One N Only Exclusive Cine Portal

ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಮಹಾ ದ್ರೋಹ!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಲಂಡನ್ ಕನ್ನಡಿಗರೆಂಬ ಬೋರ್ಡು ತಗುಲಿಸಿಕೊಂಡು ದಂಧೆ ನಡೆಸುತ್ತಾ ಬಂದಿರೋ ಕೆಲ ಐನಾತಿಗಳ ದಗಲ್ಬಾಜಿತನದ ಮುಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಿಗ್ಗಿ ಬಿದ್ದರಾ? ಇಂಥಾದ್ದೊಂದು ಪ್ರಶ್ನೆ ಅವರ ಅಭಿಮಾನಿ ವಲಯದಲ್ಲೇ ಹುಟ್ಟಿಕೊಂಡಿದೆ. ಇದಕ್ಕೆ ಕಾರಣವಾಗಿರೋದು ದರ್ಶನ್ ಅವರಿಗೆ ಬ್ರಿಟಿಶ್ ಪಾರ್ಲಿಮೆಂಟ್ ಪ್ರಶಸ್ತಿ ನೀಡಿ ಗೌರವಿಸಿದೆ ಎಂಬೋ ಸುದ್ದಿ!

ದರ್ಶನ್ ಅವರಿಗೆ ಬ್ರಿಟೀಶ್ ಪಾರ್ಲಿಮೆಂಟ್ ಪ್ರಶಸ್ತಿ ಕೊಟ್ಟು ಗೌರವಿಸುತ್ತಿದೆ, ಅವರು ಈ ಮೂಲಕ ಇಂಥಾದ್ದೊಂದು ಗೌರವ ಪಡೆದ ದಕ್ಷಿಣ ಭಾರತದ ಮೊದಲ ನಟ ಎಂಬ ಗೌರವಕ್ಕೆ ಪಾತ್ರರಾಗುತ್ತಿದ್ದಾರೆಂದಾಕ್ಷಣ ಯಾರಿಗಾದರೂ ಖುಷಿಯಾಗದಿರಲು ಸಾಧ್ಯವೇ? ಅದು ಖಂಡಿತವಾಗಿಯೂ ಕನ್ನಡ ಚಿತ್ರರಂಗಕ್ಕೆ ಸಿಗೋ ಗೌರವವೂ ಹೌದು. ಇದೀಗ ದರ್ಶನ್ ಲಂಡನ್ ತಲುಪಿ ಸದರಿ ಪ್ರಸಸ್ತಿಯನ್ನು ಪಡೆದೂ ಆಗಿದೆ. ಕರ್ನಾಟಕದ ಮೀಡಿಯಾಗಳಲ್ಲಿ ಆ ಬಗ್ಗೆ ಸಂಭ್ರಮವೂ ಪ್ರಸಾರವಾಗಿದೆ.
ಆದರೆ… ಈ ಸಂಭ್ರಮದ ನಡುವೆಯೇ ಲಂಡನ್ ಕನ್ನಡಿಗರ ಸಂಘದ ಹೆಸರಲ್ಲಿ ಪ್ರಳಯಾಂತಕರಿಬ್ಬರು ಮಾಡಿರೋ ಮಹಾ ದೋಖಾದ ವಿವರ ನಮ್ಮ ಕೈಸೇರಿದೆ!
ಇಂಥಾದ್ದೊಂದು ಪ್ರಶಸ್ತಿಯನ್ನು ದರ್ಶನ್ ಅವರಿಗೆ ಕೊಡುತ್ತಿರೋದಾಗಿ ಸದ್ದು ಮಾಡಿದ್ದು ಮಂಜುನಾಥ್ ವಿಶ್ವಕರ್ಮ ಮತ್ತು ಸುಜಿತ್ ನಾಯರ್ ಎಂಬವರು. ಇವರಿಬ್ಬರೂ ಈ ದೋಖಾವಳಿಗೆ ಲಂಡನ್ ಪಾರ್ಲಿಮೆಂಟ್ ಮೆಂಬರ್ ವೀರೇಂದ್ರಕುಮಾರ್ ಶರ್ಮಾರ ಹೆಸರನ್ನು ಅತ್ಯಂತ ಜಾಣ್ಮೆಯಿಂದಲೇ ಬಳಸಿಕೊಂಡಿದ್ದರು. ಈ ಎಂಪಿ ವೀರೇಂದ್ರ ಕುಮಾರ್ ಅವರ ಲೆಟರ್ ಹೆಡ್ ಮೂಲಕವೇ ದರ್ಶನ್ ಅವರನ್ನು ಆಹ್ವಾನಿಸೋ ಕೆಲಸವನ್ನೂ ಈ ಇಬ್ಬರೂ ಅನುಮಾನಕ್ಕೆಡೆ ಇಲ್ಲದಂತೆ ಮಾಡಿದ್ದರು. ಈ ಮೂಲಕ ಬ್ರಿಟೀಶ್ ಸಂಸತ್ತು ಖುದ್ದಾಗಿ ದರ್ಶನ್ ಅವರನ್ನು ಸನ್ಮಾನಿಸುತ್ತಿದೆ. ಈ ಹಿಂದೆ ಅಮಿತಾಬ್ ಬಚ್ಚನ್, ಐಶ್ವರ್ಯಾ ರೈ, ಶಾರೂಕ್ ಖಾನ್, ಸಲ್ಮಾನ್ ಖಾನ್ ಮತ್ತಿತರರು ಪಡೆದಿದ್ದ ಗೌರವವನ್ನು ಇದೀಗ ದರ್ಶನ್ ಪಡೆದಿದ್ದಾರೆಂಬಂತೆ ಬಿಂಬಿಸಿದ್ದರು.
