One N Only Exclusive Cine Portal

ಏನಿದು ಮದುವೆ ಮ್ಯಾಟರ್?

ಗಾಯಕ ರಾಜೇಶ್ ಕೃಷ್ಣನ್ ಮ್ಯಾರೇಜ್ ಸ್ಟೋರಿಗೆ ಮತ್ತೊಂದು ಎಪಿಸೋಡು ಸೇರಲಿದೆಯಾ? ಹೀಗೊಂದು ಚರ್ಚೆಗೆ ಇದೀಗ ಎಲ್ಲೆಡೆ ಶುರುವಾಗಿ ಬಿಟ್ಟಿದೆ. ಇದಕ್ಕೆ ಕಾರಣವಾಗಹಿರೋದು ಸ್ಪರ್ಶ ರೇಖಾ ಮತ್ತು ರಾಜೇಶ್ ಕೃಷ್ಣನ್ ಮದುವೆಯಾಗುತ್ತಿದ್ದಾರೆಂಬ ರೂಮರ್!

ಪ್ರಜಾ ಟಿವಿ ಈ ಬಗ್ಗೆ ನೇರವಾಗಿ ರಾಜೇಶ್ ಕೃಷ್ಣನ್ ಮತ್ತು ಸ್ಪರ್ಶಾ ರೇಖಾ ಅವರನ್ನೇ ಸ್ಪಷ್ಟೀಕರಣ ಕೇಳಿದಾಗ “ನಾವು ಗುಡ್ ಫ್ರೆಂಡ್ಸ್. ನನಗೆ ಸಾಕಷ್ಟು ಜನ ಉತ್ತಮ ಗೆಳೆಯರಿದ್ದಾರೆ. ನಾವು ಯಾರೊಟ್ಟಿಗಾದರೂ ಸ್ನೇಹದಿಂದ ಇರೋದೇ ತಪ್ಪಾ? ಈಗ ಹಬ್ಬಿರೋ ರೂಮರಲ್ಲಿ ನಿಜವಿಲ್ಲ ಎಂದಷ್ಟೇ ಪ್ರತಿಕ್ರಿಯಿಸಿದ್ದಾರೆ. ಇನ್ನು ರಾಜೇಶ್ ಕೃಷ್ಣನ್ ಕಡೆಯಿಂದ ಸಮರ್ಪಕ ಉತ್ತರ ಬಂದಿಲ್ಲ ಎಂದು ಹೇಳಲಾಗುತ್ತಿದೆ.
ಅಷ್ಟಕ್ಕೂ ಈವರೆಗೆ ರಾಜೇಶ್ ಕೃಷ್ಣನ್ ಅಧಿಕೃತವಾಗಿಯೇ ಮೂರು ಮದುವೆಯಾಗಿದ್ದಾರೆ. ದುರಂತವೆಂದರೆ, ಅವೆಲ್ಲವೂ ಅಧಿಕೃತವಾಗಿಯೇ ಮುರಿದು ಬಿದ್ದದ್ದೂ ಆಗಿದೆ. ಮೂರನೇ ಮದುವೆ ಮುರಿದು ಬಿದ್ದಾಗ ಆದ ಅವಮಾನಗಳಿಂದ ಕೊಂಚ ಚೇತರಿಸಿಕೊಂಡಂತಿದ್ದ ರಾಜೇಶ್ ಇದೀಗ ಮತ್ತದೇ ಮದುವೆ ಮ್ಯಾಟರಿನ ಮೂಲಕ ಸದ್ದು ಮಾಡಿರೋದು ಸಹಜವಾಗಿಯೇ ಕುತೂಹಲ ಹುಟ್ಟಿಸಿತ್ತು. ಪುಣ್ಯಕ್ಕೆ ಪ್ರಜಾ ಟೀವಿಗೆ ಸ್ಪರ್ಶ ರೇಖಾ ನೀಡಿರುವ ಸ್ಪಷ್ಟೀಕರಣ ರಾಜೇಶ್ ಕೃಷ್ಣನ್ ಅಭಿಮಾನಿಗಳ ಮನಸ್ಸಿಗೆ ಸಮಾಧಾನ ನೀಡಿದೆ.
