One N Only Exclusive Cine Portal

ಕ್ರೇಜಿಸ್ಟಾರ್ ಚಿತ್ರದಿಂದ ಪ್ರಿಯಾಮಣಿ ಹೊರಬಿದ್ದಿದ್ದೇಕೆ?

ಕ್ರೇಜಿಸ್ಟಾರ್ ನಟನೆಯ ಬಹು ನಿರೀಕ್ಷಿತ ಚಿತ್ರ ‘ದಶರಥ. ಇನ್ನೇನು ಮುಕ್ತಾಯದ ಹಂತದಲ್ಲಿರೋ ಈ ಚಿತ್ರದಿಂದ ನಾಯಕಿ ಪ್ರಿಯಾಮಣಿ ಹೊರ ಬಿದ್ದಿರೋ ಸುದ್ದಿಯೊಂದು ಲೇಟೆಸ್ಟಾಗಿ ಹೊರಬಿದ್ದಿದೆ.
ಇದೀಗ ಮುಸ್ತಫಾರನ್ನು ಮದುವೆಯಾಗಿ ಹ್ಯಾಪಿ ಮೂಡಿನಲ್ಲಿರೋ ಪ್ರಿಯಾಮಣಿ ಈ ಚಿತ್ರದಿಂದ ಹೊರ ಬೀಳುತ್ತಲೇ ತಮಿಳು ನಟಿ ಅಭಿರಾಮಿ ಆ ಜಾಗಕ್ಕೆ ಬಂದು ಸೇರಿದ್ದಾರೆ. ಒಂದು ಮೂಲದ ಪ್ರಕಾರ ಶೇಕಡಾ ನಲವತ್ತರಷ್ಟು ಚಿತ್ರೀಕರಣವಾಗಿದ್ದ ಈ ಚಿತ್ರಕ್ಕೀಗ ಹೊಸದಾಗಿಯೆ ಚಿತ್ರೀಕರಣ ಶುರು ಮಾಡಲಾಗಿದೆಯಂತೆ.
ಪ್ರಿಯಾಮಣಿ ಕನ್ನಡ ಸೇರಿದಂತೆ ನಾನಾ ಭಾಷೆಗಳಲ್ಲಿ ನಟಿಸಿ ಹೆಸರು ಮಾಡಿರೋ ನಟಿ. ಆದರೆ ಯಾವುದೇ ರೀತಿಯ ಕಿರಿಕ್ಕುಗಳ ಮೂಲಕ ಸದ್ದು ಮಾಡಿದವರಲ್ಲ. ಆದರೆ ಕ್ರೇಜಿಸ್ಟಾರ್ ರವಿಚಂದ್ರನ್ ಚಿತ್ರದಿಂದ ಅವರು ಹೊರ ಬೀಳಲು ಏನು ಕಾರಣ ಎಂಬ ಪ್ರಶ್ನೆ ಕಾಡೋದು ಸಹಜವೇ.
ಪ್ರಿಯಾಮಣಿ ಮದುವೆಯಾಗಿ ಬ್ಯುಸಿಯಾಗಿರೋದರಿಂದ ಡೇಟ್ಸ್ ಹೊಂದಾಣಿಕೆಯಾಗದಿರೋದು ಈ ವಿದ್ಯಾಮಾನಕ್ಕೆ ಕಾರಣವಾ ಅಥವಾ ಸಂಭಾವನೆಯ ತಗಾದೆಯೇನಾದರೂ ಕಾರಣವಾಗಿರಬಹುದಾ ಎಂಬ ಗುಮಾನಿ ಇದ್ದೇ ಇದೆ!

Leave a Reply

Your email address will not be published. Required fields are marked *


CAPTCHA Image
Reload Image