One N Only Exclusive Cine Portal

ಕಲ್ಕಿ ಕನ್ನಡದಲ್ಲಿ ಸೀರಿಯಲ್ ಗಳ ಕಲರವ…!

‘ಕಲ್ಕಿ ಕನ್ನಡ’ ದಲ್ಲಿ ಅವಳಿ ಧಾರಾವಾಹಿಗಳು

ವೀಕ್ಷಕರಿಗೆ ಹೊಚ್ಚ ಹೊಸತನ, ತಾಜಾತನ, ನಮ್ಮ ಕನ್ನಡತನದ ಸಂಸ್ಕೃತಿಯನ್ನು, ಉಳಿಸಿಕೊಂಡು ಮನರಂಜನೆಯ ರಸದೌತಣವನ್ನು ವೀಕ್ಷಕರ ಮನ ಮನೆಗೆ ನೀಡುತ್ತಿರುವ ‘ಕಲ್ಕಿ ಕನ್ನಡ’ ಧಾರ್ಮಿಕ, ಆಧ್ಯಾತ್ಮಿಕ, ಚಿಂತನೆಗಳೊಂದಿಗೆ ಭಗವಂತನ ದರ್ಶನ, ಭಾವನೆಗಳಿಗೆ ಜೀವತುಂಬುವ, ಕಲ್ಪನೆಗೂ ಮೀರಿದ ಕಥೆಗಳು/ಧಾರವಾಹಿಗಳು ಸ್ವಂತಿಕೆಯ ಸ್ವಚ್ಛ ಮನರಂಜನೆಯನ್ನು ಒಳಗೊಂಡ ಕುಟುಂಬ ಸಮೇತರಾಗಿ ಮನೆಯಲ್ಲೇ ಕುಳಿತು ನೋಡುವಂತಹ, ಕನ್ನಡತನದ ಬೇರಿನೊಂದಿಗೆ-ಮನರಂಜನೆಯನ್ನು ನೀಡುತ್ತಿರುವ ಕಲ್ಕಿ ಕನ್ನಡ ವಾಹಿನಿಯು ವೀಕ್ಷ್ಚಕರಿಗೆ ಇನ್ನೆರಡು ಹೊಸ ಧಾರಾವಾಹಿಗಳನ್ನು ಜನವರಿ ೧೧ ರಿಂದ ಪ್ರಸಾರ ಮಾಡುತ್ತಿದೆ. ಒಂದು “ಅಮ್ನೋರು” ಸೋಮವಾರ ದಿಂದ ಶುಕ್ರವಾರ ರಾತ್ರಿ ೮ಕ್ಕೆ, ಇನ್ನೊಂದು “ನೀ ಇರಲು ಜೊತೆಯಲಿ” ಸೋಮವಾರ ದಿಂದ ಶುಕ್ರವಾರ ರಾತ್ರಿ ೮.೩೦ಕ್ಕೆ ಪ್ರಸಾರವಾಗಲು ಸಿದ್ಧವಾಗಿದೆ.

