One N Only Exclusive Cine Portal

ಕವಿತಾ ಲಂಕೇಶ್ ಅವರ ‘ಸಮ್ಮರ್ ಹಾಲಿಡೇಸ್!

ಪಿ.ಲಂಕೇಶ್ ಕನ್ನಡ ಸಿನಿಮಾರಂಗ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿದ್ದವರು. ಅವರ ಮಕ್ಕಳಾದ ಕವಿತಾ ಮತ್ತು ಇಂದ್ರಜಿತ್ ಕೂಡಾ ಚಿತ್ರರಂಗದಲ್ಲೇ ನೆಲೆ ಕಂಡುಕೊಂಡವರು. ಈಗ ಲಂಕೇಶರ ಮೊಮ್ಮಕ್ಕಳೂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಸದಾ ಒಂದಿಲ್ಲೊಂದು ಹೊಸಾ ಪ್ರಯೋಗಗಳಲ್ಲಿ ನಿರತರಾಗಿರುವವರು ನಿರ್ದೇಶಕಿ ಕವಿತಾ ಲಂಕೇಶ್. ಅವರೀಗ ಒಂದು ಹೊಸಾ ಬಗೆಯ ಮಕ್ಕಳ ಚಿತ್ರವೊಂದನ್ನು ನಿರ್ದೇಶಿಸಲು ತಯಾರಾಗಿದ್ದಾರೆ. ಈ ಮೂಲಕ ಅವರ ಮಗಳು ಇಶಾ ಕೂಡಾ ಚಿತ್ರರಂಗಕ್ಕೆ ಅಡಿಯಿರಿಸುತ್ತಿದ್ದಾಳೆ. ಈ ಚಿತ್ರಕ್ಕೆ ಸಮ್ಮರ್ ಹಾಲಿಡೇಸ್ ಅಂತಲೂ ಹೆಸರಿಡಲಾಗಿದೆ. ಈ ಚಿತ್ರ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ತಯಾರಾಗುತ್ತಿದೆ.
ಒಂದು ಹೊಸಾ ಬಗೆಯ ಕಥಾ ವಸ್ತು ಮಾಡಿಕೊಂಡಿರುವ ಕವಿತಾ ಅವರು ಈ ಮಕ್ಕಳ ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ದೇಶನ ಮಾಡುತ್ತಿರೋದು ವಿಶೇಷ. ಅಂದ ಹಾಗೆ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕವಿತಾರ ಪುತ್ರಿ ಇಶಾ ಮತ್ತು ನಿರ್ದೇಶಕ ಇಂದ್ರಜಿತ್ ಲಂಕೇಶರ ಮಗ ಸಮರ್‌ಜಿತ್ ಇರಲಿದ್ದಾರೆ.
ಈಗಾಗಲೇ ವಿಭಿನ್ನವಾದ ಬೇಸಿಗೆ ಶಿಬಿರ ಮುಂತಾದವುಗಳ ಮೂಲಕ ಎಳೆಯರ ಜೊತೆ ಒಡನಾಟ ಹೊಂದಿರೋ ಕವಿತಾ ಲಂಕೇಶ್ ಅವರಿಗೆ ಮಕ್ಕಳ ಮನೋಲೋಕ ಚಿರಪರಿಚಿತ. ಆದ್ದರಿಂದಲೇ ಈ ವರೆಗೆ ಬಾರದಿರುವಂಥಾ ಕುತೂಹಲಕಾರಿ ಕಥೆಯೊಂದನ್ನು ಹೆಣೆದು ಸಮ್ಮರ್ ಹಾಲಿಡೇಸ್ ಚಿತ್ರಕ್ಕೆ ಚಾಲನೆ ಕೊಡಲಾಗಿದೆ.
ಪಿ.ಲಂಕೇಶ್ ಕನ್ನಡ ಸಿನಿಮಾರಂಗ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿದ್ದವರು. ಅವರ ಮಕ್ಕಳಾದ ಕವಿತಾ ಮತ್ತು ಇಂದ್ರಜಿತ್ ಕೂಡಾ ಚಿತ್ರರಂಗದಲ್ಲೇ ನೆಲೆ ಕಂಡುಕೊಂಡವರು. ಈಗ ಲಂಕೇಶರ ಮೊಮ್ಮಕ್ಕಳೂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನೋಡಲೂ ಅಷ್ಟೇ ಮುದ್ದಾಗಿರುವ ಈ ಮಕ್ಕಳು ಮುಂದೆ ಈ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡುವಂತಾಗಲಿ…

Leave a Reply

Your email address will not be published. Required fields are marked *


CAPTCHA Image
Reload Image