One N Only Exclusive Cine Portal

ಊರು ಬಿಟ್ಟನೇ ಪೂಜಾಪಿತ ಪವನ್ ಗಾಂಧಿ?

ಅತ್ತ ಸಾಲುಸಾಲಾಗಿ ಚಿತ್ರ ಮಾಡೋದಾಗಿ ಹೇಳಿಕೊಂಡು ಕಾಸೆತ್ತಿದ ಪೂಜಾ ಗಾಂಧಿ ಯಾರ ಕೈಗೂ ಸಿಗದೆ ಕತೆ ಬಿಡುತ್ತಿದ್ದಾಳೆ. ಅದರ ಬೆನ್ನಿಗೇ ಈ ಮಹಾನ್ ನಟಿಯ ಜನ್ಮದಾತನನ್ನು ಬೆಂಡೆತ್ತಲು ಮಹಾಲಕ್ಷ್ಮಿ ಲೇಔಟ್ ಠಾಣಾ ಪೊಲೀಸರು ಹುಡುಕಾಡಲಾರಂಭಿಸಿದ್ದಾರೆ. ಆದರೆ ಪೂಜಾಳ ಜನ್ಮದಾತ ಪವನ್ ಗಾಂಧಿಯ ಪತ್ತೆಯಿಲ್ಲ!
ಪೂಜಾಳ ಅಪ್ಪ ಪವನ್ ಗಾಂಧಿ ಮೇಲಿರೋ ದೋಖಾ ಬಾಜಿ ಕೇಸುಗಳೇನು ಒಂದೆರಡಲ್ಲ. ಆದರೆ ಇದೀಗ ನ್ಯಾಯಾಲಯದ ಅರೆಸ್ಟ್ ವಾರೆಂಟ್ ಹಿಡಿದ ಪೊಲೀಸರು ಆತನನ್ನು ಹುಡುಕಾಡುತ್ತಿರೋದಕ್ಕೆ ಕಾರಣ ಪವನ್ ಆದೀಶ್ವರ್ ಕಂಪೆನಿಗೆ ಕೈಯೆತ್ತಿರೋ ಎಂಟು ಲಕ್ಷ ರೂಪಾಯಿಯ ಪ್ರಕರಣ!
ಯಾರದ್ದೋ ಕಾಸಲ್ಲಿ ತಿರ್ಕೆ ಶೋಕಿ ಮಾಡೋದರಲ್ಲಿ ಫೇಮಸ್ಸಾದ ಪವನ್ ಗಾಂಧಿ ಈ ಹಿಂದೆ ಜಯನಗರ ಮತ್ತು ಬನಶಂಕರಿಯ ಆದೀಶ್ವರ್ ಶೋರೂಂಗಳಲ್ಲಿ ಎಂಟು ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿ ಮಾಡಿ ಆ ಮೊತ್ತಕ್ಕೆ ಚೆಕ್ ನೀಡಿದ್ದ. ಆದರೆ ಆ ಚೆಕ್ ಬೌನ್ಸ್ ಆಗಿತ್ತು. ಈ ಬಗ್ಗೆ ಶೋರೂಂ ಸಿಬ್ಬಂದಿ ಫೋನ್ ಮಾಡಿದರೂ ಪವನ್ ಸಿಕ್ಕಿರಲಿಲ್ಲ.
ಕಡೆಗೂ ಬೇರೆ ದಾರಿ ಕಾಣದ ಶೋರೂಂ ಆಡಳಿತ ಮಂಡಳಿ ೨೭ನೇ ಎಸಿಎಂಎಂ ಕೋರ್ಟಿನಲ್ಲಿ ದೂರು ದಾಖಲಿಸಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಈ ಬಗ್ಗೆ ಕೈಗೇ ಸಿಗದ ಪವನ್ ಗಾಂಧಿಯನ್ನು ಬಂಧಿಸುವಂತೆ ವಾರೆಂಟ್ ಜಾರಿ ಮಾಡಿತ್ತು.
ಆದರೆ ಈ ಅರೆಸ್ಟ್ ವಾರೆಂಟ್ ಹಿಡಿದು ಹೋದ ಪೊಲೀಸರಿಗೆ ಬಿಗ್ ಶಾಕ್ ಕಾದಿತ್ತು. ಯಾಕೆಂದರೆ ಪೂಜಾ ಗಾಂಧಿ ಪವನ್ ಗಾಂಧಿ ಸಮೇತ ವಾಸವಿದ್ದ ಅಪಾರ್ಟ್‌ಮೆಂಟ್ ಮೂರು ತಿಂಗಳ ಹಿಂದೆಯೇ ಖಾಲಿಯಾದ ವಿಚಾರ ತಿಳಿದಿತ್ತು. ಇದೀಗ ಪೂಜಾ ತಂದೆಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಈ ಮೂಲಕ ಪೂಜಾ ಕೂಡಾ ಓಡಿ ಹೋಗಿರೋ ವಿಚಾರ ಖಾತರಿಯಾದಂತಾಗಿದೆ!

Leave a Reply

Your email address will not be published. Required fields are marked *


CAPTCHA Image
Reload Image