ಸ್ಪರ್ಶ ರೇಖಾ ಮತ್ತು ರಾಜೇಶ್ ಕೃಷ್ಣನ್ ಅವರದ್ದು ಬಹು ಕಾಲದ ಗೆಳೆತನ. ಸ್ಪರ್ಶ ಚಿತ್ರ ತೆರೆ ಕಾಣೋ ಮುಂಚಿನಿಂದಲೂ ಇವರಿಬ್ಬರ ನಡುವೆ ಸ್ನೇಹ-ವಿಶ್ವಾಸಗಳಿದ್ದವು. ಆ ಕಾಲದಿಂದ ಈಗಿನವರೆಗೂ ಇವರಿಬ್ಬರೂ ಒಟ್ಟಿಗೇ ಓಡಾಡುತ್ತಾರೆ. ಶಾಪಿಂಗ್‌ಗಾಗಿಯೂ ಒಟ್ಟೊಟ್ಟಿಗೇ ಹೋಗಿ ಬರೋದನ್ನು ರೂಢಿಸಿಕೊಂಡಿರೋದಾಗಿ ಮಾತುಗಳಿವೆ. ರೇಖಾ ಈ ಹಿಂದೆ ಬಿಗ್‌ಬಾಸ್ ಮನೆಯಲ್ಲಿರೋವಾಗಲೂ ಪದೇ ಪದೆ ರಾಜೇಶ್ ಕೃಷ್ಣನ್ ಹೆಸರು ಪ್ರಸ್ತಾಪ ಮಾಡಿದ್ದರು. ತುಂಬಾ ಹತ್ತಿರದ ಗೆಳೆಯರ‍್ಯಾರೆಂಬ ವಿಚಾರ ಬಂದಾಗಲೂ ರೇಖಾ ಹೇಳಿದ್ದದ್ದು ಇದೇ ರಾಜೇಶ್ ಕೃಷ್ಣನ್ ಹೆಸರನ್ನೇ!
ರೇಖಾ ಕೂಡಾ ಗಂಡ ಮಕ್ಕಳು ಅಂತಿರುವಾಕೆ. ಇಂಥಾ ರೇಖಾ ರಾಜೇಶ್‌ರನ್ನು ಮದುವೆಯಾಗುತ್ತಾರೆಂದರೆ ಯಾರಿಗೆ ತಾನೆ ನಂಬೋಕೆ ಸಾಧ್ಯ?
ಇಂಥಾ ರೇಖಾ ಮತ್ತು ರಾಜೇಶ್ ಕೃಷ್ಣನ್ ನಡುವೆ ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ಬಾಂಧವ್ಯ ಬೆಳೆದಿತ್ತು ಅನ್ನುವವರೂ ಇದ್ದಾರೆ. ರಾಜೇಶ್ ಕೃಷ್ಣನ್ ಗಾಗಿ ಫ್ಲ್ಯಾಟ್ ಖರೀದಿಸಲು ಖುದ್ದು ರೇಖಾ ಮೇಡಂ ಓಡಾಡಿದ್ದೇ ಇಷ್ಟೆಲ್ಲಾ ಗಾಳಿಸುದ್ದಿಗೆ ಕಾರಣವಾಗಿರಬಹುದು.
ಇವೆಲ್ಲ ಏನೇ ಇರಲಿ, ರಾಜೇಶ್ ಈಗಾಗಲೇ ಮದುವೆಗಳಿಂದಲೇ ಮಾನಸಿಕ ನೆಮ್ಮದಿ ಕಳಕೊಂಡಿರುವವರು. ರಾಜೇಶ್ ತಮ್ಮ ಮುಂದಿನ ನಿರ್ಧಾರಳನ್ನು ಎಚ್ಚರಿಕೆಯಿಂದ ಕೈಗೊಳ್ಳಲಿ ಅಂತಷ್ಟೇ ಹಾರೈಸಬಹುದು!

 

Leave a Reply

Your email address will not be published. Required fields are marked *


CAPTCHA Image
Reload Image