One N Only Exclusive Cine Portal

ಕಾಲಿವುಡ್’ನಲ್ಲಿ ಸೆಟ್ಟೇರಲಿದೆ ಮಲ್ಟಿಸ್ಟಾರ್ಸ್ ಸಿನೆಮಾ

ಸ್ಟಾರ್ ನಟರ ಸಿನೆಮಾಗಳ ಮೂಲಕ ಕೋಟಿ ಬಾಚುವ ಕಾಲಿವುಡ್ ಸಿನಿರಂಗದಲ್ಲಿ ಮಲ್ಟಿ ಸ್ಟಾರ್ಸ್ ಚಿತ್ರಕ್ಕೆ ಭರ್ಜರಿ ಪ್ಲಾನ್ ನಡೀತಿದೆ. ಈ ಪ್ಲಾನಿನ ಮಾಸ್ಟರ್ ಮೈಂಡ್ ಮತ್ಯಾರೂ ಅಲ್ಲ. ತೆರೆಯ ಮೇಲೆ ದೃಶ್ಯಗಳ ಮ್ಯಾಜಿಕ್ ತೋರಿಸುವ ಹಿರಿಯ ನಿರ್ದೇಶಕ ಮಣಿರತ್ನಂ ಎಂಬುದು ವಿಶೇಷ. ಕೆಲದಿನಗಳ ಹಿಂದೆ ತೆರೆಗೆ ಬಂದ ಮಣಿ ನಿರ್ದೇಶನದ ‘ಕಾಟ್ರು ವೆಲಿದೈ’ ಚಿತ್ರದ ಟ್ರೇಲರ್’ಗೆ ಸಿನಿರಸಿಕರಿಂದ ಸಖತ್ ರೆಸ್ಪಾನ್ಸ್ ಸಿಕ್ಕಿದೆ.

ಇದರ ಬೆನ್ನಲ್ಲೇ ಮಣಿರತ್ನಂರ ಮುಂದಿನ ಪ್ರಾಜೆಕ್ಟ್ ಮಲ್ಟಿ ಸ್ಟಾರ್ಸ್’ರ ಆ್ಯಕ್ಷನ್ ಚಿತ್ರವೆಂಬ ಸುದ್ದಿ ಹೊರ ಬಿದ್ದಿದೆ. ನಟ ಕಾರ್ತಿಯೊಂದಿಗೆ ‘ಕಾಟ್ರು ವೆಲಿದೈ’ ಚಿತ್ರದಲ್ಲಿ ಪ್ಯಾರ್ ಕಹಾನಿ ಹೇಳುತ್ತಿರುವ ಮಣಿರತ್ನಂ ಈ ಚಿತ್ರದ ಬಳಿಕ ಸಾಹಸಮಯ ಕಥೆ ಹೇಳಲಿದ್ದಾರಂತೆ. ಸೂಪರ್ ಸ್ಟಾರ್ ರಜನೀಕಾಂತ್ , ‘ಬಾಂಬೆ’ ಅರವಿಂದ್ ಸ್ವಾಮಿ ಮತ್ತು ಮೆಗಾ ಸ್ಟಾರ್ ಮಮುಟ್ಟಿ ಎಂಬ ಮೂವರು ಸ್ಟಾರ್ ನಟಿಸಿದ್ದ “ದಳಪತಿ” ಚಿತ್ರ ಮಣಿರತ್ನಂ ನಿರ್ದೇಶಿಸಿ ಭರ್ಜರಿ ಹಿಟ್ಟಾದ ಕೊನೆಯ ಮಲ್ಟಿ ಸ್ಟಾರ್ಸ್ ಸಿನೆಮಾವಾಗಿತ್ತು. ಇದೀಗ ತಮ್ಮ ಹಳೇ ಖದರ್ ತೋರಿಸಲು “ಒಕೆ ಕಣ್ಮನಿ” ನಿರ್ದೇಶಕ ಕಾಲಿವುಡ್ ಸೂಪರ್ ತಾರೆಯರಾದ ಇಳಯ ದಳಪತಿ “ವಿಜಯ್” ಮತ್ತು ಚಿಯಾನ್ “ವಿಕ್ರಂ”ರನ್ನು ಜೊತೆಗೂಡಿಸಲಿದ್ದಾರೆ. ಅಷ್ಟೇ ಅಲ್ಲದೇ ಮತ್ತೊಂದು ಪಾತ್ರಕ್ಕೆ ಮೆಗಾ ಪವರ್ ಸ್ಟಾರ್ “ರಾಮ್ ಚರಣ್”ಗೆ ಆಫರ್ ನೀಡಿದ್ದಾರಂತೆ. ಮಣಿರತ್ನಂರ ನ್ಯೂ ಕಹಾನಿಗೆ ವಿಜಯ್ – ವಿಕ್ರಂ ಗ್ರೀನ್ ಸಿಗ್ನಲ್ ನೀಡಿದ್ದಾರೆಂಬ ಸುದ್ದಿ ಕಾಲಿವುಡ್ ಕಡಲ ಕಿನಾರೆಯಲ್ಲಿ ಹರಿದಾಡುತ್ತಿದೆ.

ಇದೀಗ ಟಾಲಿವುಡ್ ನಟ ರಾಮ್ ಚರಣ್’ರೊಂದಿಗೆ ಮಾತುಕತೆ ನಡೆಯುತ್ತಿದ್ದು ಶೀಘ್ರದಲ್ಲೇ ಚಿತ್ರದ ಅನೌನ್ಸ್ ನಡೆಯಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ದಳಪತಿ ಚಿತ್ರದೊಂದಿಗೆ ಕಾಲಿವುಡ್ ಬಾಕ್ಸಾಫೀಸ್’ನಲ್ಲಿ ಧೂಳೆಬ್ಬಿಸಿದ್ದ ಮಣಿರತ್ನಂ ಇದೀಗ ಮತ್ತೊಮ್ಮೆ ಸೌತ್’ನ ಮೂವರು ಸೂಪರ್ ಸ್ಟಾರ್ಸ್’ನ್ನು ಜೊತೆಗೂಡಿಸಿದ್ರೆ ಗಲ್ಲಾಪೆಟ್ಟಿಗೆ ಕಹಾನಿ ಏನಾಗಲಿದೆ ಎಂಬುದು ಊಹಿಸಬೇಕಷ್ಟೆ.!

  • ಅಕ್ಷತಾ ಪೊನ್ನಣ್ಣ

Leave a Reply

Your email address will not be published. Required fields are marked *


CAPTCHA Image
Reload Image