One N Only Exclusive Cine Portal

ಟ್ರೈಲರ್ ದಿನಾಂಕ ಘೋಷಣೆಗೆಂದೇ ಮತ್ತೊಂದು ಟ್ರೈಲರ್!

ಈ ಹಿಂದೆ `ಗೊಂಬೆಗಳ ಲವ್ ಚಿತ್ರದ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ಸಂತೋಷ್ ಅವರ ಹೊಸಾ ಚಿತ್ರ `ದಾದಾ ಈಸ್ ಬ್ಯಾಕ್. ಆರಂಭದ ಚಿತ್ರದಲ್ಲಿಯೇ ಒಂದಷ್ಟು ಕ್ರಿಯಾಶೀಲ ಪ್ರಯತ್ನ ಮಾಡಿದ್ದ ಸಂತೋಷ್, ಇದೀಗ ಟ್ರೈಲರ್ ಬಿಡುಗಡೆಯ ಬಗ್ಗೆಯೇ ಒಂದು ಟ್ರೈಲರ್ ಬಿಟ್ಟು ಹವಾ ಎಬ್ಬಿಸಿದ್ದಾರೆ!
ಭಾರೀ ವೇಗದಿಂದ ಚಿತ್ರೀಕರಣ ಪೂರೈಸಿಕೊಳ್ಳುತ್ತಿರುವ ಈ ಚಿತ್ರದ ಟ್ರೈಲರ್ ರೆಡಿಯಾಗಿದೆ. ಈ ಟ್ರೈಲರ್ ಬಿಡುಗಡೆಯಾಗುವ ದಿನಾಂಕವನ್ನು ಡಿಫರೆಂಟಾಗಿ ಮಾಡಬೇಕೆಂ ಬ ಇರಾದೆಯಿಂದ ನಿರ್ದೇಶಕರು ಅದಕ್ಕಾಗಿಯೇ ಚೆಂದದ್ದೊಂದು ಟ್ರೈಲರ್ ಅನ್ನು ಯೂಟ್ಯೂಬಲ್ಲಿ ಹರಿಯಬಿಟ್ಟಿದ್ದಾರೆ. ಈ ಟ್ರೈಲರ್ ಮೂಲಕವೇ ಹನುಮಂತ ದೇವರ ಮೂಲಕ ಟ್ರೈಲರ್ ಡೇಟ್ ಅರ್ನನ್ಸ್ ಮಾಡಿಸಿರೋದು ಮತ್ತೊಂದು ವಿಶೇಷ!
ಈ ಆಧಾರದಲ್ಲಿ ಹೇಳೋದಾದರೆ ಏಪ್ರಿಲ್ ಒಂದನೇ ತಾರೀಕಿನಂದು ದಾದಾ ಈಸ್ ಬ್ಯಾಕ್ ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ. ಆರಂಭದ ಚಿತ್ರದಲ್ಲಿ ನವಿರು ನಿರೂಪಣೆಯ ಮೂಲಕ ಮೋಡಿ ಮಾಡಿದ್ದ ಸಂತೋಷ್ ಅವರು ಈ ಚಿತ್ರದಲ್ಲಿ ಪಕ್ಕಾ ಮಾಸ್ ಸಬ್ಜೆಕ್ಟ್ ಒಂದನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಈ ಚಿತ್ರದಲ್ಲಿಯೂ ಗೊಂಬೆಗಳ ಲವ್ ಚಿತ್ರದಲ್ಲಿ ನಾಯಕರಾಗಿದ್ದ ಅಎಉಣ್ ನಾಯಕರಾಗಿದ್ದಾರೆ. ಸುಧಾರಾಣಿ, ಶರತ್ ಲೋಹಿತಾಶ್ವ, ಖ್ಯಾತ ತಮಿಳು ನಟ ಪಾರ್ಥಿಬನ್ ಮುಂತಾದವರ ಅದ್ದೂರಿ ತಾರಾಗಣ ಈ ಚಿತ್ರಕ್ಕಿದೆ.

 

Leave a Reply

Your email address will not be published. Required fields are marked *


CAPTCHA Image
Reload Image