One N Only Exclusive Cine Portal

ಕುರುಕ್ಷೇತ್ರದ ವಿರುದ್ಧ ಮುನಿಸಿಕೊಂಡರೇ ದರ್ಶನ್?

ಇಂಥಾ ತಂತ್ರಗಾರಿಕೆಗಳಿಂದ ದರ್ಶನ್ ಅವರಂಥಾ ದೈತ್ಯ ನಟನನ್ನು ಮೀರಿಸಲು ಸಾಧ್ಯವಾಗೋದಿಲ್ಲ. ಕುರುಕ್ಷೇತ್ರ ಚಿತ್ರದ ವಿಚಾರವಾಗಿ ಒಂದರ ಹಿಂದೊಂದರಂತೆ ಹರಿದಾಡುತ್ತಿರೋ ಇಂಥಾ ಸುದ್ದಿಗಳ ಬಗ್ಗೆ ದರ್ಶನ್ ಅಭಿಮಾನಿಗಳು ತಲೆ ಕೆಡಿಸಿಕೊಳ್ಳೋ ಅವಶ್ಯಕತೆಯಿಲ್ಲ!

ಮುನಿರತ್ನ ಅವರ ಕುರುಕ್ಷೇತ್ರದೊಳಗೆ ಶೀತಲ ಸಮರವೊಂದು ಶುರುವಾಗಿದೆಯಾ? ಅಷ್ಟಕ್ಕೂ ಈ ಚಿತ್ರದ ಹೀರೋ ಯಾರು? ಇಂಥಾ ಬಗೆಬಗೆಯ ಪ್ರಶ್ನೆಗಳು, ನಾನಾ ವೆರೈಟಿಯ ರೂಮರುಗಳು ಎಲ್ಲೆಂದರಲ್ಲಿ ಯಾರಿಂದ ಹರಿದಾಡುತ್ತಿದೆಯೋ ಗೊತ್ತಿಲ್ಲ. ಆದರೆ ಇಂಥಾ ವಿದ್ಯಮಾನಗಳು ಸ್ವತಃ ದರ್ಶನ್ ಅಭಿಮಾನಿಗಳಲ್ಲಿ ಅಸಹನೆ ಮೂಡಿಸಿರುವುದು ಸುಳ್ಳಲ್ಲ!
ಇವತ್ತು ಕುಮಾರಣ್ಣನ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಗಿರುವ ಟ್ರೈಲರ್‌ನಲ್ಲಿ ಅಭಿಮನ್ಯು ಪಾತ್ರಧಾರಿ ನಿಖಿಲ್ ಕುಮಾರಸ್ವಾಮಿಯನ್ನೇ ಫೋಕಸ್ ಮಾಡಲಾಗಿದೆ. ಅದು ಎಷ್ಟರ ಮಟ್ಟಿಗೆ ಅಂದರೆ, ಅದರಲ್ಲಿ ದರ್ಶನ್ ಸುಳಿವು ಕೂಡಾ ಇಲ್ಲ. ಪತ್ರಿಕೆಗಳಲ್ಲಿ ಹರಿದಾಡುತ್ತಿರೋ ಜಾಹೀರಾತುಗಳಲ್ಲಿಯೂ ಬರೀ ನಿಖಿಲ್‌ನದ್ದೇ ಹವಾ. ಯಾಕೆ ಹೀಗಾಗುತ್ತಿದೆ ಅಂತ ದರ್ಶನ್ ಅಭಿಮಾನಿಗಳು ತಲೆ ಕೆಡಿಸಿಕೊಂಡಿರೋವಾಗಲೇ ಇಂದು ಹೈದ್ರಾಬಾದ್‌ನಲ್ಲಿ ನಡೆದ ಕುರುಕ್ಷೇತ್ರ ಚಿತ್ರೀಕರಣಕ್ಕೂ ದರ್ಶನ್ ಹಾಜರಾಗಿಲ್ಲ ಅಂತೊಂದು ರೂಮರ್ ಹಬ್ಬಿಕೊಂಡಿತ್ತು!
