One N Only Exclusive Cine Portal

‘ಗೋಧಿ ಬಣ್ಣಕ್ಕೆ’ ಫಿದಾ ಆದ ಪ್ರಕಾಶ್ ರೈ

‘ಗೋಧಿ ಬಣ್ಣಕ್ಕೆ’ ಫಿದಾ ಆದ ಪ್ರಕಾಶ್ ರಾಜ್ ಯುವ ನಿರ್ದೇಶಕ ಹೇಮಂತ್ ರಾವ್’ರ ಚೊಚ್ಚಲ ನಿರ್ದೇಶನದ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದ ಹಾಡುಗಳು ಸಂಗೀತ ಪ್ರಿಯರನ್ನು ಮೋಡಿ ಮಾಡುವಲ್ಲಿ ಯಶಸ್ವಿಯಾಗಿದೆ.

ಆದರೆ ಈ ಬಾರಿ ಚಿತ್ರದ ಹಾಡಿಗೆ ಫಿದಾ ಆಗಿರುವುದು ಮತ್ತ್ಯಾರು ಅಲ್ಲ, ಪಂಚಭಾಷಾ ತಾರೆ ನಟ/ನಿರ್ದೇಶಕ ಪ್ರಕಾಶ್ ರಾಜ್ ಎಂಬುದು ವಿಶೇಷ.

ನಟ ರಕ್ಷಿತ್ ಶೆಟ್ಟಿ ಸಾಹಿತ್ಯ ರಚಿಸಿ, ಸಿದ್ದಾರ್ತ್ ಧ್ವನಿಯಲ್ಲಿ ಮೂಡಿಬಂದ “ಈ ಸಂಜೆಗೆ” ಗೀತೆಯನ್ನು ಕೇಳಿರುವ ನಟ ಪ್ರಕಾಶ್ ರಾಜ್ ಹಾಡಿಗೆ ಫುಲ್ ಫಿದಾ ಆಗಿದ್ದರಲ್ಲದೆ ಚಿತ್ರತಂಡ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಚಿತ್ರಗೀತೆಯನ್ನು ವೀಕ್ಷಿಸಿರುವ ಈ ಮೇರುನಟ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರತಂಡದ ಬಗ್ಗೆ ಹೆಮ್ಮೆಯಿದೆ ಎಂದು ತಮ್ಮ ಸಮಾಜಿಕ ತಾಣದಲ್ಲಿ ತಿಳಿಸಿದ್ದಾರೆ. ಭಾರತೀಯ ಮತ್ತು ಪಶ್ಚಿಮಾತ್ಯ ಸಂಗೀತದ ಫ್ಯೂಷನ್ ಮಿಕ್ಸ್’ನೊಂದಿಗೆ ಸಂಗೀತ ನೀಡಿರುವ ನವ ಪ್ರತಿಭೆ ಚರಣ್ ರಾಜ್’ರ ಕಂಪೋಸಿಂಗ್’ಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ಹಿಂದೆ ರಾಷ್ಟ್ರ ಪ್ರಶಸ್ತಿ ವಿಜೇತ ‘ಹರಿವು’ ಚಿತ್ರಕ್ಕೆ ಯುವ ಸಂಗೀತ ನಿರ್ದೇಶಕ ಚರಣ್ ರಾಜ್ ಸಂಗೀತ ಸಂಯೋಜಿಸಿದ್ದರು. ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದಲ್ಲಿ ಹೊಸ ತಾಜಾತನದೊಂದಿಗೆ ಒಟ್ಟು ೧೦ ಹಾಡುಗಳಿವೆ. ಈ ಎಲ್ಲಾ ಗೀತೆಗಳು ಚಿತ್ರ ನಿರೂಪಣೆಯ ಹಿನ್ನಲೆ ಗೀತೆಗಳಾಗಿ ಮೂಡಿಬರಲಿದೆ ಎಂದು ಹೇಳಲಾಗಿದೆ. ರಕ್ಷಿತ್ ಶೆಟ್ಟಿ, ಅನಂತ್ ನಾಗ್’ರೊಂದಿಗೆ ಶೃತಿ ಹರಿಹರನ್, ಅಚ್ಯುತ್ ಕುಮಾರ್ ಕೂಡ ಸಿನೆಮಾದಲ್ಲಿ ನಟಿಸಿದ್ದಾರೆ. ಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿರುವ ಮಿಸ್ಸಿಂಗ್ ಕಥೆ ಹೇಳುವ ಈ ಚಿತ್ರವು ಶೀಘ್ರದಲ್ಲೇ ತೆರೆಗೆ ಬರಲಿದೆ.

★ಕಪ್ಪು ಮೂಗುತ್ತಿ

Leave a Reply

Your email address will not be published. Required fields are marked *


CAPTCHA Image
Reload Image