One N Only Exclusive Cine Portal

ಜೈನ ಸಮಾರಂಭದಲ್ಲಿ ಛಾಲೆಂಜಿಂಗ್ ಸ್ಟಾರ್

ನಮ್ಮ ಛಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಎಲ್ಲಾ ಧರ್ಮಗಳೂ ಒಂದೇ. ಅಸಲಿಗೆ ಸಿನಿಮಾ ಕಲಾವಿದರೆಂದರೇನೇ ಧರ್ಮಾತೀತರು. ಹಾಗಿರುವಾಗ ಇದ್ದಕ್ಕಿದ್ದಂತೆ ದರ್ಶನ್ ವಿಚಾರವಾಗಿ ಧರ್ಮದ ಮಾತಾಡುತ್ತಿರುವುದಕ್ಕೂ ಕಾರಣವಿದೆ.
ನಿನ್ನೆ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ಜೈನ ಸಮುದಾಯದವರು ಏರ್ಪಡಿಸಿದ್ದ ಪಂಚಕಲ್ಯಾಣ ಮಹೋತ್ಸವದಲ್ಲಿ ಮುಖ್ಯ ಅಥಿತಿಯಾಗಿ ದರ್ಶನ್ ಭಾಗವಹಿಸಿದ್ದರು. ಅವರೊಡನೆ ಸಚಿವರಾದ ವಿನಯ್ ಕುಲಕರ್ಣಿ ಕೂಡಾ ಪಾಲ್ಗೊಂಡಿದ್ದರು.
ಹುಲಿ ಮತ್ತು ಹಸು ಒಂದೇ ಕೊಳಗದಲ್ಲಿ ಆಹಾರ ಸೇವಿಸುತ್ತಿರುವ, ಹಾಗೆ ಅವು ತಮ್ಮ ಪಾಲಿನ ಊಟವನ್ನು ತಿನ್ನುತ್ತಿರುವಾಗ ಹಸುವಿನ ಕೆಚ್ಚಲಿನಲ್ಲಿ ಹುಲಿ ಹಾಲು ಕುಡಿಯುತ್ತಿರುವ, ಹುಲಿಯ ಬಳಿ ಕರು ಹಾಲು ಹೀರುತ್ತಿರುವ ವಿಶಿಷ್ಟವಾದ ಕಲಾಕೃತಿಯನ್ನು ಸಮಾರಂಭದ ವೇದಿಕೆಯಲ್ಲಿಡಲಾಗಿತ್ತು. ವಿಶೇಷವಾಗಿ ಅಲಂಕರಿಸಿದ್ದ ವೇದಿಕೆಗೆ ಚಾಲೆಂಜಿಂಗ್ ಸ್ಟಾರ್ ಅವರ ಇರುವಿಕೆ ಮತ್ತಷ್ಟು ರಂಗು ತಂದಿತ್ತು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ದರ್ಶನ್ ಅವರ ಮನಸ್ಸಿಗೆ ಸಮಾಧಾನ ತಂದರೆ, ನೆಚ್ಚಿನ ಸ್ಟಾರ್ ಅನ್ನು ಕಣ್ತುಂಬಿಕೊಂಡ ಸಂಭ್ರಮ ಅಭಿಮಾನಿಗಳದ್ದಾಗಿತ್ತು.

Leave a Reply

Your email address will not be published. Required fields are marked *


CAPTCHA Image
Reload Image