ಮಾಧ್ಯಮ ಎಂದ ತಕ್ಷಣ ಎಲ್ಲರೂ ಯೋಚಿಸೋದು ಹೊಸತನ.., ಹೊಸ ಯೋಚನೆ ಹಾಗೂ ವಿಭಿನ್ನ ಮನರಂಜನೆ. ಇಂತಹ ಒಂದು ಮನರಂಜನೆ ಕಾರ್ಯಕ್ರಮಗಳನ್ನು ವೀಕ್ಷಕರಿಗೆ ನೀಡುವುದು ಮುಖ್ಯ ಗುರಿಯಾಗಿದೆ ಎನ್ನುತ್ತಾರೆ ವೈಟ್ ಹಾರ್ಸ್ ನೆಟ್‌ವರ್ಕ್ ಸರ್ವೀಸಸ್ ಸಂಸ್ಥೆಯ ಸಂಸ್ಥಾಪಕರು ಹಾಗೂ ವ್ಯವಸ್ಥಾಪಕ ನಿರ್ದೆಶಕರಾದ ಶ್ರೀ. ಪಿ ಕೈಲಾಸಂ ರವರು. ’ಕಲ್ಕಿ ಕನ್ನಡ’. ಹೊಸ ತಂತ್ರಜ್ಞಾನಗಳಿಂದ ಕೂಡಿದ ಉಪಕರಣಗಳು, ಕರ್ನಾಟಕದ ಕಿರುತೆರೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಹೆಚ್.ಡಿ ಕ್ವಾಲಿಟಿವುಳ್ಳ ಮನರಂಜನೆಯ ಕಾರ್ಯಕ್ರಮಗಳನ್ನು ಕಿರುತೆರೆಯ ಮೇಲೆ ತಂದಿದೆ. ವಿಭಿನ್ನ ರಿತಿಯಲ್ಲಿ ನಮ್ಮ ಮನರಂಜನಾ ಕಾರ್ಯಕ್ರಮಗಳನ್ನು ಎಲ್ಲ ವರ್ಗದ ವೀಕ್ಷಕರಿಗೆ ನೀಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಕುಟುಂಬ ಸಮೇತರಾಗಿ ನೋಡುವಂತಹ ಅದ್ಧೂರಿತನದ ರಿಯಾಲಿಟಿ ಶೋಗಳು, ಮನಮಿಡಿಯುವ ಧಾರವಾಹಿಗಳು ನಿಮ್ಮ ಮನ ಮನೆಗೆ ಬರಿಲಿವೆ. ಎಲ್ಲ ಕಾರ್ಯಕ್ರಮಗಳನ್ನು ನೋಡಿ ಕಲ್ಕಿ ಕನ್ನಡ ವಾಹಿನಿಯನ್ನು ಬೆಳೆಸಿ ಎನ್ನುತ್ತಾರೆ ವೈಟ್ ಹಾರ‍್ಸ್ ನೆಟ್‌ವರ‍್ಕ್ ಸಂಸ್ಥೆಯ ಸಂಸ್ಥಾಪಕರು ಹಾಗೂ ವ್ಯವಸ್ಥಾಪಕ ನಿರ್ದೆಶಕರಾದ ಪಿ ಕೈಲಾಸಂರವರು.

