Connect with us

cbn

ಜಿಲೇಬಿಯ ಜೀವನ ಪಾಠ!

Published

on

ನಿರ್ದೇಶಕ ಲಕ್ಕಿ ಶಂಕರ್ ಆರಂಭದಿಂದಲೂ ‘ಕಮರ್ಷಿಯಲ್’ ಚೌಕಟ್ಟಿನಲ್ಲೇ ಭಿನ್ನ ಬಗೆಯ ಸಿನಿಮಾಗಳನ್ನು ನಿರ್ದೇಶಿಸುತ್ತಾ ಬಂದವರು. ಈಗಾಗಲೇ ಜಮಾನಾ, ನೈಂಟಿ, ದೇವ್ರಾಣೆ, ಸಿಗರೇಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಲಕ್ಕಿ ಶಂಕರ್ ತಮ್ಮ ಪ್ರತೀ ಚಿತ್ರದಲ್ಲೂ ಯಾವುದಾದರೊಂದು ಸಾಮಾಜಿಕ ಸಂದೇಶ ಸಾರುವ ಕಥೆಯನ್ನೇ ಪ್ರಧಾನವಾಗಿಟ್ಟುಕೊಂಡು, ಅದು ಎಲ್ಲೂ ಬೋಧನೆಯೆನಿಸದಂತೆ, ಜನಪ್ರಿಯ ಫಾರ್ಮುಲಾಗಳನ್ನೇ ಬಳಸಿ ಸಿನಿಮಾ ರೂಪಿಸುತ್ತಾರೆ. ಈ ಬಾರಿ ‘ಜಿಲೇಬಿ’ಯಲ್ಲಿ ಪೂಜಾ ಗಾಂಧಿಯ ಸ್ಟಿಲ್ಲು, ಟ್ರೇಲರುಗಳನ್ನು ನೋಡಿದವರಿಗೆ ‘ಇದೇನು ಈ ಬಾರಿ ಲಕ್ಕಿ ದಾರಿ ಬದಲಿಸಿಬಿಟ್ರಾ?’ ಎನ್ನುವ ಅನುಮಾನ ಮೂಡಿತ್ತು. ‘ಇಡೀ ಸಿನಿಮಾದಲ್ಲಿ ಡಬಲ್ ಮೀನಿಂಗ್ ಡೈಲಾಗುಗಳು, ಯರ್ರಾಬಿರ್ರಿ ಮಸಾಲೆ ದೃಶ್ಯಗಳು ಸೇರಿಕೊಂಡಿರಬಹುದು’ ಎಂದು ಊಹಿಸಿಕೊಂಡು ಹೋದವರಿಗೆ ನಿಜಕ್ಕೂ ‘ಜಿಲೇಬಿ’ ಅಚ್ಛರಿ ಮೂಡಿಸುತ್ತದೆ.

ಮಜಾ ಉಡಾಯಿಸುವುದನ್ನೇ ಧ್ಯೇಯವಾಗಿಟ್ಟುಕೊಂಡ ಎಷ್ಟೋ ಹುಡುಗರಿದ್ದಾರೆ. ಇನ್ನು ಬ್ರಹ್ಮಚರ್ಯಕ್ಕೆ ನಿಷ್ಠವಾಗಿರುವ ಯುವಕರೂ ಸಹ ಛಾನ್ಸು ಸಿಕ್ಕರೆ ಒಮ್ಮೆಯಾದರೂ ಗೋಡೆ ಹಾರಬೇಕೆನ್ನುವ ಬಯಕೆ ಹೊಂದಿರುತ್ತಾರೆ. ಇಂಥ ಮೂವರು ಹುಡುಗರ ಮೂಲಕ ತೆರೆದುಕೊಳ್ಳುವ ಕಥೆ ಈ ಚಿತ್ರದ್ದು. ಈ ಮೂವರ ನಡುವೆ ಎಂಟ್ರಿ ಕೊಡುವ ಹೆಣ್ಣು ‘ಜಿಲೇಬಿ’. ಈಕೆಯ ತಂದೆ ಜಿಲೇಬಿ ವ್ಯಾಪಾರಿಯಾಗಿದ್ದ ಕಾರಣಕ್ಕೆ ಆ ಹೆಸರು ಇವಳ ಹೆಸರೇ ‘ಜಿಲೇಬಿ’ಯಾಗಿರುತ್ತದೆ. ತಂದೆ ತೀರಿಕೊಂಡಮೇಲೆ ಈಕೆ ಪ್ರೀತಿಸಿದವನನ್ನು ನೆಚ್ಚಿಕೊಂಡು ಇದ್ದ ಊರುಬಿಟ್ಟು ಬೆಂಗಳೂರಿಗೆ ಬಂದಿರುತ್ತಾಳೆ. ನಂಬಿಸಿ ಕರೆತಂದವನು ಚಟಕ್ಕೆ ದಾಸನಾಗಿ ಜೀವಬಿಟ್ಟಿರುತ್ತಾನೆ. ತಾನೂ ಜೀವ ಬಿಡಬೇಕೆಂದುಕೊಂಡರೂ ಅದಕ್ಕೆ ಒಪ್ಪದೆ ಬದುಕು ಮನಸ್ಸು ಮಾಡುವ ಜಿಲೇಬಿಗೆ ಬದುಕಿಗೆ ಆಸರೆಯಾಗುವುದು ವೇಶ್ಯಾವಾಟಿಕೆ!

