One N Only Exclusive Cine Portal

ಕಟಕ ಚಿತ್ರದ ಟೀಸರ್ ಅನಾವರಣ

ಉಗ್ರಂ ಚಿತ್ರದ ಸಂಗೀತ ಮತ್ತು ಹಿನ್ನೆಲೆ ಸಂಗೀತದ ಮೂಲಕವೇ ಖ್ಯಾತಿ ಗಳಿಸಿಕೊಂಡವರು ರವಿ ಬಸ್ರೂರ್. ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯ ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿರೋ ರವಿ ಇದೀಗ ನಿರ್ದೇಶಕನಾಗಿಯೂ ಹೊಸಾ ಅವತಾರವೆತ್ತಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿ ಬಂದಿರೋ ಕಟಕ ಚಿತ್ರದ ಟೀಸರ್ ರೇಣುಕಾಂಬ ಸ್ಟುಡಿಯೋದಲ್ಲಿ ಬಿಡುಗಡೆಯಾಗಿದೆ.

ಎನ್ ಎಸ್ ರಾಜ್‌ಕುಮಾರ್ ನಿರ್ಮಾಣ ಮಾಡಿರುವ ಈ ಚಿತ್ರದ ಟೀಸರ್ ಹದಿಮೂರು ಭಾಷೆಗಳಲ್ಲಿ ತಯಾರಾಗಿರುವುದು ವಿಶೇಷ ಮತ್ತು ದಾಖಲೆ. ಇಂಥಾದ್ದೊಂದು ವಿಶೇಷ ಟೀಸರ್ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್, ನಿರ್ದೇಶಕ ಸಂತೋಷ್ ಆನಂದರಾಮ್ ಮತ್ತು ಹೊಂಬಾಳೆ ಫಿಲಂಸ್‌ನ ಕಾರ್ತಿಕ್ ಗೌಡರ ಸಮ್ಮುಖದಲ್ಲಿ ಅನಾವರಣಗೊಂಡಿದೆ.
ಶೀರ್ಷಿಕೆಯಿಂದಲೇ ಗಮನ ಸೆಳೆದಿರೋ ಈ ಚಿತ್ರ ಬ್ಲಾಕ್ ಮ್ಯಾಜಿಕ್ ಎಂಬ ನಿಗೂಢದ ಸುತ್ತ ಹೆಣೆದಿರುವ ರೋಚಕವಾದ ಕಥಾ ಹಂದರ ಹೊಂದಿದೆಯಂತೆ. ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ಅಶೋಕ್, ಉಗ್ರಂ ಮಂಜು ಮತ್ತು ಸ್ಪಂದನ ನಟಿಸಿದ್ದಾರೆ. ಬೇಬಿ ಶ್ಲಾಘ ಬಹುಮುಖ್ಯವಾದ ಪತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾಳೆ.
ಈ ಹಿಂದೆ ಉಗ್ರಂ ಸಿನಿಮಾ ಭಾಗವಾಗಿದ್ದ ರವಿ ಬಸ್ರೂರ್ ನಿರ್ದೇಶನದ ಪಟ್ಟುಗಳನ್ನು ಮಾತ್ರವಲ್ಲದೇ ಸಿಂಪ್ಲಿ ಸಿಟಿಯನ್ನೂ ಕೂಡಾ ನಿರ್ದೇಶಕ ಪ್ರಶಾಂತ್ ನೀಲ್ ಅವರಿಂದಲೇ ಕಲಿತಿದ್ದರಂತೆ. ಕಟಕ ಚಿತ್ರಕ್ಕೆ ಆ ಅಭಿಮಾನದಿಂದಲೇ ಪ್ರಶಾಂತ್ ಅವರಿಂದ ಒಂದು ಹಾಡನ್ನೂ ಹಾಡಿಸಿದ್ದಾರಂತೆ.
ಈಗಾಗಲೇ ಕುಂದಾಪುರ ಕನ್ನಡದಲ್ಲಿ ಒಂದು ಚಿತ್ರವನ್ನು ನಿರ್ದೇಶನ ಮಾಡಿ, ಹೀರೋ ಆಗಿಯೂ ನಟಿಸಿ ಗೆದ್ದಿರೋ ರವಿ ಬಸ್ರೂರು ಕಟಕ ಚಿತ್ರದ ಮೂಲಕ ಪೂರ್ಣಪ್ರಮಾಣದ ನಿರ್ದೇಶಕರಾಗಿ ಹೊರ ಹೊಮ್ಮಿದ್ದಾರೆ.

Leave a Reply

Your email address will not be published. Required fields are marked *


CAPTCHA Image
Reload Image