ಆದರೆ, ದರ್ಶನ್ ಅವರನ್ನು ಗೌರವಿಸಿದ್ದು ಬ್ರಿಟೀಶ್ ಪಾರ್ಲಿಮೆಂಟ್ ಅಲ್ಲ. ಅವರಿಗೆ ಕೊಟ್ಟಿರೋದು ಗ್ಲೋಬಲ್ ಡೈವರ್ಸಿಟಿ ಅವಾರ್ಡ್ ಅಲ್ಲ, ಅವರಿಗೆ ಕೊಟ್ಟಿರೋದು ಗ್ಲೋಬಲ್ ಇಂಟಿಗ್ರಿಟಿ ಅವಾರ್ಡ್. ಅದಕ್ಕೂ ಬ್ರಿಟೀಶ್ ಪಾರ್ಲಿಮೆಂಟಿಗೂ ಯಾವುದೇ ಸಮಬಂಧವಿಲ್ಲ. ಇಂಥಾದ್ದೊಂದು ಅವಾರ್ಡು ಕೊಡುತ್ತಿರೋದರ ಬಗ್ಗೆ ಬ್ರಿಟೀಶ್ ಪಾರ್ಲಿಮೆಂಟಿಗೆ ಯಾವ ಮಾಹಿತಿಯೂ ಇಲ್ಲ. ಒಂದು ಖಾಸಗೀ ಸಮಾರಂಭವನ್ನು ನಾಜೂಕಿನಿಂದ ಆಯೋಜಿಸಿ ಅದರಲ್ಲಿ ದರ್ಶನ್‌ಗೆ ಒಂದ್ಯಾವುದೋ ಅವಾರ್ಡು ಕೊಟ್ಟು ಮಂಜುನಾಥ್ ವಿಶ್ವಕರ್ಮನೆಂಬ ವಂಚಕ ದರ್ಶನ್ ಇಮೇಜನ್ನು ತನ್ನ ರೆಸ್ಟೋರೆಂಟ್ ಪ್ರಚಾರಕ್ಕೆ ಬಳಸಿಕೊಂಡಿದ್ದಾನೆ!
ಬ್ರಿಟೀಶ್ ಪಾರ್ಲಿಮೆಂಟ್ ಒಂಥರಾ ಹೊಟೇಲಿನಂತಿದೆ. ಅದರಲ್ಲಿ ದೊಡ್ಡ ದೊಡ್ಡ ಇವೆಂಟ್ ಆಯೋಜಿಸಲೆಂದೇ ಸುಸಜ್ಜಿತವಾದ ಹಾಲ್‌ಗಳು ಗಂಟೆಗಳ ಲೆಕ್ಕದಲ್ಲಿ ಬಾಡಿಗೆಗೆ ಸಿಗುತ್ತವೆ. ಎಂಪಿ ವೀರೇಂದ್ರ ಶರ್ಮಾರ ಪ್ರಭಾವ ಬಳಸಿಕೊಂಡ ಮಂಜುನಾಥ ವಿಶ್ವಕರ್ಮ ಮತ್ತು ಸುಜಿತ್ ನಾಯರ್ ಅಂಥಾದ್ದೇ ಒಂದು ಹಾಲ್ ಬುಕ್ ಮಾಡಿಕೊಂಡಿದ್ದಾರೆ. ಲಂಡನ್‌ಗೆ ಬಂದಿಳಿದ ದರ್ಶನ್ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿ ಕಿಲೋಮೀಟರ್ ಉದ್ದನೆಯ ಕರ್ರಗಿನ ಲಕ್ಷುರಿ ಕಾರಿನಲ್ಲಿ ಈ ಪಾರ್ಲಿಮೆಂಟ್ ಹಾಲಿಗೆ ಕರೆದುಕೊಂಡು ಹೋಗಿದ್ದಾರೆ. ಅಸಲೀಯತ್ತೆಂದರೆ ಈ ಕಾರನ್ನೂ ಕೂಡಾ ಈ ವಂಚಕರು ಗಂಟೆಗಳ ಲೆಕ್ಕದಲ್ಲಿ ಬಾಡಿಗೆಗೆ ಪಡೆದುಕೊಂಡಿದ್ದರು!
ಹಾಗೆ ಚಮಕ್ ಮಾಡಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಕರೆಸಿಕೊಂಡ ಇವರು ಪಾರ್ಲಿಮೆಂಟಿನ ಬಾಡಿಗೆ ಹಾಲ್‌ನಲ್ಲಿ ಕಾಟಾಚಾರಕ್ಕೊಂದು ಸಮಾರಂಭ ಮಾಡಿ ಅವಾರ್ಡು ಕೊಡೋ ಶಾಸ್ತ್ರ ಮುಗಿಸಿದ್ದಾರೆ. ಈ ಹಿಂದೆ ಬ್ರಿಟೀಶ್ ಪಾರ್ಲಿಮೆಂಟ್ ಐಶ್ವರ್ಯಾ ರೈ, ಅಮಿತಾಬ್ ಬಚ್ಚನ್, ಶಾರೂಕ್ ಮತ್ತು ಸಲ್ಮಾನ್ ಖಾನ್‌ಗೆ ಅಧಿಕೃತ ಪ್ರಶಸ್ತಿ ಕೊಟ್ಟಿದ್ದಾಗ ಅಲ್ಲಿ ಪಾರ್ಲಿಮೆಂಟಿನ ಗೌರವಾನ್ವಿತರೆಲ್ಲ ಹಾಜರಿದ್ದರು. ಆ ಸಮಾರಂಭದಲ್ಲಿ ಹತ್ತತ್ತಿರ ಮುನ್ನೂರರಷ್ಟು ಜನರಿದ್ದರು. ಆದರೆ ಈ ಸಮಾರಂಭದಲ್ಲಿ ಬ್ರಿಟೀಶ್ ಪಾರ್ಲಿಮೆಂಟ್ ಸದಸ್ಯ ವೀರೇಂದ್ರರನ್ನು ಬಿಟ್ಟರೆ ಬೇರ‍್ಯಾರೂ ಇರಲಿಲ್ಲ. ವೀಕ್ಷಕರ ಸಾಲಿನಲ್ಲಿದ್ದದ್ದು ಹತ್ತದಿನೈದು ಮಂದಿ ಮಾತ್ರ. ಇದುವೇ ಕನ್ನಡ ಸಂಘದ ಹೆಸರಲ್ಲಿ ಈ ವಂಚಕರು ಮಾಡಿರೋ ಮಹಾ ಮೋಸವನ್ನು ಸಾಕ್ಷೀಕರಿಸುತ್ತದೆ!