ಬೀದಿಯಲ್ಲಿ ನಿಂತು ಗಿರಾಕಿಗಳನ್ನು ಹಿಡಿದು ಆ ಮೂಲಕ ಬದುಕು ಸಾಗಿಸುವ ಈಕೆ ಮೂವರು ಯುವಕರ ಜೊತೆಯಾಗುತ್ತಾಳೆ. ಆ ನಂತರ ಏನೆಲ್ಲಾ ನಡೆದುಹೋಗುತ್ತದೆ, ಏನೇನೂ ‘ಮಾಡದ’ ಹುಡುಗರು ಅನುಭವಿಸುವ ತಾಪತ್ರಯಗಳೇನು ಅನ್ನೋದು ‘ಜಿಲೇಬಿ’ಯಲ್ಲಿ ಅನಾವರಣಗೊಳ್ಳುತ್ತದೆ. ಮೊದಲಾರ್ಧ ಹುಡುಗಾಡಿಕೆಯಲ್ಲಿ ಸಾಗುವ ಸಿನಿಮಾ ದ್ವಿತೀಯಾರ್ಧದಲ್ಲಿ ಗಂಭೀರವಾಗುತ್ತದೆ. ಯಾರೂ ನಿರೀಕ್ಷಿಸದ ರೀತಿಯಲ್ಲಿ ಹಾರರ್ ದೃಶ್ಯಗಳು ಎದುರಾಗುತ್ತವೆ. ಜೊತೆಜೊತೆಗೇ ಹೊಟ್ಟೆಯೊಳಗೇ ಶೇಕ್ ಡ್ಯಾನ್ಸು ಶುರುವಾಗುವಷ್ಟು ನಗಿಸುತ್ತದೆ.
ಇದು ಹಾರರ್, ಕಾಮಿಡಿ ಸಿನಿಮಾ ಮಾತ್ರವಲ್ಲ, ಹೆಣ್ಣೊಬ್ಬಳ ಬದುಕಿನ ತಲ್ಲಣಗಳನ್ನು ತೆರೆದಿಡುವ ಚಿತ್ರವಾಗಿದೆ. ‘ಸುಖ’ಕ್ಕೆ ಹಾತೊರೆಯುವ ಯುವಕರು ಒಂಚೂರು ಎಚ್ಚರ ತಪ್ಪಿದರೆ ಎಂತೆಂಥಾ ಅನಾಹುತಗಳು ಸಂಭವಿಸಿಬಿಡುತ್ತದೆ ಎನ್ನುವ ಚಿತ್ರಣವನ್ನು ‘ಜಿಲೇಬಿ’ ಕಣ್ಮುಂದೆ ಕಟ್ಟಿಕೊಡುತ್ತದೆ.
ಯಶಸ್ ಸೂರ್ಯ, ನಾಗೇಂದ್ರ ಮತ್ತು ವಿಜಯ್ ಚೆಂಡೂರ್ ಮತ್ತು ಪೂಜಾ ಗಾಂಧಿ ನಿಜಕ್ಕೂ ಚೆಂದಗೆ ನಟಿಸಿದ್ದಾರೆ. ನಾಗೇಂದ್ರ ಎನ್ನುವ ಹುಡುಗ ಹೊಸಬನಾದರೂ ಮೊದಲ ಚಿತ್ರದಲ್ಲೇ ಗಮನ ಸೆಳೆದಿದ್ದಾನೆ. ದತ್ತಣ್ಣ, ಬಿರಾದಾರ್, ರಾಕ್’ಲೈನ್ ಸುಧಾಕರ್ ಮತ್ತು ಶೋಭರಾಜ್ ಎರಡೆರಡು ದೃಶ್ಯಗಳಲ್ಲಿ ಬಂದರೂ ಹೇಳಿಮಾಡಿಸಿದಂತೆ ನಟಿಸಿದ್ದಾರೆ. ಸಂಗೀತ ಮತ್ತು ಹಿನ್ನೆಲೆ ಸಂಗೀತ ‘ಜಿಲೇಬಿ’ಯ ರುಚಿಗೆ ತಕ್ಕುದಾಗಿದೆ.
ಈ ಎಲ್ಲದರ ನಡುವೆ ತಮ್ಮ ಎಂದಿನ ಶೈಲಿಯ ಸಿನಿಮಾ ನಿರ್ದೇಶಿಸುವಲ್ಲಿ ಲಕ್ಕಿ ಶಂಕರ್ ಗೆದ್ದಿದ್ದಾರೆ. ಯುವಕರು ಮಾತ್ರವಲ್ಲ, ವಯಸ್ಸು ಮೀರಿದ ಗಂಡಸರೂ ನೋಡಲೇಬೇಕಾದ ಸಿನಿಮಾ ಇದು.

