One N Only Exclusive Cine Portal

ಕಿಚ್ಚ ಸುದೀಪ್‌ಗೋಸ್ಕರ ಅಭಿಮಾನಿಗಳ ಸಾಹಸ!

ತಮ್ಮ ನೆಚ್ಚಿನ ನಟ ನಟಿಯರ ಬಗೆಗಿನ ಪ್ರೀತಿ ಅಭಿಮಾನಿಗಳ ಕಡೆಯಿಂದ ಹೊರ ಹೊಮ್ಮುವ ರೀತಿಯೇ ರೋಚಕ. ತಮ್ಮ ಪ್ರೀತಿಯ ನಟನೇ ಎಲ್ಲಾದರಲ್ಲೂ ಮೊದಲಿರಬೇಕೆಂಬ ಹಂಬಲ, ಅಭಿಮಾನ ವ್ಯಕ್ತಪಡಿಸೋದರಲ್ಲಿಯೂ ಡಿಫರೆಂಟಾಗಿರಬೇಕೆಂಬ ಬಯಕೆ ಅಭಿಮಾನಿಗಳಲ್ಲಿದ್ದೇ ಇರುತ್ತೆ. ಆದರೆ ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಭಿನ್ನವಾದ ಹಾದಿಯಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ!
ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸುದೀಪ್ ಅಭಿಮಾನಿಗಳು ಅಫಿಷಿಯಲ್ ವೆಬ್‌ಸೈಟ್ ಮತ್ತು ಮೊಬೈಲ್ ಆಪ್ ಅನ್ನು ಸಿದ್ಧಗೊಳಿಸಿದ್ದಾರೆ. ಇದಕ್ಕೆ ನಮ್ಮ ಕಿಚ್ಚ ಎಂಬ ಹೆಸರಿಡಲಗಿದೆ. ಸುದೀಪ್ ಅಭಿಮಾನಿಗಳಿಂದ ಸುದೀಪ್‌ಗೋಸ್ಕರ ಎಂಬ ಸಬ್‌ಟೈಟಲನ್ನು ಕೂಡಾ ಈ ವೆಬ್‌ಸೈಟ್‌ಗೆ ಕೊಡಲಾಗಿದೆ.
ಸುದೀಪ್ ಅವರ ಚಿತ್ರಗಳ ಬಗ್ಗೆ ಸಂಪೂರ್ಣವಾದ ಮಾಹಿತಿ, ಇಂಟರೆಸ್ಟಿಂಗ್ ವಿಚಾರಗಳನ್ನೆಲ್ಲ ಈ ಮೊಬೈಲ್ ಆಪ್ ಮತ್ತು ವೆಬ್‌ಸೈಟ್ ಮೂಲಕ ಜಾಹೀರು ಮಾಡೋ ಕನಸು ಸುದೀಪ್ ಅಭಿಮಾನಿಗಳದ್ದು. ಅಂದಹಾಗೆ ಈ ಆಪ್ ಮತ್ತು ವೆಬ್‌ಸೈಟ್ ಕಿಚ್ಚ ಸುದೀಪ್ ಫ್ಯಾನ್ಸ್ ಅಸೊಸಿಯೇಷನ್ ಸದಸ್ಯರೇ ರೂಪಿಸಿದ್ದಾರೆ. ksfaofficial.com
Download App http://bit.ly/2A8Rwk6 ಮೂಲಕ ಇನ್ನು ಕಿಚ್ಚ ಸುದೀಪ್ ಅವರ ಚಿತ್ರಗಳ ಮಾಹಿತಿ ದೊರಕಲಿದೆ.

Leave a Reply

Your email address will not be published. Required fields are marked *


CAPTCHA Image
Reload Image