One N Only Exclusive Cine Portal

ಜೀ ಟಿ.ವಿ.ಯಲ್ಲಿ ಮಕ್ಕಳ`ಡ್ರಾಮಾ’

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಜೀ ಟಿವಿ ಮತ್ತೊಂದು ವಿನೂತನ ಮಕ್ಕಳ ಟ್ಯಾಲೆಂಟ್ ಷೋ ಒಂದನ್ನು ತನ್ನ ವೀಕ್ಷಕರಿಗೆ ಉಣಬಡಿಸಲು ಸಿದ್ದವಾಗಿದೆ. ಜೀ ಕನ್ನಡ ವಾಹಿನಿಯ ಹೊಸ ಟ್ಯಾಲೆಂಟ್ ಶೋ ಡ್ರಾಮಾ ಜ್ಯೂನಿಯರ್ಸ್ ಇದೇ ಏಪ್ರಿಲ ೩೦ರಿಂದ ರಾತ್ರಿ ೯ ಗಂಟೆಗೆ ಪ್ರಸಾರವಾಗಲಿದ್ದು, ಕನ್ನಡ ನಾಡಿನ ಮಕ್ಕಳ ನಟನಾ ಕೌಶಲ್ಯವನ್ನು ಹೊರತರಲಿದೆ.
ಈ ಕಾರ್ಯಕ್ರಮಕ್ಕಾಗಿ ಈಗಾಗಲೇ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಆಡಿಷನ್ ನಡೆಸಲಾಗಿದ್ದು ಅದರಲ್ಲಿ ೧೦ ಸಾವಿರಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಅದರಲ್ಲಿ ಉತ್ತಮವಾದ ೩೦ ಬಾಲ ಪ್ರತಿಭೆಗಳನ್ನು ಮೆಗಾ ಆಡಿಷನ್‌ಗೆ ಆಯ್ಕೆ ಮಾಡಲಾಗಿದೆ. ಮುದ್ದು ಮಾತು, ತುಂಟಾಟ, ನಿರ್ಭಯ ಮನೋಭಾವ, ವಿಶಿಷ್ಟ ಕಲಾ ಪ್ರೌಢಿಮೆಗಳನ್ನೊಳಗೊಂಡಂಥ ೫ರಿಂದ ೧೩ ವರ್ಷದ ವರೆಗಿನ ಮಕ್ಕಳನ್ನು ಆಡಿಷನ್‌ನಲ್ಲಿ ಆಯ್ಕೆ ಮಾಡಲಾಗಿದೆ.
ಈ ಕಾರ್ಯಕ್ರಮದ ನಿರೂಪಣೆಯನ್ನು ನಟ ಮಾಸ್ಟರ್ ಆನಂದ್ ಮಾಡಲಿದ್ದಾರೆ. ಸ್ವತಃ ಬಾಲನಟರಾಗಿ ಕನ್ನಡಿಗರ ಮನಸ್ಸಲ್ಲಿ ಅಚ್ಚಳಿಯದ ಸ್ಥಾನ ಪಡೆದಿರುವ ಮಾಸ್ಟರ್ ಆನಂದ್, ಮಕ್ಕಳಲ್ಲಿ ಮಕ್ಕಳಾಗಿ, ನಗುವಿನ ರಸಧಾರೆ ಹರಿಸಲು ಸಿದ್ಧರಾಗಿzರೆ.
ಇನ್ನು ಕಾರ್ಯಕ್ರಮದ ನಿರ್ಣಾಯಕರಾಗಿ, ಮೂವರು ವಿಶಿಷ್ಟ ವ್ಯಕ್ತಿಗಳನ್ನು ಕರೆತರಲಾಗಿದೆ. ಕಿರುತೆರೆಯಲ್ಲಿ ಲಾಯರ್ ಸಿ.ಎಸ್.ಪಿ. ಖ್ಯಾತಿಯ ನಿರ್ದೇಶಕ ಟಿ.