Continue Reading
Advertisement
Click to comment

Leave a Reply

Your email address will not be published. Required fields are marked *

cbn

ಇದು ಅಣ್ಣಾವ್ರ ಕಡೆಯ ಸಿನಿಮಾ ಆಗಬೇಕಿತ್ತು!

Published

on

`ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ…’ ಹಾಡಿನ ಮೊದಲ ಸಾಲು ಈಗ ಸಿನಿಮಾ ಆಗಿ ಬಿಡುಗಡೆಗೊಂಡಿದೆ. ಕಾಂತ ಕನ್ನಲ್ಲಿ ನಿರ್ದೇಶನದಲ್ಲಿ ಮೂಡಿಬಂದಿರುವ ಸಿನಿಮಾ ನೋಡಿದ ಎಲ್ಲರನ್ನೂ ಸೆಳೆಯುತ್ತಿದೆ. ಸಿನಿಮಾ ನೋಡಿ ಹೊರಬಂದ ಪ್ರತಿಯೊಬ್ಬರ ಮುಖದಲ್ಲೂ ಮಂದಹಾಸ ಮೂಡಿಸುವ ಸಿನಿಮಾ ಇದು.

ಅಂದಹಾಗೆ ಇದೇ `ಇರುವುದೆಲ್ಲವ ಬಿಟ್ಟು’ ಶೀರ್ಷಿಕೆ ವರನಟ ಡಾ. ರಾಜ್ ಕುಮಾರ್ ಅವರ ನಟನೆಯ ಕೊನೆಯ ಸಿನಿಮಾ ಆಗಬೇಕಿತ್ತು ಅನ್ನೋ ವಿಚಾರವೊಂದು ಹೊರಬಿದ್ದಿದೆ. ಮೊನ್ನೆದಿನ ಈ ಸಿನಿಮಾವನ್ನು ನೋಡಿದ ಕೆ.ಎಂ.ಎಫ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಎ.ಎಸ್. ಪ್ರೇಮನಾಥ್ ಖುದ್ದು ನಿರ್ದೇಶಕರ ಬಳಿ ಈ ವಿಷಯವನ್ನು ಹೇಳಿದರಂತೆ. ಪ್ರೇಮ್‌ನಾಥ್ ಡಾ.ರಾಜ್ ಕುಟುಂಬದ ಜೊತೆ ತೀರಾ ನಿಕಟ ಸಂಪರ್ಕ ಹೊಂದಿರುವವರು. ಹೀಗಾಗಿ ಅಣ್ಣಾವ್ರ ಕುರಿತ ಸಾಕಷ್ಟು ಇಂಟರೆಸ್ಟಿಂಗ್ ವಿಚಾರಗಳು ಪ್ರೇಮನಾಥ್ ಅವರಿಗೆ ಸಹಜವಾಗೇ ಗೊತ್ತಿರುತ್ತದೆ.

