One N Only Exclusive Cine Portal

ಟ್ರಾಲ್ ಗೂಂಡಾಗಿರಿ ವಿರುದ್ಧ ಸಿಡಿದೆದ್ದ ಪ್ರಕಾಶ್ ರೈ!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಸಮಾಜದಲ್ಲಿ ನಡೆಯುತ್ತಿರೋ ವಿದ್ಯಮಾನಗಳ ಬಗ್ಗೆ ಮಾತಾಡುತ್ತಲೇ ನೇರಾ ನೇರ ಅಭಿಪ್ರಾಯ ಮಂಡಿಸೋ ಮೂಲಕ ಚರ್ಚೆ ಹುಟ್ಟು ಹಾಕಿ ವಿವಾದಕ್ಕೂ ಕಾರಣವಾಗಿರುವವರು ಬಹು ಭಾಷಾ ನಟ ಪ್ರಕಾಶ್ ರೈ. ಆದರೆ ಇವರ ವಿಚಾರಗಳನ್ನು ಒಪ್ಪದ ಒಂದು ಗುಂಪು ಸಾಮಾಜಿಕ ಜಾಲತಾಣಗಳಲ್ಲಿ ನಿಂದನಾತ್ಮಕವಾದ ಪ್ರಹಾರ ಜಾರಿಯಲ್ಲಿಟ್ಟಿದೆ.
ವೈಯಕ್ತಿಕ ವಿಚಾರಗಳನ್ನು ಕೆದಕಿ ಕೀಳಾಗಿ ಸುಳ್ಳು ಹರಡಿಸೋ ಮೂಲಕ ಧ್ವನಿಯನ್ನೇ ಅಡಗಿಸೋ ಟ್ರಾಲ್ ಗೂಂಡಾಗಿರಿ ವಿರುದ್ಧ ಪ್ರಕಾಶ್ ರೈ ಸಿಡಿದೆದ್ದಿದ್ದಾರೆ. ಈ ಬಗ್ಗೆ ಇಂದು ಮಾಧ್ಯಮ ಪ್ರತಿನಿಧಿಗಳನ್ನು ಮುಖಾಮುಖಿಯಾಗಿ ಈ ಬಗ್ಗೆ ಕೆಲ ಮುಖ್ಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಇಂದು ಫೇಸ್ ಬುಕ್‌ನಂಥಾ ಸಾಮಾಜಿಕ ಜಾಲತಾಣಗಳು ಕೊಳಕನ್ನೇ ತುಂಬಿಕೊಂಡಂತೆ ಬಾಸವಾಗುತ್ತಿವೆ. ಇವುಗಳನ್ನು ಬಳಸಿಕೊಂಡು ಜವಾಬ್ದಾರಿಯುತ ಸ್ಥಾನದಲ್ಲಿರುವವರೇ ಪಡ್ಡೆಗಳಂತೆ ವಿರೋಧಿ ಗುಂಪಿನ ಮೇಲೆ ಪ್ರಹಾರ ನಡರಸುತ್ತಿದ್ದಾರೆ. ಇಂಥಾದ್ದರ ವಿರುದ್ಧ ಕಾನೂನು ಸಮರ ಅರಂಭಿಸಿರೋ ಪ್ರಕಾಶ್ ರೈ ಸಂಸದ ಪ್ರತಾಪ್ ಸಿಂಹ ವಿರುದ್ಧ ಈಗಾಗಲೇ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಇಂದು ಪತ್ರಿಕಾ ಗೋಷ್ಟಿ ಮೂಲಕ ಟ್ರಾಲ್ ಗೂಂಡಾಗಿರಿ ಬಗ್ಗೆ ಪ್ರಕಾಶ್ ರೈ ಮಾತಾಡೋ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿನ ಸ್ವೇಚ್ಚಾಚಾರಕ್ಕೆ ಕಡಿವಾಣ ಹಾಕೋ ಬಗ್ಗೆ ಗಂಭೀರ ವಿಚಾರಗಳು ಹೊರ ಬಿಳೋ ಸಾಧ್ಯತೆಗಳಿವೆ.

copying or reproducing the above content in any format without approval is criminal offence and will be prosecuted in Bengaluru court © CINIBUZZ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Leave a Reply

Your email address will not be published. Required fields are marked *


CAPTCHA Image
Reload Image