One N Only Exclusive Cine Portal

ಐವರು ನಾಯಕಿಯರೊಂದಿಗೆ ಕುಣಿದಾಡಲಿದ್ದಾರೆ ಶರಣ್!

ಶರಣ್ ಇದೀಗ ರ್‍ಯಾಂಬೋ 2 ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿಂದೆ ರ್‍ಯಾಂಬೋ ಚಿತ್ರ ಒಂದು ಮಟ್ಟದ ಗೆಲುವು ದಾಖಲಿಸಿತ್ತಲ್ಲಾ? ಅದನ್ನು ಮೀರಿಸುವಂಥಾ ಗೆಲುವೊಂದನ್ನು ದಾಖಲಿಸುವ ಉದ್ದೇಶದಿಂದ ಚಿತ್ರ ತಂಡ ಒಂದಷ್ಟು ಹೊಸಾ ಪ್ರಯೋಗಗಳನ್ನು ನಡೆಸಲು ಮುಂದಾಗಿದೆ.

ಅದರನ್ವಯ ಐವರು ನಾಯಕಿಯರ ಜೊತೆ ಡ್ಯುಯೆಟ್ ಹಾಡಿ ಕುಣಿದು ಕುಪ್ಪಳಿಸೋ ಭರ್ಜರಿ ಅವಕಾಶವೊಂದು ಶರಣ್‌ಗೆ ಸಿಕ್ಕಿದೆ!

ಅಟ್ಲಾಂಟಾ ನಾಗೇಂದ್ರ ನಿರ್ಮಾಣ ಮಾಡುತ್ತಿರುವ ರ್‍ಯಾಂಬೋ ೨ ಚಿತ್ರವನ್ನು ದಿಲ್‌ವಾಲಾ ಖ್ಯಾತಿಯ ಅನಿಲ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಮೂಲಕ ಮೊದಲ ಸಲ ಆಶಿಕಾ ರಂಗನಾಥ್ ಪೂರ್ಣಪ್ರಮಾಣದ ನಾಯಕಿಯಾಗಿ ಹೊರ ಹೊಮ್ಮುತ್ತಿದ್ದಾರೆ. ಆದರೆ ಒಂದು ವಿಶೇಷವಾದ ಹಾಡಿನಲ್ಲಿ ಕನ್ನಡ ಚಿತ್ರರಂಗದ ಐವರು ಮುಖ್ಯ ನಾಯಕಿಯರು ಶರಣ್ ಜೊತೆ ಹೆಜ್ಜೆ ಹಾಕಲಿದ್ದಾರೆ.

ಶ್ರುತಿ ಹರಿಹರನ್, ಮಯೂರಿ, ಶುಭಾ ಪೂಂಜಾ, ಭಾವನಾ ರಾವ್, ಸಂಚಿತಾ ಶರಣ್ ಜೊತೆ ಕುಣಿಯಲಿರೋ ನಟಿಯರು. ಅಂದಹಾಗೆ ಇವರೆಲ್ಲರೂ ಈ ಹಿಂದೆ ಶರಣ್ ಜೊತೆ ಬೇರೆ ಚಿತ್ರಗಳಲ್ಲಿ ನಾಯಕಿಯರಾಗಿದ್ದವರೆಂಬುದು ವಿಶೇಷ. ಈ ವಿಶೇಷವಾದ ಹಾಡು ಇಷ್ಟರಲ್ಲಿಯೇ ಚಿತ್ರೀಕರಣವಾಗಲಿದೆ.

ರ್‍ಯಾಂಬೋ 2 ನಲ್ಲಿಯೂ ಚಿಕ್ಕಣ್ಣ ಮತ್ತು ಶರಣ್ ಕಾಂಬಿನೇಷನ್ ಮುಂದುವರೆದಿದೆ.

Leave a Reply

Your email address will not be published. Required fields are marked *


CAPTCHA Image
Reload Image