ಡಾ. ರಾಜ್‌ಕುಮಾರ್ ನಟಿಸಬೇಕಿದ್ದ ಆ ಸಿನಿಮಾಗೆ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕಥೆಯನ್ನೂ ಹೇಳಿದ್ದರಂತೆ. `ಇರುವುದೆಲ್ಲವ ಬಿಟ್ಟು’ ಅನ್ನೋ ಶೀರ್ಷಿಕೆಯನ್ನು ರಾಜಣ್ಣ ಬಹುವಾಗಿ ಇಷ್ಟಪಟ್ಟಿದ್ದರಂತೆ. ಅವರ ಅನಾರೋಗ್ಯ ಮತ್ತಿತರ ಕಾರಣಗಳಿಗೆ ಆ ಸಿನಿಮಾ ಸೆಟ್ಟೇರಿರಲಿಲ್ಲ. ಒಂದು ವೇಳೆ ಅಣ್ಣಾವ್ರು ಈಗಲೂ ಇರುವಂತಾಗಿ, ಅದೇ ಶೀರ್ಷಿಕೆಯೊಂದಿಗೆ ಇಷ್ಟು ಮುದ್ದಾದ ಸಿನಿಮಾ ಮೂಡಿಬಂದಿರೋದನ್ನು ನೋಡಿದ್ದಿದ್ದರೆ ಅದೆಷ್ಟು ಖುಷಿಪಡುತ್ತದ್ದರೋ…?

Continue Reading

cbn

ಶಿವಣ್ಣನಿಗೆ ನಾಯಕಿಯಾದಳು ತೆಲುಗು ಹುಡುಗಿ ಇಶಾ!

Published

on

ಶಿವರಾಜ್ ಕುಮಾರ್ ನಟಿಸುತ್ತಿರೋ ಸಾಲು ಸಾಲು ಚಿತ್ರಗಳ ಗದ್ದಲದ ನಡುವೆ ‘ಎಸ್‌ಆರ್‌ಕೆ’ ಚಿತ್ರ ಅದೇಕೋ ಮರೆಯಾದಂತಿತ್ತು. ಯಾಕೆಂದರೆ, ಇದು ಕಳೆದ ವರ್ಷವೇ ಶಿವಣ್ಣ ಒಪ್ಪಿಕೊಂಡು ಸೆಟ್ಟೇರಿದ್ದ ಚಿತ್ರ. ಇದೀಗ ಆ ಚಿತ್ರಕ್ಕೆ ಹೊಸಾ ವೇಗ ಸಿಕ್ಕಿದೆ. ಈ ಚಿತ್ರಕ್ಕೆ ಶಿವಣ್ಣನ ನಾಯಕಿಯ ಆಯ್ಕೆಯೂ ನಡೆದಿದೆ.

