One N Only Exclusive Cine Portal

ಕಾರುಣ್ಯಾ ರಾಮ್ ವಿರುದ್ಧ ಅನಿಕಾ ಕಂಪ್ಲೇಂಟ್?

ಕಳೆದ ಹನ್ನೊಂದು ದಿನಗಳ ಹಿಂದಷ್ಟೇ ಕಿರುತೆರೆ ನಟಿ ಅನಿಕಾಗೆ ಸಚಿನ್ ಎನ್ನುವ ಉದ್ಯಮಿಯೊಂದಿಗೆ ಮದುವೆ ನಿಶ್ಚಿತಾರ್ಥವಾಗಿತ್ತು. ನಂತರ ಅನಿಕಾಳ ಫೇಸ್‌ಬುಕ್ ಪೇಜಿನಲ್ಲಿ ಈ ಸಮಾರಂಭದ ಫೋಟೋಗಳೂ ರಾರಾಜಿಸಿದ್ದವು. ಆದರೆ ದಿಢೀರನೆ ಆ ಫೋಟೋಗಳೆಲ್ಲಾ ಡಿಲೀಟಾಗಿದ್ದೇ ಅನುಮಾನಕ್ಕೆ ಕಾರಣವಾಗಿತ್ತು. ಈ ಸುಳಿವಿನ ಆಧಾರಮೇಲೆ ಹುಡುಕಾಡಲಾಗಿ ಸಿನಿಬಜ಼್‌ಗೆ ದೊರೆತ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ…

ಲಕ್ಷ್ಮಿ ಬಾರಮ್ಮ ಸೀರಿಯಲ್ ನೋಡೋ ಪ್ರೇಕ್ಷಕರಿಗೆ ಅದರಲ್ಲಿನ ಕುಮುದಾ ಎಂಬ ವಿಲನ್ ಕ್ಯಾರೆಕ್ಟರ್ ಚಿರಪರಿಚಿತ. ಆದರೆ ಪಕ್ಕಾ ನೆಗೆಟಿವ್ ಅಂಶಗಳ ಈ ಪಾತ್ರದಿಂದಲೇ ಕುಮುದಾ ಆಗಿ ಪ್ರೇಕ್ಷಕರನ್ನ ಆವರಿಸಿಕೊಂಡಿರೋ ಕಲಾವಿದೆ ನೇತ್ರಾ ಸಿಂಧ್ಯಾ ಯಾನೆ ಅನಿಕಾ. ಆದರೀಗ ರೀಲ್‌ನಲ್ಲಿ ಎಲ್ಲರಿಗೂ ಕಾಟ ಕೊಡೋ ಅನಿಕಾ ನಿಜ ಜೀವನದಲ್ಲಿ ಮತ್ತೋರ್ವ ನಟಿಯ ಕಾರಣಕ್ಕೆ ಕಂಗಾಲಾಗಿ ಕೂತಿದ್ದಾಳೆ. ಹಾಗೆ ಅನಿಕಾಳ ಬದುಕನ್ನು ಕಾಡುತ್ತಿರುವ ನಟಿ ಕಾರುಣ್ಯಾ ರಾಮ್! ಈ ಬಗ್ಗೆ ಕಾರುಣ್ಯಾ ವಿರುದ್ಧ ಪೊಲೀಸರಿಗೆ ದೂರು ನೀಡಲೂ ಮುಂದಾಗಿದ್ದಾರೆ!

