One N Only Exclusive Cine Portal

ಕೈಕೊಟ್ಟಳಲ್ಲಾ ಸಂಯುಕ್ತಾ ….

ಕನ್ನಡ ಚಿತ್ರರಂಗದ ಹಣೆಬರಹವೇ ಹೀಗೆ. ಇಲ್ಲಿ ನಮ್ಮವರು ಎನಿಸಿಕೊಂಡವರೇ ಗೂಟ ಹೊಡೆಯೋದು. ಕಿರಿಕ್ ಪಾರ್ಟಿ ಎನ್ನುವ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಳಲ್ಲಾ? ಸಂಯುಕ್ತಾ ಹೆಗಡೆ… ಈಕೆಗೆ ಈಗಾಗಲೇ ಕುತ್ತಿಗೆ ಮೇಲೆ ತಲೆ ನಿಲ್ಲದಂತಾಗಿಬಿಟ್ಟಿದೆ. ಮೊದಲ ಸಿನಿಮಾ ಗೆದ್ದಮೇಲೆ ಒಂದಿಷ್ಟು ಅವಕಾಶಗಳು ಈಕೆಯನ್ನು ಹುಡುಕಿಕೊಂಡು ಹೋಗಿದ್ದವು. ತೀರಾ ಸುಂದರಿ ಅಲ್ಲದಿದ್ದರೂ ಡ್ಯಾನ್ಸು, ನಟನೆ ಚನ್ನಾಗಿದೆ ಅನ್ನೋ ಕಾರಣಕ್ಕೆ ಕನ್ನಡದ ಎರಡು ಸಿನಿಮಾಗಳಿಗೆ ಈಕೆ ನಾಯಕಿಯಾಗಿ ಆಯ್ಕೆಗೊಂಡಿದ್ದಳು. ಅದರಲ್ಲಿ, ಅನೀಶ್ ತೇಜೇಶ್ವರ್ ನಟನೆಯ ಒಂದು ಸಿನಿಮಾ ಮತ್ತು ಅಲೆಮಾರಿ ಖ್ಯಾತಿಯ ನಿರ್ದೇಶಕ ಸಂತು ನಿರ್ದೇಶನದಲ್ಲಿ, ಕೆಂಡಸಂಪಿಗೆ ವಿಕ್ಕಿ ಹೀರೋ ಆಗಿರುವ ಕಾಲೇಜು ಕುಮಾರ ಚಿತ್ರಗಳು ಮುಖ್ಯವಾದವು. ಈ ಎರಡೂ ಸಿನಿಮಾಗಳು ಶೂಟಿಂಗ್ ಆರಂಭಿಸುತ್ತಿವೆ. ಈ ಹೊತ್ತಿನಲ್ಲಿ ಸಂಯುಕ್ತಾ ಹೆಗಡೆ “ನನಗೆ ತಮಿಳಿನಲ್ಲಿ ಆಫರ್ ಬಂದಿದೆ. ನಾನು ಬರೋಕಾಗಲ್ಲ. ಬೇಕಿದ್ದರೆ ಬೇರೆಯವರನ್ನು ನೋಡಿಕೊಳ್ಳಿ ಎಂದು ವರಾತ ತೆಗೆದಿದ್ದಾಳಂತೆ. ಇತ್ತ ಈಕೆಗೊಪ್ಪುವಂತೆ ಸ್ಕ್ರಿಪ್ಟು ಮಾಡಿಕೊಂಡಿರೋ ಸಿನಿಮಾ ತಂಡದವರು, ಏಕಾಏಕಿ ಈಕೆ ಕೈಕೊಡಲು ನಿಂತಿರುವುದನ್ನು ಕಂಡು ದಿಗ್ಬ್ರಾಂತರಾಗಿದ್ದಾರೆ. ನಮ್ಮ ನೆಲದ ಹುಡುಗಿಯರು ಅಂತಾ ಕರೆದು ಅವಕಾಶ ಕೊಡೋದೇ ತಪ್ಪಾ? ಎನ್ನುವಷ್ಟರ ಮಟ್ಟಿಗೆ ಬೇಸರಗೊಂಡಿದ್ದಾರೆ. ಸಂಯುಕ್ತಾಳಂತ ನಟಿಯರಿಗೆ ತಮಿಳು ಚಿತ್ರವೊಂದು ಮುಖ್ಯವಾಗಿ, ಆ ಕಾರಣಕ್ಕೆ ಎರಡು ಕನ್ನಡ ಚಿತ್ರಗಳನ್ನು ಎಡಗಾಲಲ್ಲಿ ಒದೆಯುತ್ತಾಳೆಂದರೆ ಅದೆಷ್ಟು ಧಿಮಾಕಿರಬೇಕು ಲೆಕ್ಕಹಾಕಿ. ಪರಭಾಷಾ ಸಿನಿಮಾವೊಂದಕ್ಕಾಗಿ ಕನ್ನಡವನ್ನು, ಕನ್ನಡಿಗರ ಸಿನಿಮವನ್ನು ಕೇವಲವಾಗಿ ಕಾಣುತ್ತಿರುವ ಸಂಯುಕ್ತಾಳಂತ ನಟಿಯನ್ನು ನಮ್ಮ ಜನ ಸಾರಾಸಗಟಾಗಿ ತಿರಸ್ಕಾರ ಮಾಡುವುದು ಬಿಟ್ಟು ಬೇರೆ ಮಾರ್ಗವಿಲ್ಲ.

Leave a Reply

Your email address will not be published. Required fields are marked *


CAPTCHA Image
Reload Image