ಲಕ್ಕಿ ಗೋಪಾಲ್ ನಿರ್ದೇಶನ ಮಾಡಲಿರೋ ಈ ಚಿತ್ರ ಇದೇ ಡಿಸೆಂಬರಿನಿಂದ ಚಿತ್ರೀಕರಣ ಆರಂಭಿಸಲಿದೆ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಡ್ಯಾನ್ಸ್ ಮಾಸ್ಟರ್ ಪಾತ್ರದಲ್ಲಿ ನಟಿಸಲಿದ್ದಾರೆ. ನಾಯಕಿಯದ್ದು ಉಪನ್ಯಾಸಕಿಯ ಪಾತ್ರ. ಆ ಪಾತ್ರಕ್ಕೆ ತೆಲುಗಿನ ನಟಿ ಇಶಾ ರಬ್ಬಾ ಆಯ್ಕೆಯಾಗಿದ್ದಾರೆ. ಈಗಾಗಲೇ ತೆಲುಗಿನಲ್ಲಿ ಶೈನಪ್ ಆಗಿರೋ ಇಶಾ ಈ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಜ್ಯೂನಿಯರ್ ಎನ್‌ಟಿಆರ್ ರಂಥಾ ಸ್ಟಾರ್ ನಟರ ಜೊತೆ ಹಿಟ್ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವಾಕೆ ಇಶಾ. ಈಕೆ ಈಗಾಗಲೇ ಆರೇಳು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾಳೆ. ನಟನೆ, ಸೌಂದರ್ಯಾ ಎಲ್ಲವನ್ನೂ ಹೊಂದಿರುವ ಇಶಾ ಇಷ್ಟರಲ್ಲಿಯೇ ಬಾಲಿವುಡ್‌ಗೆ ಹಾರಲಿದ್ದಾಳೆಂಬ ಸುದ್ದಿ ತೆಲುಗು ಚಿತ್ರರಂಗದ ತುಂಬಾ ತುಂಬಿಕೊಂಡಿತ್ತು. ಆದರೆ ಆಕೆ ಕನ್ನಡ ಚಿತ್ರರಂಗದತ್ತ ಬಂದಿದ್ದಾಳೆ.

ಈಗಾಗಲೇ ಒಂದಷ್ಟು ಚಿತ್ರಗಳಿಗೆ ಕೆಲಸ ಮಾಡಿ ಪಳಗಿಕೊಂಡಿರುವ ಲಕ್ಕಿ ಗೋಪಾಲ್ ಎಸ್‌ಆರ್‌ಕೆ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಆರಂಭದಿಂದಲೂ ತಾನು ನಿರ್ದೇಶಕನಾದರೆ ಶಿವಣ್ಣನ ಚಿತ್ರ ಮಾಡಬೇಕೆಂಬ ಕನಸು ಹೊಂದಿದ್ದವರು ಗೋಪಾಲ್. ಮೊದಲ ಚಿತ್ರದಲ್ಲಿಯೇ ಅವರು ಆ ಕನಸನ್ನು ನನಸು ಮಾಡಿಕೊಂಡಿದ್ದಾರೆ.

Continue Reading

cbn

ಅಂಬಿ ಜೊತೆ ಶಿವಣ್ಣ!

Published

on

ಅಂಬಿ ನಿಂಗೆ ವಯಸಾಯ್ತೋ ಚಿತ್ರವೀಗ ರಾಜ್ಯಾದ್ಯಂತ ಯಶಸ್ವೀ ಪ್ರದಶನ ಕಾಣುತ್ತಿದೆ. ಅಂಬರೀಶ್ ಅವರ ಸಹಜಾಭಿನಯ, ಇಡೀ ಚಿತ್ರವನ್ನು ರೀಮೇಕ್ ಎಂಬ ಭಾವವೇ ಕಾಡದಂತೆ ನಿರ್ದೇಶನ ಮಾಡಿರೋ ಗುರುದತ್ತ ಗಾಣಿಗರ ಕಸುಬುದಾರಿಕೆ… ಇವೆಲ್ಲವೂ ಸೇರಿ ಈ ಚಿತ್ರ ಹೌಸ್‌ಫುಲ್ ಪ್ರದರ್ಶನ ಕಾಣುವಂತೆ ಮಾಡಿದೆ. ಕನ್ನಡ ಚಿತ್ರರಂಗದ ತಾರೆಯರೂ ಕೂಡಾ ಅಂಬಿ ನಿಂಗೆ ವಯಸಾಯ್ತೋ ಚಿತ್ರವನ್ನು ವೀಕ್ಷಿಸಿ ಮುಕ್ತ ಕಂಠದಿಂದ ಮೆಚ್ಚಿಕೊಳ್ಳುತ್ತಿದ್ದಾರೆ.

