One N Only Exclusive Cine Portal

ಈ ವಾರ ಪರದೆ ಮೇಲೆ ಪಟಾಕಿ

ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿರುವ, ಮಂಜುಸ್ವರಾಜ್ ನಿರ್ದೇಶನದ `ಪಟಾಕಿ ಈ ವಾರ ರಾಜ್ಯಾದ್ಯಂತ ಥೇಟರುಗಳಲ್ಲಿ ಸದ್ದು ಮಾಡಲಿದೆ.
ಈ ಚಿತ್ರದ ಮೂಲಕ ಗಣೇಶ್‌ಗೆ ಪೊಲೀಸ್ ಆಗುವ ಅವಕಾಶ ಬಂದಿದೆ. ಇದೊಬ್ಬ ಉಡಾಫೆ ಇನ್‌ಸ್ಪೆಕ್ಟರ್‌ನ ಕಥೆ. ಅಂಡರ್‌ಕರೆಂಟ್‌ನಲ್ಲಿ ಒಂದೊಳ್ಳೆಯ ಸಂದೇಶ ಇದೆ. ಪ್ರತಿ ಪೊಲೀಸ್‌ನೊಳಗೊಬ್ಬ ಮಗು ಇದೆ ಅನ್ನೋದನ್ನ ಈ ಚಿತ್ರದ ದೃಷ್ಯಾವಳಿಗಳ ಮೂಲಕ ನಿರ್ದೇಶಕ ಮಂಜು ಹೇಳ ಹೊರಟಿದ್ದಾರಂತೆ. ಈ ಚಿತ್ರದಲ್ಲಿ ಐದು ಹಾಡುಗಳಿವೆ. ಈ ಚಿತ್ರವನ್ನು ಎಸ್.ವಿ. ಬಾಬು ನಿರ್ಮಿಸುತ್ತಿದ್ದಾರೆ. ಗಣೇಶ್‌ಗೆ ನಾಯಕಿಯಾಗಿ ಮಾಣಿಕ್ಯ ಖ್ಯಾತಿಯ ರನ್ಯ ಇದ್ದಾರೆ. ರನ್ಯಾ ಈ ಚಿತ್ರದಲ್ಲಿ ರಿಪೋರ್ಟರ್ ಪಾತ್ರ ನಿರ್ವಹಿಸಿದ್ದಾರಂತೆ.
`ಪಟಾಕಿ` ಎಸ್.ವಿ ಪ್ರೊಡಕ್ಷನ್ಸ್‌ನ ೧೩ನೇ ಕಾಣಿಕೆ. ಗಣೇಶ್‌ಗೆ ನಾಯಕಿಯಾಗಿ ಮಾಣಿಕ್ಯ ಖ್ಯಾತಿಯ ರನ್ಯ ಇದ್ದಾರೆ. ಸಾಯಿಕುಮಾರ್, ಪ್ರಿಯಾಂಕ, ಆಶೀಶ್ ವಿದ್ಯಾರ್ಥಿ, ಧರ್ಮ, ಸಾಧುಕೋಕಿಲ, ವಿಜಯ್ ಚಂಡೂರು, ಸಂಪತ್ ಕುಮಾರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ವೆಂಕಟೇಶ್ ಅಂಗುರಾಜ್ ಅವರ ಛಾಯಾಗ್ರಹಣವಿದೆ. ವಿಶ್ವ ಸಂಕಲನ, ಪ್ರದೀಪ್ ಅಂತೋಣಿ, ರಾಜು ನೃತ್ಯ ನಿರ್ದೇಶನ, ವಿಕ್ರಂ ಮೋರ್ ಸಾಹಸ ನಿರ್ದೇಶನ ಹಾಗೂ ಮೋಹನ್ ಬಿ ಕೆರೆ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ಪ್ರಕಾಶ್ ಸಂಭಾಷಣೆ ಬರೆದಿದ್ದಾರೆ.

Leave a Reply

Your email address will not be published. Required fields are marked *


CAPTCHA Image
Reload Image