೆಳಗುಲಿ ಹೊನ್ನಮ್ಮದೇವಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ವೆಂಕಟೇಶ್ ಪ್ರಸಾದ್ ಬೆಳಗುಲಿ ಅವರು ನಿರ್ಮಿಸಿರುವ ‘ಜಿಲ್ ಜಿಲ್’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಮಧು ಅವರು ನಿರ್ದೇಶನದೊಂದಿಗೆ ಈ ಚಿತ್ರಕ್ಕೆ ಸಂಗೀತವನ್ನು ನೀಡಿದ್ದಾರೆ. ರವಿಕುಮಾರ್ ಬ್ಯಾಡರಹಳ್ಳಿ ಛಾಯಾಗ್ರಹಣ, ಶಿವರಾಜ್ ಮೇಹು ಸಂಕಲನ, ಹರಿಕೃಷ್ಣ ನೃತ್ಯ ನಿರ್ದೇಶನ ಹಾಗೂ ವೇಲು ಅವರ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಧನಂಜಯ್, ಪೂವಿಶ, ರವಿಕುಮಾರ್ ಎನ್.ಎಸ್, ಸುಮತಿ ಪಾಟೀಲ್, ಮೋನಿ ಮುಂತಾದವರಿದ್ದಾರೆ.

ಈ ವಾರ ತೆರೆಗೆ ‘ನೀರ್‌ದೋಸೆ’

ಸ್ಕಂದ ಎಂಟರ್‌ಟೈನ್‌ಮೆಂಟ್ ಲಾಂಛನದಲ್ಲಿ ಪ್ರಸನ್ನ ಮತ್ತು ಶಶಿಕಲಾಬಾಲಾಜಿ ಅವರು ನಿರ್ಮಿಸಿರುವ ‘ನೀರ್‌ದೋಸೆ’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ವಿಜಯ್‌ಪ್ರಸಾದ್ ರಚನೆ ಹಾಗೂ ನಿರ್ದೇಶನದ ಈ ಚಿತ್ರದ ನಾಯಕರಾಗಿ ನವರಸ ನಾಯಕ ಜಗ್ಗೇಶ್ ಅಭಿನಯಿಸಿದ್ದಾರೆ. ಹರಿಪ್ರಿಯ, ದತ್ತಣ್ಣ, ಸುಮನ್ ರಂಗನಾಥ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಸುಜ಼್ಞಾನ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸುರೇಶ್ ಅರಸ್ ಅವರ ಸಂಕಲನವಿದೆ. ನಾರಾಯಣ ಪಿಳ್ಳೈ ಅವರು ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರಕ್ಕೆ ಹೊಸ್ಮನೆ ಮೂರ್ತಿ ಅವರ ಕಲಾ ನಿರ್ದೇಶನವಿದೆ.

Leave a Reply

Your email address will not be published. Required fields are marked *


CAPTCHA Image
Reload Image