One N Only Exclusive Cine Portal

ಕಾರ್ತಿಕ್ ಗೌಡರ ಹೊಸಾ ಚಿತ್ರ!

ಹೊಂಬಾಳೆ ಫಿಲಂಸ್ ಸಂಸ್ಥೆಯ ಮೂಲಕ ಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ನಿರ್ಮಾಪಕ ಕಾರ್ತಿಕ್ ಗೌಡ ಮತ್ತು ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆಯಾಗಿ ಚಿತ್ರ ನಿರ್ಮಾಣಕ್ಕಿಳಿಯಲಿದ್ದಾರಾ? ಹೀಗೊಂದು ವಿಚಾರದ ಬಗ್ಗೆ ಕಳೆದ ಒಂದಷ್ಟು ದಿನಗಳಿಂದ ರೂಮರುಗಳೆದ್ದಿದ್ದವು. ಇದೀಗ ಆ ವಿಚಾರ ಅಧಿಕೃತವಾಗಿಯೇ ಜಾಹೀರಾಗಿದೆ.
ಈವರೆಗೆ ನೇರವಾಗಿ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಳ್ಳದ ಪುನೀತ್ ಇದೀಗ ಆ ಕಾರ್ಯ ಆರಂಭಿಸಿದ್ದರೆ. ಇವರಿಗೆ ನಿರ್ಮಾಪಕ ಕಾರ್ತಿಕ್ ಗೌಡರೂ ಸಾಥ್ ಕೊಡುತ್ತಿದ್ದಾರೆ. ಇವರಿಬ್ಬರೂ ಸೇರಿ ನಿರ್ಮಾಣ ಮಾಡುತ್ತಿರೋ ಚಿತ್ರವೊಂದು ಸದ್ಯದಲ್ಲಿಯೇ ಅನೌನ್ಸ್ ಆಗಲಿದೆ.
ಈ ಹಿಂದೆ  ಗೋಧಿ ಬಣ್ಣ ಸಾಧಾರಣ ಮೈಕಟ್ಟು ಎಂಬ ಹಿಟ್ ಚಿತ್ರಗಳನ್ನು ಕೊಟ್ಟಿದ್ದ ಹೇಮಂತ್ ರಾವ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರಲಿದೆ. ಈ ಚಿತ್ರಕ್ಕೆ ಹೀರೋ ಮತ್ತು ತಾಂತ್ರಿಕ ವರ್ಗದ ಆಯ್ಕೆ ಕಾರ್ಯ ಸದ್ಯಕ್ಕೆ ಚಾಲ್ತಿಯಲ್ಲಿದೆ.

Leave a Reply

Your email address will not be published. Required fields are marked *


CAPTCHA Image
Reload Image