ಅಮ್ನೋರು :
ನಂಬಿಕೆ, ಮೂಢನಂಬಿಕೆ ಹಾಗೂ ದುಷ್ಟ ಶಕ್ತಿ – ಶಿಷ್ಟ ಶಕ್ತಿಗಳ ನಡುವೆ ನಡೆಯುವ ಹೋರಾಟದ ಒಂದು ಪ್ರತಿಬಿಂಬವಾಗಿ ರಾಮಾಪುರ ಎಂಬ ಗ್ರಾಮದಿಂದ ಕಥೆ ಶುರುವಾಗುತ್ತದೆ. ನಾಯಕನಾಗಿ ಬರುವ ವಿಜಯ್ ಮೂಢನಂಬಿಕೆಯ ವಿರೋಧಿ, ಅಂದ್ರೆ ಆತ ದೇವರೇ ಇಲ್ಲ ಎಂದು ಹೇಳುವ ಮನೋಭಾವದ ವ್ಯಕ್ತಿ ಅಲ್ಲ, ಇನ್ನೂ ಈ ಕಥೆಯಲ್ಲಿ ಬರುವ ನಾಯಕಿ ಶ್ರೀದೇವಿ ಮಲತಾಯಿಯ ವಿಶ್ವವ್ಯೂಹದಲ್ಲಿ ಸಿಲುಕಿ ತನ್ನ ಭವಿಷ್ಯವನ್ನು ಕಟ್ಟಿಕೊಳ್ಳಲು ಹೋರಾಟ ನಡೆಸುತ್ತಿರುತ್ತಾಳೆ, ಇವಳಿಗೆ ದೇವರ ಮೇಲೆ ತುಂಬಾನೆ ನಂಬಿಕೆ ಇರುತ್ತದೆ. ಈ ಎರಡು ಪಾತ್ರಗಳ ನಡುವೆ ಒಂದು ಲೌಕಿಕವಾದ ಶಕ್ತಿ ಉದ್ಭವಿಸುತ್ತದೆ, ಹಿಮಾಲಯದಲ್ಲಿರುವ ಒಬ್ಬ ದಾನವ ಮನೋಭಾವದ ಯೋಗಿಗೆ ಪ್ರಪಂಚದಲ್ಲಿ ತಾನು ಯಾವುದೋ ಸಾಧನೆಯನ್ನು ಮಾಡಬಲ್ಲೆ ಎಂದು ರಾಮಾಪುರಕ್ಕೆ ಬರುತ್ತಾನೆ, ತಮ್ಮ ಸಾಧನೆಗೋಸ್ಕರ ಬದುಕನ್ನು ಕಟ್ಟಿಕೊಳಲ್ಲೂ ಹೋರಾಟವನ್ನು ನಡೆಸುತ್ತಿರುತ್ತಾರೆ. ಶಿಷ್ಠರು ಅಮ್ಮನವರ ಆಶಿರ್ವಾದದಿಂದ ಹೇಗೆ ಯಶಸ್ಸು ಸಾಧಿಸುತ್ತಾರೆ ಹಾಗೇ ದುಷ್ಟರಿಗೆ ಹೇಗೆ ಪಾಠವನ್ನು ಕಲಿಯುತ್ತಾರೆ ಅನ್ನೋದು “ಅಮ್ನೋರು”ಕಥೆಯ ಸಾರಾಂಶ. ಇದು ಪ್ರತಿ ಸೋಮವಾರ ದಿಂದ ಶುಕ್ರವಾರ ರಾತ್ರಿ ೮ಕ್ಕೆ ಕಲ್ಕಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