ಹೀಗೆ ದರ್ಶನ್ ಅವರನ್ನು ಕರೆಸಿಕೊಂಡ ಮಂಜುನಾಥ್ ವಿಶ್ವಕರ್ಮನ ಅಸಲೀ ಉದ್ದೇಶವೇ ಬೇರೆಯದ್ದಿದೆ. ಆತ ಲಂಡನ್ನಿನಲ್ಲೊಂದು ರೆಸ್ಟಾರೆಂಟ್ ಓಪನ್ ಮಾಡಿದ್ದಾನೆ. ಅದರ ಹೆಸರೇ ‘ಕರ್ಮ ರೆಸ್ಟಾರೆಂಟ್! ತನ್ನ ಸ್ವಾರ್ಥಕ್ಕಾಗಿ ದರ್ಶನ್ ಅವರನ್ನು ಸುತ್ತಾಡಿಸಿ ಅದಕ್ಕೆ ಬಿಟ್ಟಿ ಪ್ರಚಾರ ಕೊಡಿಸುತ್ತಿದ್ದಾನೆ. ಸಾಮಾನ್ಯವಾಗಿ ಕರ್ನಾಟಕದಲ್ಲೇ ಮಳಿಗೆ ಉದ್ಘಾಟನೆಯಂಥಾದ್ದರ ಉದ್ಘಾಟನೆಗೆ ತೆರಳಲು ದರ್ಶನ್ ಹತ್ತರಿಂದ ಹದಿನೈದು ಲಕ್ಷದ ವರೆಗೆ ಪಡೆಯುತ್ತಾರೆನ್ನುವ ಸುದ್ದಿಯಿದೆ. ಆದರೆ ಈ ಅವಾರ್ಡಿನ ನೆಪದಲ್ಲಿ ತನ್ನ ರೆಸ್ಟೋರಾಂಟ್ ಪ್ರಚಾರ ಮಾಡಿಕೊಳ್ಳುತ್ತಿರೋ ಮಂಜುನಾಥನ ಕಡೆಯಿಂದ ಸೀಮೆಗಿಲ್ಲದ ಅವಾರ್ಡಿನ ಹೊರತಾಗಿ ದರ್ಶನ್ ಅವರಿಗೆ ಬಿಡಿಗಾಸನ್ನೂ ಕೊಟ್ಟಿಲ್ಲವಂತೆ!

