One N Only Exclusive Cine Portal

`ಕಯಂ ಕುಲಂ ಕೂಚುನ್ನಿ ಚಿತ್ರದಲ್ಲಿ ಪ್ರಿಯಾಂಕ ನಾಯಕಿ

ಕನ್ನಡದಲ್ಲಿ ಒಂದೆರಡು ಚಿತ್ರಗಳಲ್ಲಿ ನಟಿಸುತ್ತಲೇ ಬೇರೆ ಭಾಷೆಯ ಚಿತ್ರರಂಗಳತ್ತ ಕೈ ಚಾಚೋದು ಕನ್ನಡ ಚಿತ್ರರಂಗದ ಬಹು ಕಾಲದ ಟ್ರೆಂಡು. ಆದರೆ ಕೆಲ ನಟಿಯರ ಪಾಲಿಗೆ ಅವರ ಪ್ರತಿಭೆಯೇ ಬೇರೆ ಭಾಷೆಗಳ ಚಿತ್ರರಂಗದಲ್ಲಿಯೂ ಅವಕಾಶದ ಹೆಬ್ಬಾಗಿಲು ತೆರೆದುಕೊಳ್ಳುವಂತೆ ಮಾಡುತ್ತದೆ. ಈ ಸಾಲಿಗೀಗ ಈ ಹಿಂದೆ ಗಣಪ ಚಿತ್ರದ ಮೂಲಕ ಗಮನ ಸೆಳೆದಿದ್ದ ಪ್ರಿಯಾಂಕ ತಿಮ್ಮೇಶ್ ಕೂಡಾ ಸೇರಿಕೊಂಡಿದ್ದಾರೆ.
ಸಂತೋಷ್ ಬಾಲರಾಜ್ ನಾಯಕನಾಗಿ ನಟಿಸಿದ್ದ ಗಣಪ ಚಿತ್ರದ ನಾಯಕಿಯಾಗಿ ಪ್ರಪ್ರಥಮವಾಗಿ ಪರಿಚಯವಾದವರು ಪ್ರಿಯಾಂಕಾ. ಆದರೆ ಈ ಹುಡುಗಿ ಮೊದಲ ಚಿತ್ರದಲ್ಲಿಯೇ ಚೆಂದದ ಅಭಿನಯ ನೀಡಿದ್ದರಿಂದ ಸಾಲು ಸಾಲಾಗಿ ಅವಕಾಶಗಳು ಸಿಗುತ್ತಲೇ ಸಾಗಿದ್ದವು. ಇತ್ತೀಚೆಗೆ ತೆರೆ ಕಂಡಿದ್ದ ಗಣೇಶ್ ಅಭಿನಯದ ಪಟಾಕಿ ಚಿತ್ರದಲ್ಲಿಯೂ ಪ್ರಿಯಾಂಕಾ ಗಣೇಶ್ ತಂಗಿಯಾಗಿ ನಟಿಸಿದ್ದರು. ಭೀಮಸೇನ ನಳ ಮಹರಾಜ ಚಿತ್ರಕ್ಕೂ ಈಕೆ ಆಯ್ಕೆಯಾಗಿ ಆ ಚಿತ್ರದ ಶೂಟಿಂಗ್ ಕೂಡಾ ನಡೆಯುತ್ತಿದೆ.
ಹೀಗೆ ಬ್ಯುಸಿಯಾಗಿರೋವಾಗಲೇ ಮಲೆಯಾಳಂ ಚಿತ್ರರಂಗದ ಕಡೆಯಿಂದ ಬೆರಗಾಗುವಂಥಾ ಅವಕಾಶವೊಂದು ಬಂದಿದೆಯಂತೆ. ಈ ಬಗ್ಗೆ ಅವರು ಅಧಿಕೃತವಾಗಿ ಮಾತಾಡಿಲ್ಲವಾದರೂ ಪ್ರಿಯಾಂಕಾ ಮಾಲಿವುಡ್ಡಿಗೆ ಹಾರಲು ಅಣಿಯಾಗಿ ನಿಂತಿದ್ದಾರೆ. ಅಷ್ಟಕ್ಕೂ ಇದೇನೂ ಸಣ್ಣ ಅವಕಾಶವೇನಲ್ಲ. ಮಾಲಿವುಡ್ ಯಂಗ್ ಸ್ಟಾರ್ ನಿವಿನ್ ಜೊತೆ ನಾಯಕಿಯಾಗಿ ನಟಿಸೋ ಅವಕಾಶ ಪ್ರಿಯಾಂಕಾಗೊಲಿದಿದೆ.
ಬೆಂಗಳೂರು ಡೇಸ್, ಪ್ರೇಮಂ ಮುಂತಾದ ಚಿತ್ರಗಳ ಮೂಲಕ ನಿವಿನ್ ಈಗಾಗಲೇ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. ಅವರು ಇದೀಗ ನಟಿಸುತ್ತಿರೋ ಹೊಸಾ ಚಿತ್ರ `ಕಯಂ ಕುಲಂ ಕೂಚುನ್ನಿ. ಈ ಚಿತ್ರ ಹತ್ತೊಂಭತ್ತನೇ ಶತಮಾನದಲ್ಲಿ ಶ್ರೀಮಂತರಿಂದ ಹಣ ಲಪಟಾಯಿಸಿ ಅದನ್ನು ಬಡ ಬಗ್ಗರಿಗೆ ಹಂಚುತ್ತಿದ್ದ ಕೂಚುನ್ನಿ ಎಂಬಾತನ ಜೀವನ ಕಥೆಯನ್ನಾಧರಿಸಿದೆಯಂತೆ. ಈ ಚಿತ್ರದಲ್ಲಿ ಪ್ರಿಯಾಂಕಾ ನಾಯಕಿಯಾಗಿ ಆಯ್ಕೆಯಾಗಿರೋದು ಬಹುತೇಕ ಖಚಿತ.
ಅಂದಹಾಗೆ ರಾಬಿನ್ ಹುಡ್ ಮಾದರಿಯಲ್ಲಿ ಮೂಡಿ ಬರಲಿರೋ ಈ ಚಿತ್ರವನ್ನು ಮೂರು ಬಾರಿ ಕೇರಳ ರಾಜ್ಯ ಪ್ರಶಸ್ತಿ ಪಡೆದಿರೋ ನಿರ್ದೇಶಕ ಆಂಡ್ರೀವ್ಸ್ ನಿರ್ದೇಶನ ಮಾಡಲಿದ್ದಾರಂತೆ.

Leave a Reply

Your email address will not be published. Required fields are marked *


CAPTCHA Image
Reload Image