ಇದೀಗ ತಮ್ಮ ಚಿತ್ರಗಳ ಚಿತ್ರೀಕರಣಕ್ಕೊಂದು ಬ್ರೇಕ್ ಕೊಟ್ಟು ಈ ಚಿತ್ರವನ್ನು ನೋಡಲು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮುಂದಾಗಿದ್ದಾರೆ. ಇಂದು ಮಧ್ಯಾಹ್ನ ೧.೩೦ಕ್ಕೆ ಶಿವಣ್ಣ ಒರಾಯನ್ ಮಾಲ್‌ನಲ್ಲಿ ಅಂಬಿ ನಿಂಗೆ ವಯಸಾಯ್ತೋ ಚಿತ್ರವನ್ನು ವೀಕ್ಷಿಸಲಿದ್ದಾರೆ. ಇವರ ಜೊತೆಗೆ ಕನ್ನಡದ ಯುವ ನಿರ್ದೇಶಕರಾದ ಸಂತೋಷ್ ಆನಂದ್‌ರಾಮ್, ತರುಣ್ ಸುಧೀರ್, ಪವನ್ ಒಡೆಯರ್ ಸೇರಿದಂತೆ ಕೆಸಿಸಿ ಸದಸ್ಯರೆಲ್ಲರೂ ಈ ಸಿನಿಮಾವನ್ನು ವೀಕ್ಷಿಸಲಿದ್ದಾರೆ.

ಈಗಾಗಲೇ ಕನ್ನಡದ ಬಹುತೇಕ ನಟ ನಟಿಯರು ಈ ಚಿತ್ರವನ್ನು ವೀಕ್ಷಿಸಿದ್ದಾರೆ. ಅಂಬರೀಶ್ ಅವರ ಸಹಜಾಭಿನಯಕ್ಕೆ ಮನ ಸೋತಿದ್ದಾರೆ. ರೀಮೇಕ್ ಬಗ್ಗೆ ಇರೋ ಭಾವನೆಗಳನ್ನು ಬುಡ ಮೇಲು ಮಾಡುವಂತೆ ಕಥೆಯನ್ನು ನೇಟಿವಿಟಿಗೆ ಒಗ್ಗಿಸಿಕೊಂಡು ದೃಶ್ಯ ಕಟ್ಟಿರುವ ಗುರುದತ್ ಬಗ್ಗೆಯೂ ಎಲ್ಲರಲ್ಲಿಯೂ ಮೆಚ್ಚುಗೆ ಇದೆ. ಈ ಮೂಲಕವೇ ಕನ್ನಡ ಚಿತ್ರರಂಗಕ್ಕೊಬ್ಬ ಪ್ರತಿಭಾವಂತ ಯುವ ನಿರ್ದೇಶಕನ ಆಗಮನವಾಗಿದೆ ಎಂಬ ಅಭಿಪ್ರಾಯಗಳೇ ಎಲ್ಲೆಡೆ ಕೇಳಿ ಬರುತ್ತಿವೆ.

ಒಟ್ಟಾರೆಯಾಗಿ ಅಂಬಿ ಈ ಚಿತ್ರದ ಮೂಲಕ ಮತ್ತೊಮ್ಮೆ ನಾಯಕನಾಗಿ ಪ್ರೇಕ್ಷಕರನ್ನು ಆವರಿಸಿಕೊಂಡಿದ್ದಾರೆ. ಕಿಚ್ಚಾ ಸುದೀಪ್ ತಮ್ಮೆಲ್ಲ ಕೆಲಸ ಕಾರ್ಯಗಳ ನಡುವೆಯೂ ಈ ಚಿತ್ರವನ್ನು ಬಲು ಆಸ್ಥೆಯಿಂದ ಪೊರೆದಿದ್ದರು. ನಿರ್ಮಾಣದ ಜೊತೆಗೆ ಜ್ಯೂನಿಯರ್ ಅಂಬಿಯಾಗಿಯೂ ನಟಿಸಿದ್ದರು. ಇಮೇಜುಗಳಾಚೆಗಿನ ಅವರ ನಟನೆಯೂ ಜನ ಮನ ಗೆದ್ದಿದೆ. ಈ ಮೂಲಕ ಗುರುದತ್ ಗಾಣಿಗ ಮೇಲೆ ಅವರಿಟ್ಟಿದ್ದ ನಂಬಿಕೆಯೂ ನಿಜವಾಗಿದೆ.

Continue Reading

Trending

Copyright © 2018 Cinibuzz