ದರ್ಶನ್ ಅವರಿಗೆ ಈಗ ಆಗಿರೋದು ಮೋಸ ಮಾತ್ರವಲ್ಲ, ಅದು ಅವಮಾನವೂ ಹೌದು. ಆದರೆ ಇದರ ಹಿಂದೆ ದಶಕಗಳಿಂದೀಚೆಗೆ ಲಂಡನ್ ಕನ್ನಡಿಗರೆಂಬ ಟ್ರಂಪ್ ಕಾರ್ಡ್ ಬಳಸಿಕೊಂಡು ಕೆಲ ಐನಾತಿಗಳು ಮಾಡುತ್ತಿರೋ ದುಷ್ಟ ದಂಧೆಯ ಕಥೆ ದೊಡ್ಡದಿದೆ. ಆರಂಭದಲ್ಲಿ ಲಂಡನ್ನಿನಲ್ಲಿ ಒಂದು ಕನ್ನಡ ಸಂಘ ಜನ್ಮ ತಳೆದಿತ್ತು. ಕುಮಾರ್ ಕುಂಠಿಕಾನಮಟ, ಸಂಪತ್ ಯಾದವಾಡ್, ಶರತ್ ಕೋಲಾರ, ರಾಮಚಂದ್ರ ಅಯ್ಯರ್ ಮುಂತಾದವರು ಸೇರಿ ೨೦೧೧ರಲ್ಲಿ ‘ಸಂಗಮ ಎನ್ನುವ ಸಂಸ್ಥೆಯ ಸಹಯೋಗದೊಂದಿಗೆ ‘ಲಂಡನ್ ವಿಶ್ವ ಕನ್ನಡ ಸಮ್ಮೇಳನವನ್ನು ಆಯೋಜಿಸಿದ್ದರು. ಆರಂಭದಲ್ಲಿ ಎಲ್ಲವೂ ಸರಿಯಾಗೇ ಇತ್ತು.  ಯಾವಾಗ ನಟಿ, ನಿರ್ದೇಶಕಿ ರೂಪಾ ಅಯ್ಯರ್ ಎಂಟ್ರಿ ಆಯಿತೋ ಅಲ್ಲಿಗೆ ಎಲ್ಲವೂ ಕಮರ್ಷಿಯಲ್ಲಾಗಿಹೋಯಿತು. ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಈ ಸಮ್ಮೇಳನಕ್ಕೆ ಕರ್ನಾಟಕ ಸರ್ಕಾರದಿಂದ ಹನ್ನೊಂದು ಕೋಟಿ ರುಪಾಯಿ ಕೊಡೋದಾಗಿ ಘೋಷಿಸಿಬಿಟ್ಟರು. ಅಲ್ಲಿಗೆ ಲಂಡನ್ನಿನಲ್ಲಿ ಕೂತು ಕನ್ನಡದ ಕಾಸನ್ನು ಕಿತ್ತು ತಿನ್ನಬೇಕು ಅಂತಾ ಕೂತಿದ್ದ ಕೆಲ ಪೀಡೆಗಳೆಲ್ಲಾ ನನಗೆ ನಿನಗೆ ಅಂತಾ ಕಿತ್ತಾಡಲು ಶುರು ಮಾಡಿಕೊಂಡವು. ಇತ್ತ ರಾಜ್ಯದಲ್ಲಿ ಕಿತ್ತು ತಿನ್ನೋ ಸಮಸ್ಯೆಗಳಿದ್ದರೂ ಯಡಿಯೂರಪ್ಪನವರು ಲಂಡನ್ ಕನ್ನಡ ಸಮ್ಮೇಳನಕ್ಕೆ ಹಣ ಕೊಡುತ್ತೇನೆ ಅಂದಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ನಿಜವಾದ ಸೂಕ್ಷ್ಮ ಮನಸ್ಸಿನ ಲಂಡನ್ ಕನ್ನಡಿಗರ ಉತ್ಸಾಹ ಕಮರಿಹೋಗಲು ಇಷ್ಟು ಕಾರಣ ಸಾಕಾಗಿತ್ತು. ಈ ಕಾರ್ಯಕ್ರಮಕ್ಕೆ ಅಂಬರೀಶ್ ಸುಮಲತಾ ಸೇರಿದಂತೆ ಕರ್ನಾಟಕದ ಸಾಕಷ್ಟು ತಾರೆಯರು ಹೋಗಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಬೇಕಿದ್ದ ಪುನೀತ್ ರಾಜ್ ಕುಮಾರ ಈ ಸಮ್ಮೇಳನದ ನೆಪದಲ್ಲಿ ಕೆಲವರು ನಡೆಸುತ್ತಿದ್ದ ಕರ್ಮಕಾಂಡಗಳನ್ನು ಗಮನಿಸಿಯೇ ಕಡೇ ಘಳಿಗೆಯಲ್ಲಿ ಹಿಂದೇಟು ಹಾಕಿಬಿಟ್ಟಿದ್ದರು.
ಈ ಸಮ್ಮೇಳನದ ನಂತರ ಲಂಡನ್ ಕನ್ನಡಿಗರ ಒಗ್ಗಟ್ಟು ನುಚ್ಚುನಾರಾಯಿತು. ಕನಸಿಟ್ಟುಕೊಂಡು ಮುಂದೆ ಬಂದಿದ್ದವರೆಲ್ಲಾ ಸೈಲೆಂಟಾಗಿ ಸುಮ್ಮನಾದರು. ದುಡ್ಡು ಮಾಡಲು ನಿಂತ ಗ್ಯಾಂಗು ಹೊಸ ಹೊಸ ವೇಶದಲ್ಲಿ ವರಸೆ ಶುರು ಮಾಡಿಕೊಂಡಿತು. ಆಗ ತಲೆಯೆತ್ತಿದ್ದೇ ಮಂಜುನಥ ವಿಶ್ವಕರ್ಮ ಅಂಡ್ ಗ್ಯಾಂಗ್. ಸದರಿ ಸಂಘದ ಮೂಲಕ ಕೆಲ ಇವೆಂಟುಗಳಿಗೆ, ಬೃಹತ್ ಮಳಿಗೆ ಉದ್ಘಾಟನೆಗೆ ಸ್ಯಾಂಡಲ್‌ವುಡ್ ಸ್ಟಾರ್‌ಗಳನ್ನು ಕರೆದಾಗ ಅವರುಗಳು ಐವತ್ತು ಲಕ್ಷದಿಂದ ಒಂದು ಕೋಟಿ ವರೆಗೂ ಬೇಡಿಕೆ ಇಡುತ್ತಿದ್ದರು. ಇದರಿಂದ ಕಂಗಾಲಾದ ಈ ಸಂಘದವರು ಈ ಸ್ಟಾರ್‌ಗಳನ್ನು ಬಿಟ್ಟಿಯಾಗಿ ಕರೆಸಿಕೊಳ್ಳಲು ಖತಾರ‍್ನಾಕ್ ಐಡಿಯಾ ಮಾಡಿದ್ದರು! ಸಾಂಸ್ಕೃತಿಕ ಕಾರ್ಯಕ್ರಮ, ಕ್ರಿಕೆಟ್ಟು, ಕನ್ನಡ ಪ್ರೇಮದ ಹೆಸರಿನಲ್ಲಿ ಸಿನಿಮಾ ನಟರನ್ನು ಕರೆದು ತಮ್ಮ ಬೇಳೆ ಬೇಯಿಸಿಕೊಳ್ಳೋ ಪ್ರೋಗ್ರಾಮು ಚಾಲನೆಗೊಂಡಿತು.
ಇಂಥಾ ಕೆಲ ಪ್ರಶಸ್ತಿಗಳನ್ನು ಕೊಡೋದಾಗಿ ಸೇರಿದಂತೆ ಬೇರೆ ಬೇರೆ ರೂಪಗಳಲ್ಲಿ ಸ್ಟಾರ್‌ಗಳಿಗೆ ಮಂಕುಬೂದಿ ಎರಚಲು ಶುರುವಿಟ್ಟರು. ಈ ಕೋಟಾದಲ್ಲಿ ಶಿವಣ್ಣ ಸೇರಿದಂತೆ ಒಂದಷ್ಟು ನಟರನ್ನು ಲಂಡನ್‌ಗೆ ಕರೆಸಿಕೊಂಡಿದ್ದರು. ಆ ನಂತರ ಇದೇ ಟೀಮು ಕೆಲ ರಾಜಕಾರಣಿಗಳನ್ನು ಕರೆಸಿ ಡಾಕ್ಟರೇಟ್ ಕೊಡೋ ದಂಧೆಯನ್ನೂ ಶುರುವಿಟ್ಟುಕೊಂಡಿತ್ತು. ಲವ್ ಗುರು ಸಿನಿಮಾ ನಿರ್ದೇಶಕನಿಗೂ ಇದೇ ಹಾಲ್ ನಲ್ಲಿ ಸನ್ಮಾನ ಮಾಡಲಾಗಿತ್ತು. ಕರ್ನಾಟಕದ ಕೆಲ ರಾಜಕಾರಣಿಗಳು ಇಂಥಾ ಡಾಕ್ಟರೇಟಿನ ಫಲಾನುಭವ ಪಡೆದು ಮೆರೆದದ್ದೂ ಆಗಿದೆ. ಕಿಚ್ಚ ಸುದೀಪ್ ಅವರನ್ನು ಲಾರ್ಡ್ಸ್ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡಿಸೋದಾಗಿ ಹೇಳಿ ಕರೆಸಿಕೊಂಡು ಮನೆಮನೆಗೂ ಊಟಕ್ಕೆ ಆಮಂತ್ರಿಸಿದ್ದರು. ವರ್ಚಸ್ಸು ಹೆಚ್ಚಿಸಿಕೊಳ್ಳಲು ಮನೆಗೆ ಕರೆಯುತ್ತಿದ್ದವರ ಆಟಗಳನ್ನು ಕಂಡು ಸುದೀಪ್ ಟಾಟಾ ಹೇಳಿದ್ದರು. ಸುದೀಪ್ ನಮ್ಮನೆಗೆ ಬರಲಿಲ್ಲ ನಿಮ್ಮನೆಗೆ ಬರಲಿಲ್ಲ ಅಂತಾ ಕೆಲವು ಅನಿವಾಸಿ ಕನ್ನಡಿಗರು ಕಿತ್ತಾಡಿಕೊಂಡಿದ್ದರು.

