One N Only Exclusive Cine Portal

ಜುಲೈ 14ರಂದು ಒಂದಾಗ್ತಾರಾ ಸುದೀಪ್-ಪ್ರಿಯಾ?

ಕಿಚ್ಚ ಸುದೀಪ್ ಅಭಿಮಾನಿಗಳು ಫುಲ್ ಹ್ಯಾಪಿ ಮೂಡಿನಲ್ಲಿದ್ದಾರೆ. ಯಾಕೆಂದರೆ, ಸುದೀಪ್ ಹಾಗೂ ಪ್ರಿಯಾ ದಾಂಪತ್ಯ ಮತ್ತೆ ಸರಿದಾರಿಯತ್ತ, ಸಾಮರಸ್ಯದತ್ತ ಹೊರಳಿಕೊಂಡಿದೆ. ಇಂಥಾದ್ದೊಂದು ನಿರೀಕ್ಷೆ ಬಹುದಿನಗಳಿಂದಲೂ ಕಿಚ್ಚನ ಆಪ್ತ ವಲಯದಲ್ಲಿ ಹಬೆಯಾಡುತ್ತಲೇ ಇತ್ತು. ಈ ವಲಯದಲ್ಲಿರುವವರಿಗೆ ಬಿರುಕು ಬಿಟ್ಟಿದ್ದ ಈ ದಾಂಪತ್ಯ ಸರಿಯಾಗಬೇಕೆಂಬ ಬಯಕೆ ಇದ್ದರೂ ಸುದೀಪ್‌ಗೆ ಅದನ್ನು ತಲುಪಿಸುವ, ತಿಳಿ ಹೇಳುವ ದಾರಿಗಳಿರಲಿಲ್ಲ. ಕಡೆಗೂ ಇದೀಗ ಕೌಟುಂಬಿಕ ನ್ಯಾಯಾಲಯದ ವಿಚಾರಣೆಗೆ ಗೈರಾಗುವ ಮೂಲಕ ಈ ದಂಪತಿ ಒಂದಾಗಲು ಮನಸು ಮಾಡಿದ್ದಾರೆ. ಹೀಗಿರುವಾಗಲೇ ಕೌಟುಂಬಿಕ ನ್ಯಾಯಾಲಯವೂ ಪೂರಕವಾದ ಸೂಚನೆಯನ್ನೇ ಕೊಟ್ಟಿದೆ!

