One N Only Exclusive Cine Portal

ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ ಕೊಟ್ಟ ನಟ ಚೇತನ್

ಆ ದಿನಗಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಚೇತನ್ ತಮ್ಮ ಜನಪರ ಸಾಮಾಜಿಕ ಕಾಳಜಿಯಿಂದ ಸಿನಿಮಾದಾಚೆಗೂ ಚಾಲ್ತಿಯಲ್ಲಿದ್ದಾರೆ. ಜೀವಪರವಾದ ಕೆಲಸ, ಕಾರ್ಯಕ್ರಮಗಳಿಗೆ ಸದಾ ಒತ್ತಾಸೆಯಾಗಿ ನಿಲ್ಲುತ್ತಾ ಬಂದಿರುವ ಅವರೀಗ ಹಾಸನದಲ್ಲಿ ಪಾಳುಬಿದ್ದ ಕೆರೆಗಳ ಹೂಳೆತ್ತುವ ಅಭಿಯಾನಕ್ಕೆ ಚಾಲನೆ ನೀಡುವ ಮೂಲ ಸಾರ್ಥಕ ಕಾರ್ಯವೊಂದಕ್ಕೆ ಶ್ರೀಕಾರ ಹಾಕಿದ್ದಾರೆ.
ಹಾಸನದ ಜನಪರ ಮನಸುಗಳು ಭೂಮಿ ಪ್ರತಿಷ್ಠಾನದ ಮೂಲಕ ಕೆರೆಗಳ ಹೂಳೆತ್ತುವ ಅಭಿಯಾನವೊಂದನ್ನು ಆಯೋಜಿಸಿದೆ. ಇದಕ್ಕೆ ನಟ ಚೇತನ್ ಖುದ್ದಾಗಿ ಚಾಲನೆ ನೀಡಿ ಹುರುಪು ತುಂಬಿದ್ದಾರೆ.
ಹೀಗೆ ಆರಂಭವಾದ ಹೂಳೆತ್ತುವ ಕಾರ್ಯ ಅವಿರತವಾಗಿ ಮೂರು ಕೆರೆಗಳ ಒಡಲು ತುಂಬಿದ್ದ ಹೂಳನ್ನು ಹೊರಕ್ಕೆತ್ತಿ ಹಾಕುವ ಮೂಲಕ ಒಂದು ಹಂತ ಮುಗಿಸಿದೆ. ಸಂತಸದ ಸಂಗತಿಯೆಂದರೆ, ಈ ಮೂರೂ ಕೆರೆಗಳಲ್ಲಿಯೂ ನೀರು ತುಂಬಿಕೊಳ್ಳಲಾರಂಭಿಸಿದೆ.
ಚಿತ್ರರಂಗದಲ್ಲಿ ಸ್ಟಾರ್‌ಗಿರಿಯನ್ನು ತಲೆ ಸೇರಿದಂತೆ ಸಕಲ ಪಾರ್ಟುಗಳಿಗೂ ತುಂಬಿಕೊಂಡು, ಸವರಿಕೊಂಡು ಮೆರೆದಾಡುವವರೇ ಹೆಚ್ಚು. ಇಂಥವರಿಗೆಲ್ಲ ಜನ ಸಾವಿರ ಸಂಕಷ್ಟಗಳ ನಡುವೆಯೂ ಕಾಸು ಹೊಂದಿಸಿ ಚಿತ್ರಗಳನ್ನು ನೋಡೋದರಿಂದಲೇ ತಮಗೆ ಸ್ಟಾರ್‌ಗಿರಿ ಅಮರಿಕೊಂಡಿದೆ ಎಂಬ ಕನಿಷ್ಠ ಸೌಜನ್ಯವೂ ಮರೆತು ಹೋಗಿರುತ್ತದೆ. ಆದ್ದರಿಂದಲೇ ಜನರ ಸಮಸ್ಯೆಗಳಿಗೆ ಮಿಡಿಯುವ ಮನಸ್ಥಿತಿ ಬಹುತೇಕರಿಗೆ ಇಲ್ಲವಾಗಿದೆ.
ಇಂಥಾ ವಾತಾವರಣದ ನಡುವೆ ನಟ ಚೇತನ್, ಯಶ್ ಮುಂತಾದ ನಟರ ನಡೆ ನಿಜಕ್ಕೂ ಮೆಚ್ಚುವಂಥಾದ್ದು…

Leave a Reply

Your email address will not be published. Required fields are marked *


CAPTCHA Image
Reload Image