One N Only Exclusive Cine Portal

ಗ್ಯಾಪಲ್ಲೊಂದು ಸಿನಿಮಾ!

ಒಂದು ಸಿನಿಮಾ ಶುರುವಾಯಿತೆಂದರೆ ಅದು ತೆರೆಗೆ ಬರೋ ತನಕವೂ ನೀರ ಮೇಲಿನ ಗುಳ್ಳೆಯಂತೆಯೇ; ಯಾವಾಗ ಒಡೆದು ಛಿದ್ರವಾಗುತ್ತದೋ ಹೇಳಲು ಬರುವುದಿಲ್ಲ. ಹೀಗೆ ನಿಂತು ಹೋದ ಚಿತ್ರಗಳ ದಂಡಿ ದಂಡಿ ಉದಾಹರಣೆಗಳು ಸಿಗುತ್ತವೆ. ಆದರೆ ಇಂಥಾ ಚಿತ್ರಗಳ ನಿರ್ದೇಶಕರು, ತಂಡದವರು ಆ ಗ್ಯಾಪಲ್ಲಿ ಹತಾಶರಾಗೋದೇ ಹೆಚ್ಚು.
ಆದರೆ ನಿರ್ದೇಶಕ ಮಂಜು ಹೆದ್ದೂರ್ ತುಸು ಡಿಫರೆಂಟು. ಇವರು ಈ ಹಿಂದೆ ಭಾರೀ ತಯಾರಿ ನಡೆಸಿ ಒಂದು ಚಿತ್ರವನ್ನು ನಿರ್ದೇಶನ ಮಾಡಲು ಹೊರಟು ಚಿತ್ರೀಕರಣವೂ ಆರಂಭವಾಗಿತ್ತು. ಆದರೆ ಅದು ಅಷ್ಟೇ ವೇಗವಾಗಿ ನಿಂತು ಹೋಗಿತ್ತು. ಇದರಿಂದ ಆಘಾತವಾದರೂ ಸಹಿಸಿಕೊಂಡ ಮಂಜು ಆ ಗ್ಯಾಪಲ್ಲಿ ಒಂದು ಚಿತ್ರ ಅಣಿಗೊಳಿಸಿದ್ದಾರೆ. ಅದಕ್ಕೆ ‘ಗ್ಯಾಪಲ್ಲೊಂದು ಸಿನಿಮಾ ಅಂತಲೇ ಶೀರ್ಷಿಕೆಯನ್ನೂ ಇಟ್ಟಿದ್ದಾರೆ!
ಅಂದಹಾಗೆ ಇದು ಸಂಪೂರ್ಣವಾಗಿ ಹಳ್ಳಿಗಾಡಿನ ಕಥೆ ಹೊಂದಿರುವ ಕಾಮಿಡಿ ಥ್ರಿಲ್ಲರ್ ಕಥಾ ಹಂದರ ಹೊಂದಿರೋ ಚಿತ್ರ. ಶಶಿ ನಾಯಕನಾಗಿರೋ ಈ ಚಿತ್ರದಲ್ಲಿ ಮಮತಾ ರಾವುತ್ ನಾಯಕಿ. ಶರವಣ ವೈದೇಹಿ ನಿರ್ಮಾಣದ ಈ ಚಿತ್ರವನ್ನು ಮಡೇನೂರು ಎಂಬ ಗ್ರಾಮದಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆಯಂತೆ.

Leave a Reply

Your email address will not be published. Required fields are marked *


CAPTCHA Image
Reload Image