One N Only Exclusive Cine Portal

ಕಾಲು ಕಳಕೊಂಡ ಸತ್ಯಜಿತ್ ಬಿಲ್ಡಪ್ ಚಿತ್ರದಲ್ಲಿ ನಟಿಸ್ತಾರಂತೆ!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಇತ್ತೀಚೆಗೆ ಸಕ್ಕರೆ ಕಾಯಿಲೆ ಉಲ್ಬಣಿಸಿ ಒಂದು ಕಾಲು ಕಳೆದುಕೊಂಡು ಸಂಕಷ್ಟದಲ್ಲಿರುವವರು ಪ್ರತಿಭಾವಂತ ನಟ ಸತ್ಯಜಿತ್. ಚಿತ್ರರಂಗದ ಒಂದಷ್ಟು ಮಂದಿ ಸತ್ಯಜಿತ್ ಅವರಿಗೆ ನೆರವು ನೀಡಿದ್ದಾರೆ. ಮತ್ತೆ ಬಹುತೇಕರದ್ದು ಜಾಣ ಮೌನ. ಆದರೆ ಬದುಕಿನ ನಾನಾ ಕಷ್ಟ ಕೋಟಲೆಗಳನ್ನು ದಾಟಿಕೊಂಡು ಬಂದಿರೋ ಸತ್ಯಜಿತ್ ಅವರ ಸ್ವಾಭಿಮಾನಕ್ಕೇನೂ ಕುಂದುಂಟಾಗಿಲ್ಲ. ಇದೀಗ ಸತ್ಯಜಿತ್ ಅವರ ಸ್ವಾಭಿಮಾನದ ತುಡಿತಕ್ಕೆ ಆಸರೆಯಾಗುವಂಥಾದ್ದೊಂದು ಒಳ್ಳೆ ನಿರ್ಧಾರ ಪ್ರಥಮ್ ಕಡೆಯಿಂದ ಹೊರ ಬಿದ್ದಿದೆ!
ಸ್ವಾಭಿಮಾನದ ಮನಸಿನ ಪಾಲಿಗೆ ಕೈ ಚಾಚೋದು ಸಂಕಟದ ಕೆಲಸ. ಆದರೆ ಸತ್ಯಜಿತ್ ಅನಾರೋಗ್ಯದ ಅನಿವಾರ್ಯದಿಂದ ಅಂಥಾದ್ದೊಂದು ಸ್ಥಿತಿ ತಲುಪಿದ್ದಾರೆ. ಅವರಿಗೆ ಒಂದು ಕಾಲು ಕಳಕೊಂಡರೂ ಸಿನಿಮಾಗಳಲ್ಲಿ ನಟಿಸಿ ದುಡಿದು ತಿನ್ನೋ ಮನಸಿದೆ. ಆದರೆ ಅವರಿಗೆ ತಕ್ಕುದಾದ ಪಾತ್ರ ಸೃಷ್ಟಿಸಿ ನೆರವಾಗೋ ಮನಸ್ಥಿತಿಗಳ ಅವಶ್ಯಕತೆಯೂ ಇದೆ. ಅದು ಈಗ ಪ್ರಥಮ್ ಕಡೆಯಿಂದ ಸಾಕಾರಗೊಂಡಿದೆ!
ಪ್ರಥಮ್ ತನ್ನ ಮುಂದಿನ ಚಿತ್ರ ಬಿಲ್ಡಪ್‌ನಲ್ಲಿ ಸತ್ಯಜಿತ್ ಅವರಿಗಾಗೇ ಒಂದು ಪಾತ್ರ ಸೃಷ್ಟಿಸಿ ಅವಕಾಶ ಕೊಡಲು ಮುಂದಾಗಿದ್ದಾರೆ. ಸತ್ಯಜಿತ್ ಅವರನ್ನು ಭೇಟಿಯಾಗಿ ಮಾತನಾಡಿರೋ ಪ್ರಥಮ್ ಕಡೆಯಿಂದ ಇಂಥಾದ್ದೊಂದು ಭರವಸೆ ರವಾನೆಯಾಗಿದೆ. ಕುಳಿತಲ್ಲೇ ಮಾಡಬಹುದಾದ ಒಂದು ವಿಶೇಷವಾದ ಮುಖ್ಯ ಪಾತ್ರವನ್ನು ಸತ್ಯಜಿತ್ ಅವರಿಗೆಂದೇ ಸೃಷ್ಟಿಸೋ ಸವಾಲನ್ನೂ ಪ್ರಥಮ್ ಸ್ವೀಕರಿಸಿದ್ದಾರೆ.
ಅಂದಹಾಗೆ ಅನುಕಂಪ ವ್ಯಕ್ತಪಡಿಸೋ ಬದಲು ಅನ್ನದ ಹಾದಿ ಕಲ್ಪಿಸೋದೇ ಮೇಲೆಂದು ನಂಬಿರೋ ಪ್ರಥಮ್ ಬಿಲ್ಡಪ್ ಚಿತ್ರದಲ್ಲಿ ಸತ್ಯಜಿತ್ ಅವರು ಡಿಫರೆಂಟಾದೊಂದು ಪಾತ್ರದಲ್ಲಿ ಮಿಂಚೋದು ಗ್ಯಾರೆಂಟಿ. ಇದುವರೆಗೂ ೬೪೭ ಚಿತ್ರಗಳಲ್ಲಿ ನಟಿಸಿ ಹೆಸರು ಮಾಡಿರುವವರು ಸತ್ಯಜಿತ್. ಬಿಲ್ಡಪ್ ಅವರ ೬೪೮ನೇ ಚಿತ್ರವಾಗಿ ದಾಖಲಾಗಲಿದೆ!

copying or reproducing the above content in any format without approval is criminal offence and will be prosecuted in Bengaluru court © CINIBUZZ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Leave a Reply

Your email address will not be published. Required fields are marked *


CAPTCHA Image
Reload Image