One N Only Exclusive Cine Portal

ಗಾಣಗಟ್ಟಿ ಮಾಯಮ್ಮ ದೇವಿಯ ಹಾಡು

ಈಗ ಕನ್ನಡ ಚಿತ್ರರಂಗದಲ್ಲಿ ಹೊಸಾ ಆಲೋಚನೆಯ ಚಿತ್ರಗಳ ಗಾಳಿ ಜೋರಾಗಿ ಬೀಸುತ್ತಿದೆ. ಇದರ ನಡುವೆಯೇ ದೆವ್ವದ ಸಿನಿಮಾಗಳ ಹಾವಳಿಯೂ ವಿಪರೀತ ಎಂಬಂತಿದೆ. ಇದರ ನಡುವೆ ಕೆಲ ಕಾಲದಿಂದ ಭಕ್ತಿಪ್ರಧಾನ ಚಿತ್ರಗಳ ಸಂಖ್ಯೆ ಕಡಿಮೆಯಾದಂತಿತ್ತು. ಆದರೀಗ ಭಕ್ತಿರಸವನ್ನೇ ಪ್ರಧಾನವಾಗಿ ಹೊಂದಿರೋ ಜ್ಯೋತಿರ್ಗಮಯ ಚಿತ್ರ ಸದ್ದಿಲ್ಲದೆ ಚಿತ್ರೀಕರಣ ಮುಗಿಸಿಕೊಂಡು ಹಾಡುಗಳನ್ನು ಲೋಕಾರ್ಪಣೆ ಮಾಡಿದೆ.
ಡಿವಿಜಿ ನಾಗರಾಜ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಚಿತ್ರದ ಐದು ಹಾಡುಗಳಿಗೆ ವಿನು ಮನಸು ಸಾಹಿತ್ಯ ಒದಗಿಸಿದ್ದಾರೆ. ಜೇಮ್ಸ್ ಸಂಗೀತ ನೀಡಿದ್ದಾರೆ. ಈ ಗೋವಿಂದರಾಜು ನಿರ್ಮಾಣ ಮಾಡಿರೋ ಈ ಚಿತ್ರ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗಾನಗಟ್ಟಿ ಮಾಯಮ್ಮ ಮಹಾತ್ಮೆಯ ಕಥಾ ಹಂದರವನ್ನು ಒಳಗೊಂಡಿದೆ.
ನಂಬಿದವರ ಸಕಲ ಇಷ್ಟಾರ್ಥಗಳನ್ನು ನೆರವೇರಿಸೋ ಮಾಯಮ್ಮ ಇಂದಿನ ಯುವಕರು ಭಕ್ತಿ ಮಾರ್ಗ ಬಿಟ್ಟು ಅಡ್ಡ ಹಾದಿ ಹಿಡಿದಾಗ ಹೇಗೆ ಕಾಪಾಡುತ್ತಾಳೆಂಬ ಕಥಾ ಹಂದರ ಈ ಚಿತ್ರದ್ದಂತೆ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿರುವವರು ಭೀಮೇಶ್. ನಾಯಕಿ ಸಿಂಧೂ ರಾವ್ ಮೂರು ಶೇಡ್ ಹೊಂದಿರೋ ಪಾತ್ರದಲ್ಲಿ ನಟಿಸಿದ್ದಾರಂತೆ. ಇನ್ನೇನು ತೆರೆ ಕಾಣಲು ಸಜ್ಜಾಗಿರೋ ಈ ಚಿತ್ರದ ಹಾಡುಗಳನ್ನು ಸುದೀಪ್ ಅಭಿಮಾನಿ ಸಂಘದ ಅಧ್ಯಕ್ಷರಾದ ರವೀಂದ್ರ ಸಿಂಗ್ ಅನಾವರಣಗೊಳಿಸಿದ್ದಾರೆ.

Leave a Reply

Your email address will not be published. Required fields are marked *


CAPTCHA Image
Reload Image