ಸರಿ ಸುಮಾರು ಹದಿನಾಲಕ್ಕು ವರ್ಷಗಳಿಂದ ನಟಿಯಾಗಿ ಸಕ್ರಿಯವಾಗಿದ್ದುಕೊಂಡು ನಲವತ್ತಕ್ಕೂ ಹೆಚ್ಚು ಸೀರಿಯಲ್‌ಗಳಲ್ಲಿ ನಟಿಸುತ್ತಾ ಪ್ರಸಿದ್ಧಿ ಪಡೆದಿರುವಾಕೆ ನೇತ್ರಾ ಸಿಂಧ್ಯಾ. ಇತ್ತೀಚೆಗಷ್ಟೇ ಸಚಿನ್ ಎಂಬವರ ಜೊತೆ ಇವರ ಎಂಗೇಜ್‌ಮೆಂಟ್ ಕೂಡಾ ನೆರವೇರಿತ್ತು. ಅದರೆ ಮಹಾ ಸಮಸ್ಯೆಯೊಂದು ಎಂಗೇಜ್‌ಮೆಂಟ್ ರೂಪದಲ್ಲಿಯೇ ನೇತ್ರಾ ಹೆಗಲೇರಿಕೊಂಡಿತ್ತು!
ಅಷ್ಟಕ್ಕೂ ಸಚಿನ್ ನೇತ್ರಾ ಮನೆಯವರೆ ನೋಡಿ ಫಿಕ್ಸ್ ಮಾಡಿದ್ದ ಹುಡುಗ. ಈ ಮದುವೆ ಮತ್ತು ಎಂಗೇಜ್‌ಮೆಂಟ್‌ಗೆ ಖುಷಿಯಿಂದಲೇ ಒಪ್ಪಿಕೊಂಡಿದ್ದ ಸಚಿನ್ ಎಂಗೇಜ್ ಮೆಂಟ್ ನಂತರದಲ್ಲಿ ಯಾವುದೋ ಚಿಂತೆಯಲ್ಲಿ ಭಯದಲ್ಲಿರುವ ವಿಚಾರ ಅನಿಕಾ ಗಮನಕ್ಕೇ ಬಂದಿತ್ತಂತೆ. ಈ ಬಗ್ಗೆ ಬಿಟ್ಟೂ ಬಿಡದಂತೆ ವಿಚಾರಿಸಿದಾಗ ಸಚಿನ್ ಕಡೆಯಿಂದ ಹೊರ ಬಿದ್ದಿದ್ದು ಕಾರುಣ್ಯಾ ರಾಮ್‌ಳ ಕರ್ಮಕಥೆ!
ಈ ಸಚಿನ್ ಮತ್ತು ಕಾರುಣ್ಯಾ ರಾಮ್ ಹಳೇ ಪ್ರೇಮಿಗಳಂತೆ. ಆದರೆ ಒಂದಷ್ಟು ಕಾಲ ಸಚಿನ್ ಜೊತೆ ಸುತ್ತಾಡಿದ ಕಾರುಣ್ಯ ನಂತರ ಈತನ ಬಳಿ ಕಾಸಿಲ್ಲ, ತನ್ನನ್ನು ಬಾಳಿಸೋ ಯೋಗ್ಯತೆ ಇಲ್ಲ ಅಂತೆಲ್ಲ ಕೊಸರಾಡಿ ಎದ್ದು ಹೋಗಿದ್ದಳಂತೆ. ಈ ಬ್ರೇಕಪ್ ಸಂಭವಿಸಿದ್ದು ಈಗ್ಗೆ ಮೂರೂವರೆ ವರ್ಷಗಳಷ್ಟು ಹಿಂದೆ. ಆ ನಂತರ ಸಚಿನ್ ಮತ್ತು ಕಾರುಣ್ಯಾ ನಡುವೆ ಯಾವುದೇ ಸಂಪರ್ಕಗಳಿರಲಿಲ್ಲ.
ಆದರೆ ಯಾವಾಗ ಸಚಿನ್ ನೇತ್ರಾ ಜೊತೆ ಎಂಗೇಜ್‌ಮೆಂಟ್ ಮಾಡಿಕೊಳ್ಳುತ್ತಿರೋ ವಿಚಾರ ಗೊತ್ತಾಯ್ತೋ ಆವತ್ತಿಂದ ಕಾರುಣ್ಯಾ ಮತ್ತೆ ಎಂಟ್ರಿ ಕೊಟ್ಟು ಸಚಿನ್‌ನನ್ನು ಕಾಡಲಾರಂಭಿಸಿದ್ದಾಳೆ. ಪಬ್ ವೊಂದಕ್ಕೆ ಖುದ್ದು ಸಚಿನ್ ನನ್ನು ಕರೆಸಿಕೊಂಡು ರಗಳೆ ಮಾಡಿದ್ದಾಳೆ. ಹೊತ್ತಲ್ಲದ ಹೊತ್ತಲ್ಲಿ ಕರೆ ಮಾಡಿ ಭೇಟಿಯಾಗುವಂತೆ ಪೀಡಿಸುತ್ತಿದ್ದಾಳೆ. ಇದಲ್ಲದೆ ಸಚಿನ್ ಹೆತ್ತವರಿಗೂ ಕರೆ ಮಾಡಿ ಧಮಕಿ ಹಾಕುತ್ತಿದ್ದಾಳಂತೆ.