ಇದೀಗ ಲಂಡನ್ ಕನ್ನಡಿಗರ ತಂಡ ನುಚ್ಚು ನೂರಾಗಿದೆ. ಅದರಲ್ಲಿ ಹತ್ತು ಜನರು ಸದರಿ ಸಂಘ ಕಟ್ಟಿಕೊಂಡಿದ್ದಾರೆ. ಅದಕ್ಕೆ ಈ ಮಂಜುನಾಥ ವಿಶ್ವಕರ್ಮ ಚೇರ್‌ಮನ್ ಮತ್ತು ಸುಜಿತ್ ನಾಯರ್ ಚೀಫ್ ಅಡ್ವೈಸರ್ ಆಗಿ ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ. ಮೊದಲಿಗೆ ಈ ಇಬ್ಬರೂ ತಮ್ಮ ಹೊಸಾ ಕನ್ನಡ ಸಂಘ ಉದ್ಘಾಟನೆ ಮಾಡಿ, ದರ್ಶನ್‌ರನ್ನು ಕರೆಯಲು ಯೋಜಿಸಿದ್ದರಂತೆ. ಆದರೆ ಅವರ ಮಾರ್ಕೆಟ್ ರೇಟು ಕಂಡು ಕಂಗಾಲಾದ ಈ ಐನಾತಿಗಳು ಈ ಅವಾರ್ಡ್ ಗಿಮಿಕ್ ಮೂಲಕ ತಮ್ಮ ಬೇಳೆ ಬೇಯಿಸಿಕೊಂಡಿದ್ದಾರೆ. ಈ ವಿಚಾರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನೇ ಪಿಗ್ಗಿ ಬೀಳಿಸಿದ್ದಾರೆ.
ಮಂಜುನಾಥ್ ವಿಶ್ವಕರ್ಮ ಇಂಥಾದ್ದನ್ನು ಮಾಡುತ್ತಾ ತಾನೇ ಪ್ರಶಸ್ತಿ ಕೊಡಿಸಿದ್ದಾಗಿ ಹೇಳಿಕೊಳ್ಳುತ್ತಾ ಕರ್ನಾಟಕದಲ್ಲಿಯೂ ಮಾರುಕಟ್ಟೆ ಕುದುರಿಸಿಕೊಳ್ಳುತ್ತಿದ್ದಾನೆ. ಇದೀಗ ಆತ ದರ್ಶನ್‌ಗೂ ತಾನೇ ಅವಾರ್ಡು ಕೊಡಿಸಿದ್ದಾಗಿ ಹೇಳುತ್ತಾ ಲಾಭ ಮಾಡಿಕೊಳ್ಳಲು ಸಜ್ಜಾಗಿದ್ದಾನೆ. ಇದಕ್ಕೆ ಖಂಡಿತಾ ದರ್ಶನ್ ಅಭಿಮಾನಿಗಳು ಅವಕಾಶ ಮಾಡಿಕೊಡೋದಿಲ್ಲ, ತಮ್ಮ ಬಾಸ್‌ಗೆ ಅವಮಾನ ಮಾಡಿದ ಈ ಆಸಾಮಿಗೆ ತಕ್ಕ ಶಾಸ್ತಿ ಮಾಡಿಯಾರೆಂಬ ನಂಬಿಕೆ ಎಲ್ಲರಲ್ಲಿಯೂ ಇದೆ!
ಇಷ್ಟೆಲ್ಲದರ ನಡುವೆಯೂ ದರ್ಶನ್ ಅವರಿಗೆ ನವು ಹೇಳಬಹುದಾದ ಪ್ರೀತಿಯ ಕಿವಿಮಾತೆಂದರೆ ಅಸಲಿಯಾಗಿ ಪ್ರೀತಿಸೋರು ಯಾರು? ನಕಲಿಗಳ್ಯಾರು ಅನ್ನೋದನ್ನ ತಿಳಿಯುವ ಪ್ರಯತ್ನ ಮಾಡಿ. ನಿಮಗಾಗಿ ನಿಮ್ಮನೆ ಮುಂದೆ ನಿಂತು ದಿನಗಟ್ಟಲೆ ಕಾಯುವವರನ್ನು, ಹೆತ್ತ ಅಪ್ಪ-ಅಮ್ಮ, ಒಡಹುಟ್ಟಿದವರಿಗಿಂತಾ ಹೆಚ್ಚಾಗಿ ಪ್ರೀತಿಸುವ ಅಗಣಿತ ಅಭಿಮಾನಿಗಳಿದ್ದಾರಲ್ಲಾ? ಅವರ ಜೊತೆ ಒಂದಿಷ್ಟು ಸಮಯ ಕಳೆದುಬಿಡಿ, ಪ್ರೀತಿಯಿಂದ ಕೈಕುಲುಕಿ… ಅಷ್ಟು ಸಾಕು. ಎದೆಯೊಳಗೆ ಗುಡಿ ಕಟ್ಟಿ ನಿಮ್ಮನ್ನು ಅರಾಧಿಸುತ್ತಿರುವ ಅಭಿಮಾನಿಗಳ ಪಾಲಿಗೆ ಆಗ ನೀವು ನಿಜಕ್ಕೂ ದೇವರೇ…

