One N Only Exclusive Cine Portal

ಜೆಡಿ ಚಕ್ರವರ್ತಿ-ಪೂಜಾ ಗಾಂಧಿ ಬ್ರೇಕಪ್?

ನಟಿ ಪೂಜಾ ಗಾಂಧಿಯ ದೋಖಾ ಧಾರಾವಾಹಿಗೆ ರಂಗು ರಂಗಾದ ಎಪಿಸೋಡುಗಳು ಸೇರ್ಪಡೆಯಾಗೋ ಎಲ್ಲ ಲಕ್ಷಣಗಳೂ ಸ್ಪಷ್ಟವಾಗಿ ಗೋಚರಿಸಲಾರಂಭಿಸಿವೆ. ಸಾಮಾನ್ಯವಾಗಿ ಒಂದು ಮಿಕ ಸಿಕ್ಕಾಕ್ಷಣ ಒಂದಷ್ಟು ಸಿನಿಮಾ ಪ್ರಾಜೆಕ್ಟುಗಳನ್ನ ಅನೌನ್ಸ್ ಮಾಡಿ ಲಾಭ ಗಿಟ್ಟಿಸಿಕೊಂಡು ಕೈಯೆತ್ತೋದು ಮಳೆ ಹುಡುಗಿ ಪೂಜಾಳ ಹಳೇ ವರಸೆ. ಇದೀಗ ಆಕೆ ಮತ್ತೊಮ್ಮೆ ಅಂಥಾದ್ದೇ ಅಸ್ತ್ರವನ್ನ ಪ್ರಯೋಗಿಸಿದಂತಿದೆ.