ಎನ್. ಸೀತಾರಾಂ, ಈಗ ಜಡ್ಜ್ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎರಡನೆಯ ತೀರ್ಪುಗಾರರಾಗಿ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿ, ಡಾ.ರಾಜ್‌ಕುಮಾರ್ ಅವರಿಂದ ಹಿಡಿದು ತಮಿಳಿನ ಎಂ.ಜಿ.ಆರ್.ವರೆಗೆ ಎ ಭಾಷೆಯ ಘಟಾನುಘಟಿಗಳ ಜೊತೆ ನಟಿಸಿದ ಹಿರಿಯ ಕಲಾವಿದೆ ಜ್ಯೂಲಿ ಲಕ್ಷ್ಮಿ ಅವರು ಭಾಗವಹಿಸುತ್ತಿದ್ದಾರೆ. ತಮ್ಮ ಹುರುಪು, ಲವಲವಿಕೆಯಿಂದ, ಇಂದಿನ ಯುವಜನತೆಗೆ ಮಾದರಿಯಾಗಿರುವ ಇವರು, ಮಕ್ಕಳಿಗೆ ಅಮ್ಮನಾಗಿ, ತಿದ್ದಿತೀಡುವ ಜವಾಬ್ದಾರಿ ವಹಿಸಿಕೊಂಡಿzರೆ. ಕಾರ್ಯಕ್ರಮದ ಮೂರನೇ ನಿರ್ಣಾಯಕರಾಗಿ ಮತ್ತೊಬ್ಬ ಕಲಾವಿದ, ತಮ್ಮ ಮೊದಲ ಚಿತ್ರದ ಪ್ರಶಸ್ತಿಯ ಗರಿಯನ್ನ ಮುಡಿಗೇರಿಸಿಕೊಂಡ ಕನ್ನಡದ ಚಿನ್ನಾರಿಮುತ್ತ ವಿಜಯ ರಾಘವೇಂದ್ರ ಭಾಗವಹಿಸಲಿದ್ದಾರೆ. ಈಗಷ್ಟೇ ಪುಟ್ಟ ಮಗುವಿನ ತಂದೆಯಾಗಿರುವ ಇವರು, ಮಕ್ಕಳಲ್ಲಿ ಸ್ಫೂರ್ತಿ ತುಂಬಲು ಸಜ್ಜಾಗಿದ್ದಾರೆ.
ಹೀಗೆ ಇಂದಿನ ಹಾಗೂ ಹಿಂದಿನ ಪೀಳಿಗೆಯ ಘಟಾನುಘಟಿಗಳ ಮಧ್ಯೆ, ಮುಂದಿನ ಜಮಾನಾದ ದಿಗ್ಗಜರಾಗಲಿರುವ ಪುಟ್ಟ ಪುಟ್ಟ ಮಕ್ಕಳ `ಡ್ರಾಮಾ’ ಇನ್ನು ಮುಂದೆ ಪ್ರತಿ ವೀಕೆಂಡ್‌ನಲ್ಲಿ ಅಂದರೆ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ ೯ರಿಂದ ಕಿರುತೆರೆ ವೀಕ್ಷಕರ ಮುಂದೆ ಬರಲಿದೆ. ಪ್ರತಿಯೊಬ್ಬ ಸ್ಪರ್ಧಿಯೂ ಒಂದು ನಾಟಕ, ಏಕಪಾತ್ರಾಭಿನಯ, ಮಿಮಿಕ್ರಿ, ಮೈಮ್ , ಶಾಡೋ ಪ್ಲೇ, ಹೀಗೆ ರಂಗಭೂಮಿಯ ವಿವಿಧ ಪ್ರಾಕಾರಗಳನ್ನು ಹೊರತಂದು, ಮುಂದಿನ ಸೂಪರ್‌ಸ್ಟಾರ್‌ಗಳಾಗಿ ಮಿಂಚಲು ಸಿದ್ಧರಾಗಿzರೆ.

Leave a Reply

Your email address will not be published. Required fields are marked *


CAPTCHA Image
Reload Image