 

ಇದೆಂಥಾ ಸಮಾರಂಭ?
ದರ್ಶನ್‌ರಂಥ ಸ್ಟಾರ್ ನಟನಿಗೆ ಸನ್ಮಾನ ಕಾರ್ಯಕ್ರಮ ಮಾಡುವಾಗ ನಮ್ಮ ನೆಲದಲ್ಲೇ ಎಂತೆಂಥಾ ವೇದಿಕೆ ಸಿದ್ದಪಡಿಸುತ್ತಾರೆ. ಆದರೆ ಲಂಡನ್ನಿನ ಪಾರ್ಲಿಮೆಂಟ್ ಭವನದ ಒಂದು ಕೋಣೆಯಲ್ಲಿ ನಡೆದ ಸಮಾರಂಭದ ರೀತಿ ನೋಡಿದಿರಾ? ಸಾಲಾಗಿ ನಾಲ್ಕಾರು ಖುರ್ಚಿ ಹಾಕಿ ಮಧ್ಯದಲ್ಲಿ ದರ್ಶನ್ ಅವರನ್ನೂ ಕೂರಿಸಿಬಿಟ್ಟಿದ್ದಾರೆ. ಒಂದು ವಿಶೇಷ ವೇದಿಕೆ, ಒಳ್ಳೆ ಖುರ್ಚಿ ಯಾವುದೂ ಇರಲಿಲ್ಲ. ಕಡೇ ಪಕ್ಷ ಪ್ರಶಸ್ತಿ ಪುರಸ್ಕೃತರು ನಿಂತು ಗಂಭೀರವಾಗಿ ಮಾತಾಡಲು ಪೋಡಿಯಂ ವ್ಯವಸ್ಥೆ ಕೂಡಾ ಇಲ್ಲ. ದರ್ಶನ್ ಅವರು ಸಿದ್ದಪಡಿಸಿಕೊಂಡುಹೋಗಿದ್ದ ಭಾಷಣದ ಪೇಪರನ್ನು ಕೈಲಿ ಹಿಡಿದು ಓದುವಂಥಾ ಪರಿಸ್ಥಿತಿ ಅಲ್ಲಿತ್ತು. ದರ್ಶನ್ ಆಗಲಿ, ಅವರ ಅಭಿಮಾನಿಗಳಾಗಲಿ ಈ ಅನಿವಾಸಿ ಕನ್ನಡಿಗರ ಮುಂದೆ ಕರೆದು ಪ್ರಶಸ್ತಿ ಕೊಡಿ ಅಂತಾ ಅರ್ಜಿ ಸಲ್ಲಿಸಿದ್ದರಾ? ಕೇಳದೆಯೇ ನಮ್ಮೂರಿನ ಜನ ದರ್ಶನ್ ಅವರಿಗೆ ರಾಜಮರ್ಯಾದೆ ನೀಡಿದ್ದಾರೆ. ದರ್ಶನ್ ಕೂಡಾ ಅಭಿಮಾನಿಗಳ ಪ್ರೀತಿಗೆ ಪ್ರತಿಯಾಗಿ ನಡೆದುಕೊಳ್ಳುತ್ತಲೇ ಬಂದಿದ್ದಾರೆ. ಹೀಗಿರುವಾಗ ಕೇವಲ ಹಣ ಸಂಪಾದನೆಗಾಗಿ ಯಾವುದೋ ದೇಶದಲ್ಲಿ ಕೂತಿರುವ ಮಂದಿ ನಮ್ಮ ನಟನನ್ನು ಹೀಗೆ ನಡೆಸಿಕೊಳ್ಳುವುದಾ?

copying or reproducing the above content in any format without approval is criminal offence and will be prosecuted in Bengaluru court © CINIBUZZ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

2 thoughts on “ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಮಹಾ ದ್ರೋಹ!

 1. ಡಾ|| ನೀರಜ್ ಪಾಟೀಲರಿಗೆ ಈ ರೀತಿ ಉಹಾ ಪೋಹಾಗಳನ್ನೂ ಎಬ್ಬಿಸದಿದ್ದರೆ ಊಟ ಅರಗುವುದಿಲ್ಲವೇ?

  ಅವರು ಬಸವಣ್ಣನ ಮೂರ್ತಿ ಸ್ಥಾಪಿಸಿ, ಎಲ್ಲ ಸೆಲೆಬ್ರಿಟಿಸ್ ಕರಿಸಿ ಬಸವಣ್ಣನವರ ಮೂರ್ತಿ ಎದರು ಫೋಟೋ ತೆಗಿಸಿಕೊಂಡು ಪಬ್ಲಿಸಿಟಿ ಮಾಡುವುದಿಲ್ಲವೇ?

