One N Only Exclusive Cine Portal

ಕಂಗನಾ ಖರೀದಿಸಿರೋ ಬಂಗಲೆಯ ಬೆಲೆ ಎಷ್ಟು ಗೊತ್ತಾ?

ಬಾಲಿವುಡ್‌ನ ಮೋಸ್ಟ್ ಬ್ಯೂಟಿಫುಲ್ ಮತ್ತು ಬೋಲ್ಡ್ ಹೀರೋಯಿನ್ ಎಂದೇ ಖ್ಯಾತಳಾಗಿರುವಾಕೆ ಕಂಗನಾ ರನೌತ್. ಆಕೆ ಮಾಡಿರೋದು ಕೆಲವೇ ಕೆಲ ಸಿನಿಮಾಗಳಾದರೂ ಅದರಲ್ಲಿ ಆಕೆ ನಟಿಸಿರೋ ಪಾತ್ರಗಳು ಎಲ್ಲರ ಗಮನ ಸೆಳೆದಿವೆ. ಅದುವೇ ಕಂಗನಾಗೆ ಬಾಲಿವುಡ್ ಸೇರಿದಂತೆ ನಾನಾ ಕಡೆಗಳಲ್ಲಿ ಅವಕಾಶಗಳ ಮಹಾಪೂರವೇ ಹರಿದು ಬರುವಂತೆ ಮಾಡಿದೆ!
ಸದ್ಯ ಕಂಗನಾ ಬಾಲಿವುಡ್‌ನ ಬಹು ಬೇಡಿಕೆಯ ನಟಿ. ತುಂಬಾ ಕಡಿಮೆ ಅವಧಿಯಲ್ಲಿಯೇ ಚೆಂದಗೆ ಶೈನಪ್ ಆಗಿ ಕೈತುಂಬಾ ಸಂಭಾವನೆ ಪಡೆಯೋ ಈಕೆಯನ್ನು ಕಂಡು ಉರಿದುಕೊಳ್ಳುವವರಿಗೇನೂ ಕಡಿಮೆ ಇಲ್ಲ. ಈಗ ಹೇಳ ಹೊರಟಿರೋ ಸುದ್ದಿ ಅಂಥ ಮಂದಿಯ ಉರಿಯನ್ನು ಮತ್ತಷ್ಟು ಉಲ್ಬಣ ಮಾಡುವಂತಿದೆ!
ಇದು ಕಂಗನಾ ಖರೀದಿಸಿರೋ ಹೊಸಾ ಬಂಗಲೆಯ ಬಾಬತ್ತಿನ ಮ್ಯಾಟರ್. ಅಂದಹಾಗೆ ಕಂಗನಾ ಹೊಸದಾಗಿ ಬಾಂದ್ರಾದ ಪಾಲಿ ಗಿಲ್‌ನಲ್ಲೊಂದು ಬಂಗಲೆ ಖರೀದಿಸಿದ್ದಾಳೆ. ಅದರ ಮೊತ್ತ ೨೦.೭ ಕೋಟಿ. ಒಂದು ಚದರಡಿಗೆ ಅರವತ್ತೇಳೂ ಚಿಲ್ಲರೆ ಸಾವಿರದಷ್ಟು ಕಾಸು ಕೊಟ್ಟು ಕಂಗನಾ ಈ ಬಂಗಲೆ ಖರೀದಿಸಿದ್ದಾಳಂತೆ!
ಇದುವರೆಗೂ ಭಿನ್ನವಾದ ಪಾತ್ರಗಳು ಮತ್ತು ಅಷ್ಟೇ ನೇರವಾದ ಹೇಳಿಕೆಗಳಿಂದ ಖ್ಯಾತಳಾದ ಕಂಗನಾ ಇದೀಗ ಹೊಸಾ ಬಂಗಲೆ ಸೇರಿಕೊಂಡು ಕಥೆ ಬರೆಯೋ ಕೆಲಸಕ್ಕೆ ಚಾಲನೆ ನೀಡಲಿದ್ದಾಳಂತೆ. ಅದಾದ ಬಳಿಕ ಆ ಕಥೆಯನ್ನ ಚಿತ್ರಕ್ಕೆ ಒಗ್ಗಿಸಿ ಅದನ್ನು ತಾನೇ ನಿರ್ದೆಶನ ಮಾಡಲಿದ್ದಾಳಂತೆ. ಕಂಗನಾಳ ಈ ಹೊಸಾ ಚಿತ್ರಕ್ಕಾಗಿ ಬಾಲಿವುಡ್ ಮಂದಿ ಕಾತರರಾಗಿದ್ದಾರೆ!

Leave a Reply

Your email address will not be published. Required fields are marked *


CAPTCHA Image
Reload Image