One N Only Exclusive Cine Portal

ಗೆದ್ದರೆ ಮಾತ್ರ ಲೆಕ್ಕಾನಾ ಚೈತನ್ಯಾ?

ಗೆದ್ದ `ಆ ದಿನಗಳು ಮಾತ್ರ ನೆನಪಿನಲ್ಲುಳಿದರೆ ಸಾಕಾ? ಸೋತ ಸಿನಿಮಾಗಳು ಲೆಕ್ಕಕ್ಕಿಲ್ಲವಾ?
ನಿರ್ದೇಶಕ ಚೈತನ್ಯ ಅವರ ವರಸೆಗಳನ್ನು ನೋಡಿದರೆ ಇಂಥದ್ದೊಂದು ಪ್ರಶ್ನೆ ಸಹಜವಾಗೇ ಹುಟ್ಟಿಕೊಳ್ಳುತ್ತದೆ.
`ಆ ದಿನಗಳು ಸಿನಿಮಾ ಕನ್ನಡ ಚಿತ್ರರಂಗದ ಮಟ್ಟಿಗೆ ಮಾಸ್ಟರ್ ಪೀಸು ಅನ್ನೋದು ನಿಜ. ಆದರೆ ಆ ಸಿನಿಮಾದ ಗೆಲುವು ಚೈತನ್ಯ ಒಬ್ಬರದ್ದೇ ಅಲ್ಲ. ಈ ಚಿತ್ರಕ್ಕೆ ಚೈತನ್ಯ ನಿರ್ದೇಶಕ ಅಂತಾ ನಿಕ್ಕಿಯಾಗೋ ಮೊದಲೇ ಸ್ಕ್ರಿಪ್ಟು, ಸ್ಕ್ರೀನ್ ಪ್ಲೇ ಮೊದಲುಗೊಂಡು ಸ್ಟೋರಿ ಬೋರ್ಡ್ ತನಕ ಸಿನಿಮಾಗೆ ಬೇಕಿರುವ ಸಕಲ ರೀತಿಯ ತಯ್ಯಾರಿಗಳು ಮುಗಿದಿದ್ದವು. ಸಾಕಷ್ಟು ಮಂದಿ ಬುದ್ದಿಜೀವಿಗಳ ಮಾರ್ಗದರ್ಶನವೂ ಒಳಗೊಂಡಂತೆ ಕೆಲವು ಪ್ರತಿಭಾವಂತ ಮನಸ್ಸುಗಳು `ಆ ದಿನಗಳು ಚಿತ್ರಕ್ಕೆ ಅಡಿಪಾಯ ಹಾಕಿದ್ದವು. ಎಲ್ಲಕ್ಕಿಂತ ಮುಖ್ಯವಾಗಿ ಬರಹಗಾರರೂ ಆಗಿರುವ ಅಗ್ನಿ ಶ್ರೀಧರ್ ಅವರದ್ದೇ ಕಥೆಯಾಗಿದ್ದರಿಂದ ಸಲೀಸಾಗಿ ಕಥೆ ರೆಡಿಯಾಗಿತ್ತು. ಸಿನಿಮಾ ಇನ್ನೇನು ಶುರುವಾಗಬೇಕು ಎನ್ನುವಾಗ ಕಡೇ ಘಳಿಗೆಯಲ್ಲಿ ಚೈತನ್ಯ ನಿರ್ದೇಶಕರಾಗಿ ಘೋಷಣೆಯಾಗಿದ್ದರು. ಹೀಗಿದ್ದೂ `ಆ ದಿನಗಳು ಸಿನಿಮಾದ ಯಶಸ್ಸನ್ನು ಅತಿ ಹೆಚ್ಚು ಬಳಸಿಕೊಂಡವರು ಕೆ.ಎಂ. ಚೈತನ್ಯ.
ಇದಾದ ನಂತರ ಇದೇ ಚೈತನ್ಯ ನಿರ್ದೇಶಿಸಿದ ಸೂರ್ಯಕಾಂತಿ ಮತ್ತು ಪರಾರಿ ಎಂಬೆರಡು ಚಿತ್ರಗಳು ಗುರುತು ಕೂಡಾ ಸಿಗದಂತೆ ಕಳೆದುಹೋದವು. ಆ ನಂತರ ಬಂದ `ಆಟಗಾರ ಬಾಕ್ಸ್ ಆಫೀಸಿನಲ್ಲಿ ಅಂತಾ ಕಲೆಕ್ಷನ್ ಮಾಡದಿದ್ದರೂ ನೋಡಿದವರು ಮೆಚ್ಚಿಕೊಂಡಿದ್ದರು.
ಸದ್ಯ ಚೈತನ್ಯ `ಆಕೆ ಎನ್ನುವ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದ ಪತ್ರಿಕಾ ಹೇಳಿಕೆ, ಪ್ರೆಸ್ ಮೀಟು ಸೇರಿದಂತೆ ಎಲ್ಲಾ ಕಡೆ “ಆ ದಿನಗಳು ಮತ್ತು `ಆಟಗಾರ ಸಿನಿಮಾದ ಯಶಸ್ವಿ ನಿರ್ದೇಶಕ ಎಂದಷ್ಟೇ ಬಳಸುತ್ತಿದ್ದಾರೆ. ಹಾಗೆ ನೋಡಿದರೆ ಚೈತನ್ಯ ಬತ್ತಳಿಕೆಯಿಂದ `ಇದು ನನ್ನ ಗೆಲುವು ಅಂತಾ ಎದೆತಟ್ಟಿಕೊಂಡು ಹೇಳುವ ಸಿನಿಮಾಗಳು ಇನ್ನಷ್ಟೇ ಬರಬೇಕಿದೆ. ಹೀಗಿದ್ದೂ ಸೋತ ಚಿತ್ರಗಳನ್ನು ಚೈತನ್ಯ ಯಾಕೆ ಲೆಕ್ಕಕ್ಕಿಟ್ಟುಕೊಂಡಿಲ್ಲ?
ಚೈತನ್ಯ ಅವರೇ ಉತ್ತರಿಸಬೇಕು…

Leave a Reply

Your email address will not be published. Required fields are marked *


CAPTCHA Image
Reload Image