  ಲಂಡನ್ ಕನ್ನಡಿಗರೆಂಬ ಟ್ರಂಪ್ ಕಾರ್ಡ್ ಬಳಸಿಕೊಂಡು ಮಾಡುತ್ತಿರೋ ದುಷ್ಟ ದಂಧೆಯ ಕಥೆ ದೊಡ್ಡದಿದೆ. ಅದರಲ್ಲಿ ಮೊದಲನೆಯ ಸ್ಥಾನ ಈ ಲ್ಯಾಂಬರ್ಟ್ ನ ಮಾಜಿ ಮೇಯರ್ ನೀರಜ್ ಪಾಟೀಲರಿಗೆ ಸಲ್ಲುತದೆ.

 2. Hi Team at Asianet Newsable, I am a Journalism student in UK. I am originally from Karnataka. when i saw the news about Kannada Super Star Darshan found out Lot more in detail.
  I have investigated more about Establishment Karnataka-UK business chamber (Private registered business- Not a trade body) who has honored Mr Darshan is run by Manjunath Vishwakarman (sham and corrupted Accountant in UK). Above Establishment is not even recognised by Indian High Commission and Karnataka Govt rather it is a private business which is looking in to get in to Kannada market by Taking Film Distribution, Event management, Restaurant (Karma Restaurant in UK) and wants to have Kannada Bhavana (owned & registered by him at his restaurant address).

  Would like to give preamble to this entire Drama of Manjunath Karma’s recent award ceremony as below

  1) In 2011 there was this Vishwa Kannada Sammelana event which was worth INR 30 Lakhs saw huge profits, At that time Karnataka CM Mr Yediurappa had sanctioned 11 crore for Kannada Bhavana and related activities just for UK (ref article 1) after which this funding was stopped.

  2) Eventually Mr Karma and associates saw growth for Kannada Industry and money coming after all there are 100’s Kannada Balaga’s and Kannada Communty groups across UK with 20, 000 people Investing £30,000 for an event, went to current govt and in the name of Tourism got Funds – INR 3 Lakhs from Karnataka tourism and got Sudeep over to London. Inspite of bringing Sudeep over to London they Marketed this in UK as a private event and arranged a Cricket match for JP Morgan corporate cricket league. None of the Kannadigas were invited nor Kannada Sanghas were Informed. Mr Karma and associates made profit out by bringing Sudeep to UK on Karanataka Govt Funds where in UK they have got publicity claiming its a private event and its MR Karma and associates Achievements.

  3) MR Karma’s Establishment ‘karma restaurant’ was closed down by Housnlow Council due to Bad Hygiene Rating in March 2017 after the Visit, to relaunch his business and gain profit. Please follow series of events

  Firstly Mr Karma establishment ‘Karma Restaurant’ goes bust by Hounslow Council in March 2017 & company dissolved on 02/07/2017 until October 18th from Tabla to Karma. (ref2)
  March 2017- Mr Karma registers his private business – UKkarantakabusinesschamber & Add Mr MP Verender Sharma part of Governing Council & Patron along with himslef and Sujit Nair as Chairman. (ref4) & ref5

  August – September 2017 – MP Sharma Invites Mr Darshan Thoogudeepa to felicitate him personally at an Private event held at Briitish Parliment rented hall. Ref 6, ref 7, ref 8.

  Along side UKkarantakabusinesschamber also posts a event of felicitating Darshan says as Kannada Film summit and not as Global diversity award or Integrity award. Also Kannada media as promoted by Mr Karma by that time promoted this as Kannada Film Summit and later changed its due to Diversity award due to updated from MR Karma.

  see below details from Ukkbc page
  http://www.ukkbc.com/upcoming–kannada-film-summit.html

  When & Where
  Thursday, 19th October at UK Parliament, London

  Key note address
  Keynote address will be given by leading Kannada actor, Mr. Darshan Thoogudeepa, who is popularly known as Challenging star in Kannada movie industry. He has acted in about 47 movies over the period of 20 years in the industry.

  Kannada film summit is promoted by UK Karnataka Business Chamber, which was set up with the intention to promote business, arts and culture between UK and Karnataka, a state in India.
  ——————————–

  October 2017 – 2nd October – Mr Karma posts on his restaurant page on FB and shared an Image confirming Restaurant will reopen soon. 18 October at 12:48 ·

  Karma hosts an events for restaurant says below

  Karma Hounslow
  On this special occasion of DIWALI Festival Week
  We are delighted to announce
  Opening of
  KARMA RESTAURANT
  FRIDAY – 20th OCT 17 6.00pm Onwards
  Guest List Includes Celebrities, Local MP and Other business people.
  Book your Table NOW….!!! 50% Discount (T&C Apply)
  Call us on: 02085721149 or 07710023244
  Come and Enjoy the New taste and ambience of Karma Restaurant.
  *****WISH YOU ALL A VERY HAPPY DIWALI 2017***** Ref 9

  On Same day of October 18th – Mr Karma Sends out an Below Invite on 2 UK Kannada Events Whatsapp groups which is moderated by Kannadigaru UK’s Management includes Ganesh Bhat- Chairman, Anil Kondebettu- Vice Chairman, Vivek Thontadarya – Kannada Balaga UK President and other 512 UK kannadigas.

  All Kannadigas starts slamming MR Karma as he hosted this event in UK without letting 20,000 Kannadigas about this as Event organiser Mr Karma had promoted this event to Kannada Media & fans as Darshan being Felicitated by UK Parliment for this works as Global Diversity award 2017, Alongside since media started asking questions MP Sharma came out in public to confront to say it is a public event rather than UK government or UK parliament honouring Mr Darshan.

  Also since it went viral Mr Karma came out in public and gave out another statement post the event confirming it was private event at UK Parliament and honoured by MP Sharma for global Integrity award on Behalf on UK-Karnataka Business Chamber.