ಅಲ್ಲಿಗೆ ಕುರುಕ್ಷೇತ್ರದೊಳಗೆ ಮತ್ತೊಂದು ಮುರುಕ್ಷೇತ್ರ ಸೃಷ್ಟಿಯಾಗೋ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ ಅಂತಲೇ ಗುಲ್ಲೆದ್ದಿತ್ತು. ಈ ನಿಖಿಲ್ ದರ್ಶನ್ ಅವರನ್ನೇ ಸೈಡ್ ಲೈನ್ ಮಾಡಿ ಮುನ್ನುಗ್ಗೋ ಪ್ರಯತ್ನ ಮಾಡುತ್ತಿದ್ದಾರೆಂಬ ಅಂತೆ ಕಂತೆಗಳೂ ಹರಿದಾಡುತ್ತಿದ್ದವು.
ಆದರೆ ಇದ್ಯಾವುದರ ಬಗೆಗೂ ತಲೆ ಕೆಡಿಸಿಕೊಳ್ಳದ ದರ್ಶನ್ ಇಂದೂ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ನಿಖಿಲ್ ಕುಮಾರಸ್ವಾಮಿಯ ಮೆರೆದಾಟದ ವಿಚಾರದಲ್ಲಿ ದರ್ಶನ್ ಅವರಿಗೆ ಅಸಮಧಾನವಿರಬಹುದು ಆದರೆ, ತೀರಾ ಮುನಿಸಿಕೊಂಡಿದ್ದಾರೆ ಅನ್ನೋದೆಲ್ಲಾ ಬರೀ ರೂಮರ್ ಎಂಬುದು ಈ ಮೂಲಕ ಸಾಬೀತಾಗಿದೆ. ಅಷ್ಟಕ್ಕೂ ಇಂಥಾ ತಂತ್ರಗಾರಿಕೆಗಳಿಂದ ದರ್ಶನ್ ಅವರಂಥಾ ದೈತ್ಯ ನಟನನ್ನು ಮೀರಿಸಲು ಸಾಧ್ಯವಾಗೋದಿಲ್ಲ. ಕುರುಕ್ಷೇತ್ರ ಚಿತ್ರದ ವಿಚಾರವಾಗಿ ಒಂದರ ಹಿಂದೊಂದರಂತೆ ಹರಿದಾಡುತ್ತಿರೋ ಇಂಥಾ ಸುದ್ದಿಗಳ ಬಗ್ಗೆ ದರ್ಶನ್ ಅಭಿಮಾನಿಗಳು ತಲೆ ಕೆಡಿಸಿಕೊಳ್ಳೋ ಅವಶ್ಯಕತೆಯಿಲ್ಲ!
ಆದರೆ, ಯಾವುದೇ ವಿಚಾರವೇ ಆದರೂ ಬೆಂಕಿ ಇಲ್ಲದೆ ಹೊಗೆಯಾಡೋದಿಲ್ಲ. ಯಾಕೆಂದರೆ ಇಡೀ ಚಿತ್ರದಲ್ಲಿ ಹನ್ನೆರಡು ನಿಮಿಷ ಬರೋ ಅಭಿಮನ್ಯುವಿನ ಪಾತ್ರವನ್ನೇ ಹೀರೋ ರೇಂಜಿಗೆ ಯಾಕೆ ಬಿಂಬಿಸಲಾಗುತ್ತಿದೆಯೋ ಗೊತ್ತಾಗುತ್ತಿಲ್ಲ. ಕುರುಕ್ಷೇತ್ರದಲ್ಲಿ ಹೀರೋ ಅಭಿಮನ್ಯುವಾ ಅಥವಾ ದುರ್ಯೋಧನನಾ ಎಂಬಂಥಾ ಪ್ರಶ್ನೆಯೂ ಪ್ರೇಕ್ಷಕರನ್ನು ಕಾಡುತ್ತಿದೆ. ವಿನಾಃ ಕಾರಣ ಗೊಂದಲಗಳು ಸೃಷ್ಟಿಯಾಗಿ ರಾಡಿಯೇಳದಂತೆ ಚಿತ್ರ ತಂಡ ಮುಂದುವರೆದರೊಳಿತು.

Leave a Reply

Your email address will not be published. Required fields are marked *


CAPTCHA Image
Reload Image