ನೀ ಇರಲು ಜೊತೆಯಲ್ಲಿ :
ನೀಲಿ ನಿರ್ಮಲ ಮನಸಿನ ಮುದ್ದು ಮಗು ಹುಟ್ಟಿದಾಗ ತಾಯಿಯನ್ನು ಕಳೆದುಕೊಂಡು ತಾಯಿಗಿಂತ ಹೆಚ್ಚಾಗಿ ಮಮಕಾರದಿಂದ ಪ್ರೀತಿಸೋ ಕಥಾನಾಯಕಿ ಗುಬ್ಬಿ ಅನ್ನೋ ಶಾರದ ಮಡಿಲಲ್ಲಿ ಮುದ್ದು ಮಗಳಾಗಿ ಬೆಳಿತಾ ಪ್ರೀತಿಯಿಂದ ಅವಳನ್ನು ಅಮ್ಮ ಎಂದು ಕರೆಯುತ್ತಾಳೆ. ರಾಕ್ಷಸನಂತಹ ತಂದೆಗೆ ಹೆದರಿ ನೀಲಿ ಒಂದು ದಿನ ಮನೆಬಿಟ್ಟು ಓಡಿ ಹೋಗ್ತಾಳೆ, ಹೋದವಳು ಸಿಗೋದೆ ನಮ್ಮ ಕಥಾನಾಯಕ ಹೆತ್ತೋರ ಸ್ಥಾನದಲ್ಲಿ ನೀಲಿಗೆ ತಾಯಿ ಆಗಿರೋ ಶಾರದ ಮತ್ತೆ ತಂದೆ ಆಗೋಕೆ ತಯಾರಾಗೋ ಪೃಥ್ವಿ ಇವರಿಬ್ಬರು ಬಾಳಸಂಗಾತಿಗಳಾಗುತ್ತಾರೆ. ಪ್ರೀತಿಯಿಂದ ಪ್ರೀತಿಗಾಗಿ ಬೆಸೆಯೋ ಈ ಪ್ರೀತಿಯ ಸಂಬಧಗಳ ಮಧ್ಯೆ ವಿಧಿ ಅನ್ನೋ ಬಿರುಗಾಳಿ ಬೀಸುತ್ತದೆ, ಪ್ರೀತಿಯ ಜೀವಗಳು ಒಂದೇ ಮನೆಯಲ್ಲಿ ಅಪರಿಚಿತವಾಗುತ್ತಾ, ಪ್ರೀತಿಯ ಜೀವನವನ್ನು ಹಂಬಲಿಸುವ ಅಪರೂಪದ ಕಥೆಯೇ “ನೀ ಇರಲು ಜೊತೆಯಲ್ಲಿ” ಸೋಮವಾರ ದಿಂದ ಶುಕ್ರವಾರ ರಾತ್ರಿ ೮.೩೦ಕ್ಕೆ ಕಲ್ಕಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಮಹಾಸಂಕಲ್ಪ : ಶೀಘ್ರದಲ್ಲಿ
ಕನ್ನಡಕಿರುತೆರೆ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಭಕ್ತಿ ಪ್ರಧಾನ ರಿಯಾಲಿಟಿ ಶೋ “ಮಹಾಸಂಕಲ್ಪ” ಹರಕೆ ನಿಮ್ಮದು, ಮನವರಿಕೆ ನಮ್ಮದು ಅಡಿಬರಹದಲ್ಲಿ ಕಲ್ಕಿ ಕನ್ನಡ ವಾಹಿನಿಯಲ್ಲಿ ಶೀಘ್ರದದಲ್ಲಿ ಪ್ರಸಾರವಾಗಲಿದೆ. ಈಗಾಗಲೇ ಹಲವಾರು ವಾಹಿನಿಗಳಲ್ಲಿ ರಿಯಾಲಿಟಿ ಶೋ ಮತ್ತು ಧಾರಾವಾಹಿಗಳು, ಚಲನಚಿತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಓರೆಗೆ ಹಚ್ಚಿ ರಾಜ್ಯದ್ಯಂತ ಅಪಾರ ಜನಪ್ರಿಯರಾಗಿರುವ ಕಾಳಿಸ್ವಾಮಿ ಶ್ರೀ ಋಷಿಕುಮಾರ ಮಹಾಸಂಕಲ್ಪ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ. ೬೦ ನಿಮಿಷದ ಈ ಕಾರ್ಯಕ್ರಮ ೨೬ ಕಂತುಗಳಲ್ಲಿ ಪ್ರಸಾರವಾಗಲಿದೆ. ಪ್ರತಿಯೊಂದು ಕಂತಿನಲ್ಲಿ ರಾಜ್ಯದ ನಾನಾ ಭಾಗಗಳಿಂದ ಆಯ್ಕೆ ಮಾಡಲಾದ ನಾಲ್ಕು ಸ್ಪರ್ಧಾಳುಗಳು ೧೮-೩೫ ವರ್ಷದೊಳಗಿನವರು ತಮ್ಮ ತಂದೆ-ತಾಯಿಗಳ ಅಥವಾ ಹಿರಿಯರ ಹರಕೆ ತೀರಿಸಲು ವಿವಿಧ ಟಾಸ್ಕ್‌ಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಕಂತಿನ ವಿಜೇತ ಸ್ಪರ್ಧಾಳುವಿನ ತಂದೆ-ತಾಯಿಗಳ ತೀರ್ಥಕ್ಷೇತ್ರದ ಪ್ರಾಯೋಜಕತ್ವದ ವ್ಯವಸ್ಥೆಯನ್ನು ಕಲ್ಕಿ ಕನ್ನಡ ವಾಹಿನಿ ಮಾಡಲಿದೆ.

Leave a Reply

Your email address will not be published. Required fields are marked *


CAPTCHA Image
Reload Image