One N Only Exclusive Cine Portal

ಚಾಲೆಂಜಿಂಗ್ ಸ್ಟಾರ್‌ಗೆ ಬ್ರಿಟೀಶ್ ಪಾರ್ಲಿಮೆಂಟಿಂದ ಗೌರವ!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ತಾರಕ್ ಚಿತ್ರದ ಭರ್ಜರಿ ಯಶಸ್ಸಿನಿಂದ ಖುಷಿಗೊಳ್ಳುತ್ತಲೇ ಕುರುಕ್ಷೇತ್ರ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೆಗಾ ಗೌರವವೊಂದಕ್ಕೆ ಪಾತ್ರರಾಗಿದ್ದಾರೆ. ಬ್ರಿಟಿಶ್ ಪಾರ್ಲಿಮೆಂಟ್‌ನಿಂದ ದರ್ಶನ್ ಅವರನ್ನು ಗೌರವಿಸಯವ ಸಂಬಂಧವಾಗಿ ಆಹ್ವಾನ ಬಂದಿದೆ!
ಇದು ನಿಜಕ್ಕೂ ಯಾವುದೇ ಭಾಷೆಯ ನಟರಿಗಾದರೂ ಅತ್ಯಂತ ಗೌರವದ, ಹೆಮ್ಮೆಯ ವಿಚಾರ. ಈ ಮೂಲಕ ಬ್ರಿಟಿಶ್ ಪಾರ್ಲಿಮೆಂಟ್‌ನಿಂದ ಇಂಥಾದ್ದೊಂದು ಗೌರವ ಪಡೆದ ಮೊದಲ ದಕ್ಷಿಣ ಭಾರತದ ನಟ ಎಂಬ ಹೆಗ್ಗಳಿಕೆಗೂ ದರ್ಶನ್ ಪಾತ್ರರಾಗಿದ್ದಾರೆ.
ಈ ಹಿಂದೆ ಸಲ್ಮಾನ್ ಖಾನ್ ಅವರು ಇಂಥಾದ್ದೊಂದು ಗೌರವಕ್ಕೆ ಭಾಜನರಾಗಿದ್ದರು. ಇದೀಗ ಕನ್ನಡ ಚಿತ್ರರಂಗಕ್ಕೆ ದರ್ಶನ್ ಅವರ ಮೂಲಕ ಇಂಥಾದ್ದೊಂದು ಗೌರವ ಒಲಿದು ಬಂದಿದೆ. ಇದಕ್ಕಾಗಿ ದರ್ಶನ್ ಇದೇ ೧೮ರಂದು ಲಂಡನ್‌ಗೆ ತೆರಳಿ ೧೯ರಂದು ಬ್ರಿಟಿಶ್ ಸಂಸತ್ತಿನಲ್ಲಿ ಗೌರವ ಸ್ವೀಕರಿಸಿ ನಂತರ ೨೬ನೇ ತಾರೀಕಿನಿಂದ ಮತ್ತೆ ಕುರುಕ್ಷೇತ್ರ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © CINIBUZZ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Leave a Reply

Your email address will not be published. Required fields are marked *


CAPTCHA Image
Reload Image