ತೆಲುಗಿನಲ್ಲಿ ಒಂದಷ್ಟು ಚಿತ್ರ ನಿರ್ದೇಶನ ಮಾಡಿದ್ದ ಜೆಡಿ ಚಕ್ರವರ್ತಿ ಮತ್ತು ಪೂಜಾ ಗಾಂಧಿ ಜನ್ಮಾಂತರಗಳ ಗೆಳೆಯರಂತೆ ಪೋಸು ಕೊಡಲು ಶುರು ಮಾಡಿ ವರ್ಷವಾಗುತ್ತಾ ಬಂದಿದೆ. ಈ ಪೂಜಾ ಇದೇ ಜೆಡಿಯ ಜೊತೆ ಬರೋಬ್ಬರಿ ಹತ್ತು ಚಿತ್ರ ಮಾಡೋದಾಗಿ ಹೇಳಿಕೊಂಡಿದ್ದಳು. ಆದರೀಗ ಪೂಜಾ ಮತ್ತು ಜೆಡಿ ಚಕ್ರವರ್ತಿಯ ನಡುವೆಯೇ ಹಳಸಿಕೊಂಡಿರೋ ಬಗ್ಗೆ ಗಾಂಧಿನಗರದ ತುಂಬಾ ಗುಲ್ಲೆದ್ದಿದೆ. ಪೂಜಾ ಗಾಂಧಿ ಜೆಡಿ ಚಕ್ರವರ್ತಿ ಜೊತೆ ಸಿನಿಮಾ ಮಾಡ್ತೀನಿ ಅಂದಾಗಲೇ ಇದು ಜಾಸ್ತಿ ದಿನ ಬಾಳಿಕೆ ಬರೋ ಮಾತಲ್ಲ ಎಂದು ಅಂದಾಜಿಸಲಾಗಿತ್ತು. ಈಗದು ನಿಜವಾದಂತೆ ಕಾಣುತ್ತಿದೆ.
`ರಾವಣಿ’ ಸಿನಿಮಾ ಮಾಡಲು ನಿರ್ದೇಶಕ ಡಿ.ಜೆ. ಚಕ್ರವರ್ತಿ (ಚಂದ್ರಚೂಡ್) ಆಂಧ್ರದಿಂದ ಜೆಡಿ ಚಕ್ರವರ್ತಿಯನ್ನು ಕರೆತಂದಿದ್ದರು. ಆದರೆ ಪೂಜಾಗಾಂಧಿ ಡಿ.ಜೆ. ಚಕ್ರವರ್ತಿ ಅವರ ಸಿನಿಮಾ ನಿರ್ಮಿಸುವುದಾಗಿ ಹೇಳಿ ಕೈ ಎತ್ತಿ, ಜೆಡಿ ಚಕ್ರವರ್ತಿಯೊಂದಿಗೆ ವ್ಯವಹಾರ ಮುಂದುವರೆಸಿದ್ದಳು.
ಈಗ ನೋಡಿದರೆ ಪೂಜಾ ಗಾಂಧಿ ಮತ್ತು ಜೆಡಿ ಚಕ್ರವರ್ತಿ ಜಾಯಿಂಟ್ ವೆಂಚರ್ ನಲ್ಲಿ ಶುರುವಾದ ಸಿನಿಮಾಗಳಲ್ಲಿ ಕೆಲಸ ಮಾಡಿದ ಕಾರ್ಮಿಕರು ಮತ್ತು ತಂತ್ರಜ್ಞರಿಗೆ ಪೂಜಾ ಪೇಮೆಂಟು ಕೊಡದೆ ಸತಾಯಿಸುತ್ತಿದ್ದಾಳೆ. ಮೊನ್ನೆ ದಿನ ಸಿನಿಮಾಗೆ ಕೆಲಸ ಮಾಡಿದ್ದ ಕಾರ್ಮಿಕರೆಲ್ಲ ಕತ್ರಿಗುಪ್ಪೆಯಲ್ಲಿರುವ ಪೂಜಾಳ ಪ್ರೆಸ್ಟೀಜ್ ಫ್ಲಾಟ್’ಗೇ ನುಗ್ಗಿದ್ದಾರೆ. ಆದರೆ ಅಲ್ಲೂ ಕೂಡಾ ಪೂಜಾ ಸುಳಿವು ದೊರೆತಿಲ್ಲ. ಮಾತ್ರವಲ್ಲ ಕಳೆದ ಹತ್ತು ದಿನದಿಂದ ಪೂಜಾ ಗಾಂಧಿ ಯಾರ ಕೈಗೂ ಸಿಕ್ಕಿಲ್ಲ.
ಅಲ್ಲಿಗೆ ಪೂಜಾಳ ಹತ್ತು ಸಿನಿಮಾಗಳ ಫುಲ್ ಪ್ಯಾಕೇಜೊಂದು ಗೋತಾ ಹೊಡೆದಿದ್ದು ಪಕ್ಕಾ ಆದಂತಿದೆ. ಒಂದು ಮೂಲದ ಪ್ರಕಾರ ಪೂಜಾ ಈ ಹತ್ತು ಸಿನಿಮಾಗಳ ಹೆಸರಲ್ಲಿಯೇ ಕೆಲ ಮಂದಿಯಿಂದ ಒಂದಷ್ಟು ಕಾಸೆತ್ತಿದ್ದಾಳೆಂಬ ಮಾತುಗಳಿವೆ. ಹಾಗೆ ಪೂಜಾಳ ಮಾತು ನಂಬಿ ಯಾರ್‍ಯಾರೆಲ್ಲ ಕಾಸು ಹಾಕಿದ್ದಾರೋ ಅವರೆಲ್ಲರಿಗೂ ನಾಮ ಗ್ಯಾರಂಟಿ!
ಈ ಹತ್ತು ಸಿನಿಮಾ ಪ್ಯಾಕೇಜು ನೆಗೆದು ಬಿದ್ದ ಬೆನ್ನಿಗೇ ಪೂಜಾಳ ವಿರುದ್ಧ ಇನ್ನೇನೇನು ಫ್ರಾಡು ಕೇಸುಗಳು ಜಡಿದುಕೊಳ್ಳಲಿವೆಯೋ, ಇನ್ನೇನೇನು ರಾಡಿಯೇಳಲಿದೆಯೋ ಬಲ್ಲೋರ್‍ಯಾರು?

Leave a Reply

Your email address will not be published. Required fields are marked *


CAPTCHA Image
Reload Image