ಸುದೀಪ್ ಹಾಗೂ ಪ್ರಿಯಾ ವಿಚ್ಚೇದನ ಅರ್ಜಿಯನ್ನು ವಿಚಾರಣೆಗೊಳಪಡಿಸಿದ ನ್ಯಾಯಾಧೀಶರು ಒಂದು ವೇಳೆ ರಾಜಿಯಾಗಿದ್ದರೆ ಕೋರ್ಟಿಗೆ ತಿಳಿಸಿ ಇಲ್ಲದಿದ್ದರೆ ವಿಚಾರಣೆಗೆ ಹಾಜರಾಗಿ ಅಂತ ಖಡಕ್ ಆದೇಶ ನೀಡಿದೆ. ಬರುವ ಜೂನ್ ಹದಿನಾಲಕ್ಕನೇ ತಾರೀಕಿನಂದು ಸುದೀಪ್ ದಂಪತಿ ಕೋರ್ಟಿಗೆ ಹಾಜರಾಗಲೇಬೇಕಿದೆ. ಅಂದು ಈ ಜೋಡಿ ಮತ್ತೆ ಒಂದಾಗೋ ಎಲ್ಲ ಲಕ್ಷಣಗಳೂ ಇವೆ!
ಸುದೀಪ್ ಇಷ್ಟರಲ್ಲೇ ಹೆಂಡತಿ ಪ್ರಿಯಾಗೆ ಡಿವೋರ್ಸ್ ಕೊಡಲಿದ್ದಾರೆ ಅಂತೊಂದು ಸುದ್ದಿ ಹರಡಿ ಅದೆಷ್ಟೋ ವರ್ಷಗಳೇ ಕಳೆದಿದ್ದವು. ಇದರ ಜೊತೆ ಜೊತೆಗೇ ಪ್ರಿಯಾ ಬೇರೆ ಮನೆಯಲ್ಲಿ ವಾಸವಿದ್ದಾರೆಂಬಂಥಾ ರೂಮರುಗಳೂ ಹಬ್ಬುತ್ತಲೇ ಇದ್ದವು. ಆದರೆ ಈ ಜೋಡಿ ಆಗಾಗ ಒಟ್ಟಿಗೇ ಕಾಣಿಸಿಕೊಂಡು, ವರ್ಷದ ಹಿಂದೆ ಒಟ್ಟೊಟ್ಟಿಗೇ ಈವೆಂಟ್ ಕಂಪೆನಿಯನ್ನೂ ಆರಂಭಿಸಿದಾಗ ಇಂಥಾ ರೂಮರುಗಳಿಗೆ ಬ್ರೇಕು ಬಿದ್ದಿತ್ತು. ಇತ್ತ ಒಂದಿಬ್ಬರು ಸಹ ನಟರ ಸಂಸಾರ ಕಾಳಗ ಬೀದಿಗೆ ಬಿದ್ದಾಗಲೂ ಸಣ್ಣ ಸುಳಿವನ್ನೂ ಬಿಟ್ಟು ಕೊಡದೆ ತಣ್ಣಗೇ ಇದ್ದ ಸುದೀಪ್ ಹಾಗೂ ಪ್ರಿಯಾ ದಂಪತಿ ಡಿವೋರ್ಸಿಗಾಗಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋದರು ನೋಡಿ? ಅಭಿಮಾನಿಗಳಷ್ಟೇ ಅಲ್ಲದೆ ಬಹುತೇಕರು ಕನಲಿ ಹೋಗಿದ್ದರು.
ಆ ನಂತರ ಈ ವಿಚ್ಚೇದನ ಅರ್ಜಿ ಕೌಟುಂಬಿಕ ನ್ಯಾಯಾಲಯಕ್ಕೆ ಹೋದರೂ ಸುದೀಪ್ ಹಾಗೂ ಪ್ರಿಯಾ ವಿಚಾರಣೆಗೆ ಮಾತ್ರ ಹಾಜರಾಗಿರಲಿಲ್ಲ. ಅಷ್ಟೊತ್ತಿಗೇ ಕ್ರೇಜಿಸ್ಟಾರ್ ಎಂಟ್ರಿ ಕೊಟ್ಟು ಇಬ್ಬರ ಸಂಬಂಧಕ್ಕೆ ಬೆಸುಗೆ ಹಾಕುವಂತಾ ಮಾತಾಡಿದ್ದರು. ಯಾಕೆಂದರೆ ಈ ಜೋಡಿ ಶಾಶ್ವತವಾಗಿ ಬೇರಾಗೋದು ಕ್ರೇಜಿಸ್ಟಾರ್‌ಗೆ ಸುತಾರಾಂ ಇಷ್ಟವಿರಲಿಲ್ಲ. ಹೀಗಿರುವಾಗಲೇ ಇತ್ತೀಚೆಗೆ ಸುದೀಪ್ ದಂಪತಿ ಒಟ್ಟಾಗಿ ಮಗಳ ಹುಟ್ಟುಹಬ್ಬ ಆಚರಿಸಿದ್ದರು. ಇತ್ತೀಚೆಗೆ ಹೆಬ್ಬುಲಿ ಬಿಡುಗಡೆಯಾದಾಗಲೂ ಪ್ರಿಯಾ ಒಳ್ಳೆ ಮಾತುಗಳನ್ನಾಡಿದ್ದರು. ಇದೆಲ್ಲವೂ ಅವರು ಒಂದಾಗುವ ನಿರ್ಧಾರ ಮಾಡಿರೋ ಸೂಚನೆಯಂತೆಯೇ ಕಾಣಿಸುತ್ತಿದೆ.
ಕಿಚ್ಚನ ಅಭಿಮಾನಿಗಳು ಜೂನ್ ೧೪ರಂದು ತಾವೆಣಿಸಿದಂಥಾದ್ದೇ ಮ್ಯಾಜಿಕ್ಕು ಮಡೆಯುವ ಕ್ಷಣಕ್ಕಾಗಿ ಕಾತರರಾಗಿದ್ದಾರೆ!

Leave a Reply

Your email address will not be published. Required fields are marked *


CAPTCHA Image
Reload Image