One N Only Exclusive Cine Portal

ಟೀಸರ್‌ನಲ್ಲೇ ಜ್ವರ ಏರಿಸಿದ ಪುಣ್ಯಾತ್ಗಿತ್ತೀರು!

ನಾಲ್ವರು ಬಿಂದಾಸ್ ಹುಡುಗೀರೇ ಮುಖ್ಯಭೂಮಿಕೆಯಲ್ಲಿರುವ ‘ಪುಣ್ಯಾತ್ಗಿತ್ತೀರು ಚಿತ್ರದ ಟೀಸರ್ ಇದೀಗ ಭಾರೀ ಫೇಮಸ್ ಆಗಿದೆ. ಅರಾನಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿತೇಶ್ ಬಾಲ್ಡಾ ನಿರ್ಮಾಣದ ಈ ಚಿತ್ರದ ಟೀಸರ್ ಬಿಡುಗಡೆಯಾಗಿ ದಿನಗೊಪ್ಪತ್ತಿನಲ್ಲಿಯೇ ಯೂಟ್ಯೂಬ್‌ನಲ್ಲಿ ಐವತ್ತು ಸಾವಿರಕ್ಕೂ ಹೆಚ್ಚಿನ ವೀಕ್ಷಣೆ ಪಡೆಯುವ ಮೂಲಕ ಟಾಕ್ ಕ್ರಿಯೇಟ್ ಮಾಡುವಲ್ಲಿ ಯಶ ಕಂಡಿದೆ.
ರಾಜ್ ಕತೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರೋ ಈ ಚಿತ್ರದಲ್ಲಿ ಮಮತಾ ರಾವುತ್, ವಿದ್ಯಾ ಮೂಡಿಗೆರೆ ಮತ್ತು ವಿದ್ಯಾಶ್ರೀ ಬೋಲ್ಡ್ ಹುಡುಗಿಯರಾಗಿ ಕಾಣಿಸಿಕೊಂಡಿದ್ದಾರೆ. ಟೀಸರ್‌ನ ಮೂಲಕವೇ ಸಖತ್ ಹವಾ ಕ್ರಿಯೇಟ್ ಮಾಡಿರೋ ಈ ಚಿತ್ರದ ಟೀಸರ್‌ನಲ್ಲಿ ಈ ಮೂವರು ಹುಡುಗೀರು ಲಕ್ಷಣವಾಗಿ ಸೀರೇ ಉಟ್ಕೋಬಾರ‍್ದಾ ಎಂಬ ಮಾತಿಗೆ ಪ್ರತಿಯಾಗಿ ಅಚ್ಚುಕಟ್ಟಾಗಿ ಷರ್ಟ್ ಎತ್ತಿ ಕಟ್ಟು ಹೊಕ್ಕುಳು ತೋರಿಸಿಕೊಂಡು ಓಡಾಡೋ ಪುಣ್ಯಾತ್ಗಿತ್ತೀರಾಗಿ ಪಡ್ಡೆ ಹುಡುಗರಿಗೆ ಕಚಗುಳಿ ಇಟ್ಟಿದ್ದಾರೆ.
ಈ ಚಿತ್ರದಲ್ಲಿ ಕುರಿ ರಂಗ ಮುಂತಾದವರು ಪುಣ್ಯಾತ್‌ಗಿತ್ತೀರಿಗೆ ಸಾಥ್ ನೀಡಿದ್ದಾರೆ. ಇನ್ನುಳಿದಂತೆ ರಾಮಾನುಜಂ ಸಂಗೀತ, ಶರತ್ ಕುಮಾರ್ ಜಿ ಛಾಯಾಗ್ರಹಣ, ಶಿವಶಂಕರ್ ಸಂಕಲನ, ಸಂದೀಪ್ ಕನಬಕಪಯರ ಸಂಭಾಷಣೆ, ತ್ರಿಭುವನ್ ನೃತ್ಯ ನಿರ್ದೇಶನ ಮತ್ತು ಡಾ.ವಿ ನಾಗೇಂದ್ರ ಪ್ರಸದ್ ಅವರ ಸಾಹಿತ್ಯವಿದೆ.

Leave a Reply

Your email address will not be published. Required fields are marked *


CAPTCHA Image
Reload Image