One N Only Exclusive Cine Portal

ಟೀಸರ್ ಲಾಂಚ್ ಮಾಡ್ತಾರೆ ಶ್ರೀಮುರಳಿ

ಸರಿಸುಮಾರು 30 ವರ್ಷಗಳ ಹಿಂದೆ ನಟ ಶಿವರಾಜ್‌ಕುಮಾರ್ ಅಭಿನಯದಲ್ಲಿ ತೆರೆ ಕಂಡಿದ್ದ ಚಿತ್ರ ಸಂಯುಕ್ತ. ಹಾರರ್ ಕಥಾನಕ ಹೊಂದಿದ್ದ ಆ ಚಿತ್ರವು ಯಶಸ್ವಿ ಪ್ರದರ್ಶನ ಕಂಡಿತ್ತು. ಈಗ 30 ವರ್ಷಗಳ ನಂತರ ಅಂಥದ್ದೇ ಕಥಾನಕ ಹೊಂದಿರುವ ಚಿತ್ರವೊಂದು ಸ್ಯಾಂಡಲ್‌ವುಡ್‌ನಲ್ಲಿ ನಿರ್ಮಾಣಗೊಂಡಿದೆ. ಈ ಚಿತ್ರದಲ್ಲಿ ಕೂಡ ಮೂವರು ಸ್ನೇಹಿತರ ಮೇಲೆಯೇ ಚಿತ್ರಕಥೆ ಮಾಡಲಾಗಿದೆಯಾದರೂ ಕಥಾವಸ್ತು ಬೇರೆ ರೀತಿಯಲ್ಲಿದೆ. ಸಂಯುಕ್ತ-2 ಹೆಸರಿನ ಈ ಚಿತ್ರ ಈಗ ಬಿಡುಗಡೆಗೆ ತಯಾರಾಗಿದ್ದು ಇದೇ ಅಕ್ಟೋಬರ್ 23ರ ಸೋಮವಾರ ಅದರ ಟೀಸರ್ ಅನಾವರಣಗೊಳ್ಳಲಿದೆ. ಉಗ್ರಂ ಮತ್ತು ರಥಾವರ ಚಿತ್ರಗಳ ಮೂಲಕ ದೊಡ್ಡ ಮಟ್ಟದ ಅಭಿಮಾನಿಗಳನ್ನು ಹೊಂದಿರುವ ಶ್ರೀಮುರಳಿ `ಸಂಯುಕ್ತ-2′ ಚಿತ್ರದ ಟೀಸರ್ ಅನ್ನು ರಿಲೀಸ್ ಮಾಡುತ್ತಿರುವುದು ವಿಶೇಷ.
ಅಭಿರಾಮ್ ನಿರ್ದೇಶನದ ಈ ಚಿತ್ರದಲ್ಲಿ ಚೇತನ್‌ಚಂದ್ರ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಸಂಜಯ್ ಹಾಗೂ ಪ್ರಭುಸೂರ್ಯ ಉಳಿದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬೆಡಗಿ ನೇಹಾ ಪಾಟೀಲ್ ಹಾಗೂ ಪ್ರಿಯಾಂಕ ಮಲ್ನಾಡ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಕೆ.ವಿ.ರವಿಚಂದ್ರ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು 143 ಖ್ಯಾತಿಯ ರಾಜಶೇಖರ್ ಕ್ಯಾಮೆರಾ ಹಿಡಿದಿದ್ದಾರೆ. ಮತೊಬ್ಬ ಕಲಾವಿದ ಸಂತೋಷ್ ಹಾಸ್ಯಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೃಗಶಿರ ನಿರ್ದೇಶಕ ಶ್ರೀವತ್ಸ ಈ ಚಿತ್ರದ ಚಿತ್ರಕಥೆ ರಚಿಸಿದ್ದಾರೆ. ನಿರ್ದೇಶಕ ಅಭಿರಾಮ್ ಹೇಳುವಂತೆ ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಕಥಾನಕ. ಮನುಷ್ಯನ ಹುಟ್ಟು-ಸಾವಿನ ನಡುವೆ ನಡೆವಂಥ ಕಥೆ. ಆತ ಸತ್ತ ನಂತರ ಏನೇನಾಗುತ್ತಾನೆ ಎಂದು ಈ ಚಿತ್ರದಲ್ಲಿ ಹೇಳ ಹೊರಟಿದ್ದಾರಂತೆ. ಇದೊಂದು ಹಾರರ್, ಕಾಮಿಡಿ ಚಿತ್ರವಾಗಿದ್ದು ತೆರೆಗೆ ಬರಲು ಸಂಪೂರ್ಣ ತಯಾರಾಗಿದೆ.
ಜಾತ್ರೆ ನಂತರ ಹೊಸಥರದ ಪಾತ್ರಕ್ಕಾಗಿ ಬಹಳ ದಿನ ಕಾದೆ. ನಾನು ಬಯಸಿದಂಥ ವಿಭಿನ್ನವಾದ ಪಾತ್ರವೇ ಈ ಚಿತ್ರದಲ್ಲಿ ಸಿಕ್ಕಿದೆ. 3-4 ಥರದ ವಿಭಿನ್ನ ಶೇಡ್ಸ್ ಇರೋ ಪಾತ್ರ ನನ್ನದು ಎನ್ನುವುದು ಚೇತನ ಚಂದ್ರ ಅವರ ಅಭಿಪ್ರಾಯ. ಈ ಚಿತ್ರವನ್ನು ಮಂಜುನಾಥ್ ಡಿ.ಎಸ್ ಅವರು ಸಂಜಯ್ ಕೆ  ಮತ್ತು ನಾರಾಯಣ ಸ್ವಾಮಿ ಅವರ ಜೊತೆಗೂಡಿ ರ್ಮಾಣ ಮಾಡಿದ್ದಾರೆ…

Leave a Reply

Your email address will not be published. Required fields are marked *


CAPTCHA Image
Reload Image