One N Only Exclusive Cine Portal

ಕೆಜಿಎಫ್ ಚಿತ್ರದ ಜಬರ್ದಸ್ತ್ ಪೋಸ್ಟರ್!

ಶ್ರೀಮುರುಳಿ ವೃತ್ತಿ ಬದುಕಿಗೆ ಮಹತ್ತರವಾದ ತಿರುವು ಕೊಟ್ಟು ಭರ್ಜರಿ ಹಿಟ್ ಆಗಿ ದಾಖಲಾದ ಚಿತ್ರ ‘ಉಗ್ರಂ. ಈ ಚಿತ್ರವನ್ನು ನಿರ್ದೇಶನ ಮಾಡಿ ಆರಂಭದಲ್ಲಿಯೇ ಗಮನ ಸೆಳೆದಿದ್ದ ಪ್ರಶಾಂತ್ ನೀಲ್ ಮತ್ತು ರಾಕಿಂಗ್ ಸ್ಟಾರ್ ಯಶ್ ಕಾಂಬಿನೇಷನ್ನಿನ ಚಿತ್ರ ಕೆಜಿಎಫ್!
ಶುರುವಾತಿನಿಂದಲೂ ಭಾರೀ ಕುತೂಹಲ ಕೆರಳಿಸಿದ್ದ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಇದು ಕನ್ನಡ ಚಿತ್ರರಂಗಕ್ಕೆ ಒಂದು ಜಬರ್ದಸ್ತಾದ, ಅದ್ದೂರಿ ಬಜೆಟ್ಟಿನ ಪಕ್ಕಾ ಮಾಸ್ ಚಿತ್ರವೊಂದು ಸೇರ್ಪಡೆಗೊಳ್ಳುವ ಸ್ಪಷ್ಟ ಸೂಚನೆ ನೀಡಿದೆ.
ಉಗ್ರಂ ಚಿತ್ರ ಪ್ರೇಕ್ಷಕರನ್ನು ಆವರಿಸಿಕೊಂಡಿದ್ದ ರೀತಿ ಇಂದಿಗೂ ಹಸಿರಾಗಿದೆ. ಶ್ರೀಮುರಳಿ ಅಡಿಗಡಿಗೆ ಸೋಲಿನಿಂದ ಕಂಗಾಲಾಗಿ ಇನ್ನೇನು ಅವರ ಕಥೆ ಮುಗಿದೇ ಹೋಯ್ತೆಂಬಷ್ಟರಲ್ಲಿ ಕೈ ಹಿಡಿದು ಮೇಲೆತ್ತಿದ್ದ ಚಿತ್ರ ಉಗ್ರಂ. ಇದನ್ನು ಆ ರೀತಿ ಅಚ್ಚುಕಟ್ಟಾಗಿ ನಿರ್ದೇಶನ ಮಾಡಿದ್ದ ಪ್ರಶಾಂತ್ ನೀಲ್ ನಿರ್ದೇಶನದ ಎರಡನೇ ಚಿತ್ರವಾದ ಕೆಜಿಎಫ್ ಸಹಜವಾಗಿಯೇ ನಿರೀಕ್ಷೆ ಹುಟ್ಟಿಸಿದೆ.
ಇದೀಗ ಬಿಡುಗಡೆಯಾಗಿರುವ ಪೋಸ್ಟರ್ ಅಂಥಾ ನಿರೀಕ್ಷೆಗಳನ್ನೆಲ್ಲ ಪ್ರಶಾಂತ್ ನೀಲ್ ಮತ್ತು ಯಶ್ ಕಾಂಬಿನೇಷನ್ ನಿಜ ಮಾಡೋ ಸೂಚನೆಯಂತಿದೆ! ಮೇಲ್ನೋಟಕ್ಕೆ ಇದು ಕೋಲಾರ ಚಿನ್ನದ ಗಣಿ ಕಾರ್ಮಿಕರ ಕುರಿತ ಚಿತ್ರದಂತೆ ಕಾಣುತ್ತಿದೆ. ಒಂದು ವೇಳೆ ಅದು ನಿಜವಾದರೂ ನಿಜಕ್ಕೂ ಒಳ್ಳೆಯ ಬೆಳವಣಿಗೆ. ದಶಕದ ಹಿಂದೆ ಕೋಲಾರ ಚಿನ್ನದ ಗಣಿಯ ವಿಚಾರವಾಗಿ ಈ ನಾಡಿನಲ್ಲಿ ಸಾಕಷ್ಟು ಹೋರಾಟಗಳು ರೂಪುಗೊಂಡಿದ್ದವು. ಮಾತ್ರವಲ್ಲ, ಗಣಿಯೊಳಗಿಳಿದು ಚಿನ್ನ ತೆಗೆಯುವ ಕಾರ್ಮಿಕರ ಪರಿಸ್ಥಿತಿ, ಅವರ ಬದುಕು ಒಂದಲ್ಲ ನೂರು ಸಿನಿಮಾಗಾಗುವಷ್ಟು ಸರಕು ಹೊಂದಿದೆ. ಪ್ರಶಾಂತ್ ನೀಲ್ ಅಂಥದ್ದೊಂದು ಪ್ರಯತ್ನ ಮಾಡಿರುತ್ತಾರೆ ಅಂತಾ ಸದ್ಯಕ್ಕೆ ನಂಬೋಣ.

Leave a Reply

Your email address will not be published. Required fields are marked *


CAPTCHA Image
Reload Image