ಕಾರುಣ್ಯಾ ರಾಮ್ ಕಡೆಯಿಂದ ಇಂಥಾ ದುಷ್ಟತನ ನಡೆದದ್ದೇ ಹೌದಾಗಿದ್ದರೆ ಖಂಡಿತಾ ಅದು ಅಕ್ಷಮ್ಯ ಅಪರಾಧ. ತಾನೇ ದೂರ ಮಾಡಿದ್ದ ಹುಡುಗ ಮತ್ಯಾರ ಜೊತೆಗೋ ಮದುವೆಯಾಗಲು ಮುಂದಾದಾಕ್ಷಣ ಕಾಟ ಕೊಡೋದು ಪಕ್ಕಾ ಸ್ಯಾಡಿಸ್ಟ್ ಪ್ರವೃತ್ತಿ. ಇಂಥಾದ್ದರಿಂದ ಇದೀಗ ತಾನೇ ಬೆಳೆಯುತ್ತಿರೋ ಕಾರುಣ್ಯಾಗೇ ಮಾರಕ. ಇನ್ನು ಸೀರಿಯಲ್ಲುಗಳಲ್ಲಿ ವಿಲನ್ ರೋಲ್ ಮಾಡುತ್ತಿದ್ದರೂ ರಿಯಲ್ ಲೈಫಿನಲ್ಲಿ ಕಿರಿಕಿಲ್ಲದ ಹುಡುಗಿ. ಒಂದು ಮೂಲದ ಪ್ರಕಾರ ತಾನು ಮದುವೆಯಾಗಲಿರೋ ಹುಡುಗನನ್ನು ಕಾಡುತ್ತಾ ಹಿಂಸೆ ಕೊಡುತ್ತಿರೋ ಕಾರುಣ್ಯಾ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ. ಕಾರುಣ್ಯಾ ಸಮಚಿತ್ತದಿಂದ ವರ್ತಿಸಿದರೆ ವಿನಾ ಕಾರಣ ರಾಡಿಯೇಳೋದನ್ನು ತಪ್ಪಿಸಬಹುದೆನೋ…
ಇವತ್ತು ಕಾರುಣ್ಯಾ ದುಬಾರಿ ಕಾರುಗಳು, ರಾಜರಾಜೇಶ್ವರಿ ನಗರದ ಫ್ಲಾಟುಗಳನ್ನು ಕಂಡ ಜನ ತಲೆಗೊಂದು ಮಾತಾಡಿಕೊಳ್ಳುತ್ತಾರೆ. ‘ಈಕೆ ಮಾಡಿದ್ದು ಅಲ್ಲೊಂದು ಇಲ್ಲೊಂದು ಸಿನಿಮಾ. ಆದರೆ ಇಷ್ಟೊಂದು ಶ್ರೀಮಂತಿಗೆ ಈಕೆಗೆ ಹೇಗೆ ಬಂತು ಅಂತಾ ಜನ ಪ್ರಶ್ನಿಸುತ್ತಿದ್ದಾರೆ. ಇಂಥಾ ಮಾತುಗಳು ಕೇಳಿಬರುವುದು ಸಹಜವೇ. ಯಾಕೆಂದರೆ, ಗೀತಾ ಎನ್ನುವ ಒರಿಜಿನಲ್ ನಾಮಧೇಯದ ಈಕೆಯ ತಂದೆ ರಾಮಚಂದ್ರ ಶ್ರೀನಗರದ ಕೆನರಾ ಬ್ಯಾಂಕಿನಲ್ಲಿ ಗುಮಾಸ್ತರಾಗಿದ್ದವರು. ಮೂಲತಃ ಗವೀಪುರ ಗುಟ್ಟಹಳ್ಳಿಯವರಾದ ಕಾರುಣ್ಯಾ ಫ್ಯಾಮಿಲಿಯವರು ಮೂಲ ಶ್ರೀಮಂತರೇನೂ ಅಲ್ಲ. ಆದರೆ ಕಾರುಣ್ಯಾ ಕುಟುಂಬದವರು ಮರ್ಯಾದಸ್ತರು ಅಂತಾ ಹೆಸರು ಪಡೆದಿದ್ದಾರೆ. ಇವರ ದೊಡ್ಡಪ್ಪ ಶ್ರೀನಿವಾಸ್ ಎನ್.ಜಿ.ಇ.ಎಫ್.ನಲ್ಲಿ ಉದ್ಯೋಗಕ್ಕಿದ್ದವರು. ಅದರೊಟ್ಟಿಗೆ ಲಾಟರಿ ವ್ಯಾಪಾರ ಮಾಡಿಕೊಂಡಿದ್ದವರು. ಈಕೆಯ ಮಾವ ಗೋವಿಂದ ಕುರುಡರಾಗಿದ್ದರೂ ತಳ್ಳುಗಾಡಿಯಲ್ಲಿ ತರಕಾರಿ ಮಾರಿ ಜೀವನ ನಡೆಸಿದವರು. ಇಡೀ ಬಸವನಗುಡಿಯಲ್ಲಿ ಈಕೆಯ ಮನೆಯವರಿಗೆ ಒಂದೊಳ್ಳೆ ಹೆಸರಿದೆ. ಕಾರುಣ್ಯಾ ಕಾರಣಕ್ಕೆ ಅದು ಹಾಳಾಗಬಾರದಲ್ಲವೆ? ಕಾರುಣ್ಯಾಳ ದುಡಿಮೆ, ಅದರ ಹಿನ್ನೆಲೆ, ಬದುಕಿನ ರೀತಿ ಎಲ್ಲವೂ ಆಕೆಯ ಖಾಸಗಿ ವಿಚಾರಗಳೇ. ಆದರೆ ಮತ್ತೊಬ್ಬರ ಖಾಸಗಿ ಬದುಕನ್ನು ಖರಾಬು ಮಾಡುಂವಥ ಕೆಲಸಕ್ಕೆ ಕಾರುಣ್ಯಾಳಂಥ ಹೆಣ್ಣುಮಗಳು ಕೈಯಿಡದಿರಲಿ…

Leave a Reply

Your email address will not be published. Required fields are marked *


CAPTCHA Image
Reload Image