One N Only Exclusive Cine Portal

ಗೆಳೆಯನ ಚಿತ್ರಕ್ಕೆ ರಾಕಿಂಗ್‌ಸ್ಟಾರ್ ಸಾಥ್!

ಡಾ. ಮಂಜುನಾಥ್ ನಿರ್ಮಾಣದ, ಅಭಿರಾಮ್ ನಿರ್ದೇಶನದ ಸಂಯುಕ್ತ-೨ ಚಿತ್ರದ ಹಾಡುಗಳನ್ನು ಅದ್ದೂರಿ ಸಮಾರಂಭದ ಮೂಲಕ ರಾಕಿಂಗ್ ಸ್ಟಾರ್ ಯಶ್ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಹೊಸಾ ಪ್ರಯತ್ನವೊಂದಕ್ಕೆ ಬಿಡುವು ಮಾಡಿಕೊಂಡು ಬಂದು ಉತ್ತೇಜನ ನೀಡಿರೋ ಯಶ್ ತಾವೇ ನಡೆದು ಬಂದ ಹಾದಿಯತ್ತ ಕಣ್ಣರಳಿಸಿ ನೋಡಿ, ಆ ಕಾಲದಲ್ಲಿ ತಮಗೆ ಉತ್ತೇಜನ ನೀಡಿದ ಅಂಶಗಳನ್ನು ಮೆಲುಕು ಹಾಕಿದ್ದಾರೆ.
ಈ ಸಮಾರಂಭದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಕಡೆಯಿಂದ ಆಡಿಯೋ ಲಾಂಚ್ ಆಗಿದ್ದರ ಬಗ್ಗೆ ತೃಪ್ತಿಯ ಭಾವದಿಂದ ಸಂತಸಗೊಂಡಿದ್ದವರು ನಿರ್ಮಾಪಕ ಡಾ. ಮಂಜುನಾಥ್. ಅವರೇ ತಮ್ಮ ಬ್ಯುಸಿ ಕೆಲಸ ಕಾರ್ಯಗಳ ನಡುವೆಯೂ ಬಂದು ಸಂಯುಕ್ತ-೨ ಚಿತ್ರದ ಆಡಿಯೋ ಬಿಡುಗಡೆ ಮಾಡಿದ ಯಶ್ ಅವರ ಸಹೃದಯತೆಯನ್ನು ಕೊಂಡಾಡಿದರು.
ನಂತರ ಮಾತಾಡಿದ ಯಶ್ ಹೊರಳಿಕೊಂಡಿದ್ದು ತಾವೇ ನಡೆದು ಬಂದ ದಾರಿಯತ್ತ. ‘ಮಂಜುನಾಥ್ ಅವರೂ ಕೂಡಾ ನಾನು ಬಿಡುವು ಮಾಡಿಕೊಂಡು ಬಂದು ಹೊಸಬರ ತಂಡಕ್ಕೆ ಉತ್ತೇಜನ ನೀಡಿದ್ದರ ಬಗ್ಗೆ ಹೊಗಳಿದರು. ಆದರೆ ನಾನಿವತ್ತು ಈ ಸ್ಥಾನದಲ್ಲಿದ್ದರೆ ಆ ದಿನಗಳಲ್ಲಿ ಕೆಲ ಹಿರಿಯರು ತೋರಿದ ಔದಾರ್ಯವೇ ಕಾರಣ. ಆವತ್ತು ಅಂಬರೀಶ್ ಅವರು ನನ್ನ ಸಿನಿಮಾಗಳ ಆಡಿಯೋ ಲಾಂಚ್, ಟ್ರೈಲರ್ ಬಿಡುಗಡೆ ಮುಂತಾದವುಗಳಿಗೆ ಬಂದು ಉತ್ತೇಜನ ನೀಡಿದ್ದರು. ಆವತ್ತು ಅವರೊಂದು ಮಾತು ಹೇಳಿದ್ದರು; ನಾನು ಒಂದೆರಡು ನಿಮಿಷ ಬಿಡುವು ಮಾಡಿಕೊಂಡು ಬಂದರೆ ಯಾರಿಗಾದರೂ ಉಪಯೋಗ ಆಗುತ್ತದೆ ಅಂತಾದರೆ ಯಾಕೆ ಬರಬಾರದು ಅಂತ. ನಾನೂ ಕೂಡಾ ಈವತ್ತು ಅದೇ ಮಾತಿನ ಪ್ರಕಾರವಾಗಿ ಬಂದಿದ್ದೇನೆ. ಅದರಿಂದ ಏನಾದರೂ ಉಪಯೋಗವಾಗೋವಂತಿದ್ದರೆ ಖಂಡಿತಾ ಖುಷಿ ಪಡುತ್ತೇನೆ ಇದು ಯಶ್ ಮನದುಂಬಿ ಮಾತಾಡಿದ ಸಂಪೂರ್ಣ ಸಾರಾಂಶ.
ಇನ್ನುಳಿದಂತೆ ಈ ಚಿತ್ರದ ನಾಯಕ ಚೇತನ್ ಚಂದ್ರ ಈ ಹಿಂದೆ ರಾಜಧಾನಿ ಚಿತ್ರದಲ್ಲಿ ಯಶ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದವರು. ಗೆಳೆಯನ ಈ ಯಾನವನ್ನೂ ನೆನಪಿಸಿಕೊಂಡ ಯಶ್, ಚೇತನ್ ಅವರ ಬಾಡಿ ಬಿಲ್ಡ್ ಶ್ರಮದ ಬಗ್ಗೆ, ಅವರ ನಟನೆಯೆಡೆಗಿನ ಪ್ರೀತಿಯ ಬಗ್ಗೆ ಮಾತಾಡುತ್ತಲೇ ಒಳಿತಾಗಲೆಂದು ಹರಸಿದರು.
ಈ ಹಿಂದಿನಿಂದಲೂ ಸ್ಟಾರ್ ನಟರ ಸಾಥ್‌ನೊಂದಿಗೆ ಸದ್ದು ಮಾಡುತ್ತಿರೋ ಈ ಚಿತ್ರದ ಹಾಡುಗಳು ಯಶ್ ಕೈಯಿಂದ ಬಿಡುಗಡೆಯಾಗಿ ಇದೀಗ ಜನಪ್ರಿಯವಾಗುತ್ತಿವೆ.

Leave a Reply

Your email address will not be published. Required fields are marked *


CAPTCHA Image
Reload Image