One N Only Exclusive Cine Portal

ಕೆಂಪುಮಣ್ಣಿನ ಹೊಲದಲ್ಲಿ ‘ಕನಕ ಹಾಡಿನ ಚಿತ್ರೀಕರಣ

ತಾಜ್‌ಮಹಲ್ ಚಂದ್ರು ನಿರ್ದೇಶನದ, ದುನಿಯಾ ವಿಜಯ್ ಅಭಿನಯದ ಕನಕ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇದೀಗ ನಿರ್ದೇಶಕರು ವಿಶೇಷವಾದ ಹಾಡೊಂದನ್ನು ಅದ್ದೂರಿಯಾಗಿ ಚಿತ್ರೀಕರಣ ಮಾಡಿಕೊಂಡಿದ್ದಾರೆ.
ಇದು ೨೫ ಫೈಟರುಗಳು ಸೇರಿದಂತೆ ನೂರು ಮಂದಿ ಡ್ಯಾನ್ಸರ್‌ಗಳನ್ನು ಒಳಗೊಂಡು ಮಾಡಿರುವ ವಿಶಿಷ್ಟವಾದ ವಾರಿಯರ್ ಶೈಲಿಯ ಹಾಡು. ಚಿತ್ರವನ್ನು ಆರಂಭ ಮಾಡೋದಕ್ಕೂ ಮುಂಚೆಯೇ ನಾನಾ ಥರದ ಪ್ರಯೋಗಗಳನ್ನು ಮಾಡಿ ಕಥೆಗೆ ಪೂರಕವಾಗಿ ಸಜ್ಜುಗೊಂಡಿದ್ದವರು ಚಂದ್ರು. ಈ ಹಾಡಿಗಾಗಿಯೂ ಅವರು ತಿಂಗಳುಗಟ್ಟಲೆ ಶ್ರಮ ವಹಿಸಿ ಸಜ್ಜುಗೊಂಡಿದ್ದರು.
ಈ ಹಾಡು ದೇವನಹಳ್ಳಿ ಬಳಿ ಹದಿನೈದೆಕರೆಯಷ್ಟು ವಿಶಾಲವಾದ ಕೆಂಪು ಹುಡಿ ಮಣ್ಣಿನ ಪ್ರದೇಶದಲ್ಲಿ ಚಿತ್ರೀಕರಣಗೊಂಡಿದೆ. ಈ ಹೊಲ ಚಂದ್ರು ಅವರದ್ದೇ. ಇಷ್ಟು ವಿಸ್ತಾರವಾದ ಜಮೀನನ್ನು ಕೆಂಪು ಹುಡಿಮಣ್ಣು ಹಾರುವಂತೆ ಸಜ್ಜುಗೊಳಿಸಲು ತಿಂಗಳ ಕಾಲದಿಂದ ಶ್ರಮ ವಹಿಸಲಾಗಿತ್ತು. ಕಡೆಗೂ ಇಂಥಾ ಶ್ರಮದ ಫಲವಾಗಿ ಈ ವಿಶೇಷವಾದ ಹಾಡು ಇಡೀ ಚಿತ್ರದ ಪ್ರಮುಖ ಆಕರ್ಷಣೆಯಾಗಲಿರುವ ಖುಷಿ ಚಂದ್ರು ಅವರದ್ದು.
ಮುರಳಿ ಮಾಸ್ಟರ್ ನೃತ್ಯ ನಿರ್ದೇಶನದ ಈ ವಿಶೇಷ ಹಾಡಿನ ಚಿತ್ರೀಕರಣದಲ್ಲಿ ವಿಜಯ್, ಸೋಲ್ಜರ‍್ಸ್ ಗೆಟಪ್ಪಿನಲ್ಲಿರುವ ಬಾಂಬೆಯ ೧೦೦ ಜನ ಪ್ರಸಿದ್ದ ಡ್ಯಾನ್ಸರ್‌ಗಳ ಬಳಗ, ಹತ್ತಾರು ಜನ ಬಾಡಿಗಾರ್ಡ್ ಬೌನ್ಸರ್‌ಗಳು ಪಾಲ್ಗೊಂಡಿದ್ದಾರೆ. ಈ ಹಾಡಿಗಾಗಿ ೨೦ಲಕ್ಷ ರುಪಾಯಿ ವೆಚ್ಚದಲ್ಲಿ ವಿಶೇಷವಾದ ಕಾಸ್ಟೂಮ್‌ಗಳನ್ನು ಚೆನ್ನೈನಲ್ಲಿ ಸಿದ್ದಪಡಿಸಲಾಗಿದೆ. ಚಿತ್ರೀಕರಣದ ವೇಳೆಯಲ್ಲಿ ಹೈದ್ರಾಬಾದಿನಿಂದ ಬಂದ ಕಂಪ್ಯೂಟರ್ ಗ್ರಾಫಿಕ್ಸ್ ತಂತ್ರಜ್ಞರೂ ಸ್ಥಳದಲ್ಲೇ ಇದ್ದರು. ಹಾಗೂ ಈ ಹಾಡಿಗೆ ಕಲಾ ನಿರ್ದೇಶಕ ಮೋಹನ್ ಬಿ ಕೆರೆ ಅವರ ವಿಶಿಷ್ಟವಾದ ಸೆಟ್ ಹಾಕಿದ್ದರು. ವಿಶೇಷವೆಂದರೆ ಇದೊಂದು ಹಾಡಿಗಾಗಿಯೇ ಎಂಬತ್ತು ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಲಾಗಿದೆ. ಆಕ್ಟಿಂಗ್ ಕಂ ಡ್ಯಾನ್ಸ್ ಹೊಂದಿರೊ ಈ ಹಾಡು ಕನಕ ಚಿತ್ರದೆಡೆಗಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸುವಂತಿದೆ ಎನ್ನುತ್ತಾರೆ ಚಿತ್ರದ ನಿರ್ಮಾಪಕರೂ ಆಗಿರುವ ಆರ್.ಚಂದ್ರು.

Leave a Reply

Your email address will not be published. Required fields are marked *


CAPTCHA Image
Reload Image