One N Only Exclusive Cine Portal

ಚಾನೆಲ್ ಗಳ ಆತ್ಮಕ್ಕೆ ಶಾಂತಿ ಕೋರಿದ ದರ್ಶನ್ ಅಭಿಮಾನಿಗಳು!

Darshan-10ಕನ್ನಡದ ಬಹುತೇಕ ಚಾನೆಲ್’ಗಳು ದರ್ಶನ್ ಅವರ ಸಿನಿಮಾಗಳ ಕುರಿತು ಸುದ್ದಿ ಮಾಡುವುದಕ್ಕಿಂತ ಅವರ ಖಾಸಗೀ ಬದುಕಿನ ಬಗ್ಗೆಯೇ ಹೆಚ್ಚು ಫೋಕಸ್ ಮಾಡುತ್ತವೆ. ಸಿನಿಮಾ ನಟರ ಪರ್ಸನಲ್ ಲೈಫಿನ ಬಗ್ಗೆ ಪ್ರಚಾರ ಮಾಡಿ ಟಿಆರ್’ಪಿ ಪಡೆದು ಆ ಮೂಲಕ ಹಣ ಮಾಡಿಕೊಳ್ಳುವ ತಂತ್ರ ರೂಪಿಸುತ್ತಾರೆ. ತಮ್ಮ ವೃತ್ತಿಧರ್ಮವನ್ನು ಮರೆತು, ನೋಡುಗರನ್ನು ದಿಕ್ಕು ತಪ್ಪಿಸುತ್ತಿವೆ. `ಈ ಕಾರಣಕ್ಕೇ ನಮ್ಮ ಬಾಸ್ ದರ್ಶನ್ ಮೀಡಿಯಾಗಳಿಂದ ಸದಾ ದೂರವೇ ಉಳಿ ಏಕಾಂಗಿ ಹೋರಾಟಗಾರರಂತಾಗಿದ್ದಾರೆ’ ಎಂದು ವಾಹಿನಿಗಳ ವಿರುದ್ಧ ಆರೋಪಿಸಿರುವ `ಡಿ’ ಕಂಪೆನಿ ಫಾರಿನ್ ಮೀಡಿಯಾಗಳನ್ನು ನೋಡಿ ಕಲಿಯಿರಿ ಎನ್ನುವ ಸಂದೇಶವನ್ನೂ ರವಾನಿಸಿದೆ. ಮಾತ್ರವಲ್ಲ, ಕನ್ನಡದ ಬಹುತೇಕ ಚಾನೆಲ್’ಗಳ ಲೋಗೋ ಹಾಕಿ `ಆರ್.ಐ.ಪಿ. ಟು ದಿಸ್ ಯೂಸ್’ಲೆಸ್ ಮೀಡಿಯಾ’ ಎಂದು ವಾಹಿನಿಗಳ ಆತ್ಮಕ್ಕೆ ಚಿರಶಾಂತಿ ಕೋರಿದ್ದಾರೆ!

ದರ್ಶನ್ ಅಭಿಮಾನಿಗಳಿಗೂ ಕನ್ನಡದ ನ್ಯೂಸ್ ಚಾನೆಲ್ ಗಳಿಗೂ ನಡುವೆ ಕಂದಕ ಸೃಷ್ಟಿಯಾಗೋದು ಬೇಡ ಅನ್ನೋದು ನಮ್ಮ ಬಯಕೆ.

3 thoughts on “ಚಾನೆಲ್ ಗಳ ಆತ್ಮಕ್ಕೆ ಶಾಂತಿ ಕೋರಿದ ದರ್ಶನ್ ಅಭಿಮಾನಿಗಳು!

Leave a Reply

Your email address will not be published. Required fields are marked *


CAPTCHA Image
Reload Image