  On Same evening of 19th October – Mr Karma sent one more message on Whatsapp group to say He has found new Organisation called UK – Kannada Bhavana & Launch of this at Karma Restaurant and inaugurated by Celebrities (Mr Darshan) , MP Sharma and other politicians. Mr Karma gets slammed again as Earlier on 18th October he had posted on restaurant Facebook page as his restaurant is due to re-open and book for Diwali and confirming celebs, politicians presence.

  On Asking questions by various UK Kannadigas in those 2 Whatsapp groups Mr Karma initially ignores to answer on 18th and 19th October and gets removed from the groups as promoting wrong events in the group and destroying peace and Integrity. MR Karma went on calling Admins of the group and threatening the group and got re-added and finally came out with statement (Ref attached) for the questions asked the group members. Finally Mr Karma came out with answers to just to say UKKBC is a private trade body and entire event is has been funded by him to invite over Darshan by sending letter from MP, felicitate him over at UK parliment by MP Sharma in a private event.

  When asked about Kannada Bhavana and UKKBusiness Chamber business registered to same closed restaurant address by council and Kannada Bhavana has to be a charity not a private business at his restaurant and Invite all UK Kannadigas to Celebrate Kannada events. Mr Karma Claimed all Events were managed from own expenses, both Businesses are his and Kannada Bhavana need to be a Charity as he is offering a place to carry out event and place to eat.

  Also Indian high Commission has confirmed that there is no Kannada Bhavana in UK.

  Looks like MR Manjunath karma is promoting Kannada Bhavana with help of current minister Dr G Parameshwar ( who doesn’t events happening in London & Mr Karmas’s Intentions similar to Challenging Star Darshan) used by Kannadigas in UK and getting funds from the Karnataka government by fooling them (Earlier I mentioned about 11 crores INR in 2011 by CM Yediurappa) at the back for the Maintenance of Karnataka Bhavan.

  I am sure these funds will go to his restaurant Karma or his establishments as he is Intelligent Accountant who owns 14 companies.

  KannadigaruUK 13 year old & Kannada balaga UK are 25 years old Kannada Organisations in UK have also shared their concerns in Mr Manjuanth Vishwakarma conducting events and bringing disrespect to Actor Darshan himself , Kannada language art culture, UK Kannadigas.

  https://companycheck.co.uk/director/912652804/MANJUNATH–VISHWA-KARMA/companies
  https://beta.companieshouse.gov.uk/company/10532196/officers

  All these raises questions about MR Manjunath VshwaKarma’s Integrity, Corruption.

  As a honest Journalist I would request to people to bring out this SCAM and Investigate this further.

  Looks like Challenging Star Darshan he been conned & Pawned by Manjuanth Vishwakarma and associates and make him go through this with BAD PR.

  Jai HInd Jai Karnataka Mathe !!

  Veer Nayak
  United Kingdom

  References –

  http://www.cinibuzz.in/%E0%B2%AA%E0%B2%BE%E0%B2%AA%E0%B3%8D-%E0%B2%95%E0%B2%BE%E0%B2%B0%E0%B3%8D%E0%B2%A8%E0%B3%8D/%E0%B2%9A%E0%B3%81%E0%B2%9A%E0%B3%8D%E0%B2%9A%E0%B3%81-%E0%B2%AE%E0%B2%A6%E0%B3%8D%E0%B2%A6%E0%B3%81/%E0%B2%9A%E0%B2%BE%E0%B2%B2%E0%B3%86%E0%B2%82%E0%B2%9C%E0%B2%BF%E0%B2%82%E0%B2%97%E0%B3%8D-%E0%B2%B8%E0%B3%8D%E0%B2%9F%E0%B2%BE%E0%B2%B0%E0%B3%8D-%E0%B2%A6%E0%B2%B0%E0%B3%8D%E0%B2%B6%E0%B2%A8%E0%B3%8D/

  http://vijayavani.net/%E0%B2%A6%E0%B2%B0%E0%B3%8D%E0%B2%B6%E0%B2%A8%E0%B3%8D-%E0%B2%AA%E0%B2%A1%E0%B3%86%E0%B2%A6%E0%B2%BF%E0%B2%A6%E0%B3%8D%E0%B2%A6%E0%B3%81-%E0%B2%97%E0%B3%8D%E0%B2%B2%E0%B3%8A%E0%B3%95%E0%B2%AC%E0%B2%B2/

  http://ratings.food.gov.uk/business/en-GB/490411/Karma-Restaurant-Ltd-Hounslow

  http://www.ukkbc.com/upcoming–kannada-film-summit.html

  https://beta.companieshouse.gov.uk/company/10651430

  http://www.newindianexpress.com/entertainment/kannada/2017/oct/18/this-diwali-british-parliament-honours-darshan-for-his-contribution-to-kannada-films-1676833.html

  http://www.coastaldigest.com/news/british-award-actor-darshan-how-pr-agencies-karnataka-fooled-media

  http://www.bangalorefirst.in/?p=27191

  https://companycheck.co.uk/director/912652804/MANJUNATH–VISHWA-KARMA/companies

  http://www.bizdb.co.uk/company/bansuri-restaurant-ltd-08996666/

  https://beta.companieshouse.gov.uk/company/10532196/officers

  https://twitter.com/VeerNayakUK/status/922436487324499968

  https://twitter.com/VeerNayakUK/status/922436700072181763

  https://twitter.com/VeerNayakUK/status/921369600423530501

  https://twitter.com/VeerNayakUK/status/921366025882370048

  https://twitter.com/VeerNayakUK/status/921369600423530501

  http://newsable.asianetnews.com/karnataka/challenging-star-darshan-the-truth-behind-british-parliament-award

Leave a Reply

Your email address will not be published. Required fields are marked *


CAPTCHA Image
Reload Image