Connect with us

ಕಲರ್ ಸ್ಟ್ರೀಟ್

ಡಬ್ಬಿಂಗ್ ಸ್ಟುಡಿಯೋದಲ್ಲಿ ರಕ್ಷಿತಾಗೆ ಕಾಟ ಕೊಟ್ಟರೇ ಪ್ರೇಮ್?

Published

on

ಒಂದು ಕಾಲದಲ್ಲಿ ಸುಂಟರಗಾಳಿಯಂತೆ ಅಪ್ಪಳಿಸಿ ಸ್ಯಾಂಡಲ್‌ವುಡ್ ಕ್ವೀನ್ ಅನ್ನಿಸಿಕೊಂಡಿದ್ದವರು ರಕ್ಷಿತಾ. ನಂಬರ್ ಒನ್ ನಾಯಕಿ ಎಂಬ ಪಟ್ಟವನ್ನೂ ಗಿಟ್ಟಿಸಿಕೊಂಡು ಬೇಡಿಕೆಯ ಉತ್ತುಂಗದಲ್ಲಿರುವಾಗಲೇ ನಿರ್ದೇಶಕ ಪ್ರೇಮ್ ಅವರನ್ನು ಮದುವೆಯಾದ ರಕ್ಷಿತಾ ಚಿತ್ರರಂಗದಿಂದ ಪರ್ಮನೆಂಟಾಗಿಯೇ ಕಣ್ಮರೆಯಾಗಿದ್ದರು. ಆದರೆ ಬಹು ಕಾಲದಿಂದ ಚಿತ್ರರಂಗದಿಂದ ದೂರವೇ ಉಳಿದಿದ್ದು ಡಬ್ಬಿಂಗ್ ಮಾಡಲು ಬಂದಿದ್ದ ರಕ್ಷಿತಾಗೆ ಪತಿ ಪ್ರೇಮ್ ಅವರೇ ಥರ ಥರದ ಕಾಟ ಕೊಟ್ಟು ಕಾಡಿಸಿದ ಮಜವಾದ ಘಟನೆಯೊಂದು ದಿ ವಿಲನ್ ಚಿತ್ರದ ವಿಚಾರವಾಗಿ ನಡೆದಿದೆ!

ದಿ ವಿಲನ್ ಚಿತ್ರವೀಗ ಅಂತಿಮ ಹಂತ ವತಲುಪಿಕೊಂಡಿದೆ. ಆದರೆ ಈ ಚಿತ್ರದ ನಾಯಕಿ ಆಮಿ ಜಾಕ್ಸನ್‌ಗೆ ವಾಯ್ಸ್ ಡಬ್ ಮಾಡುವ ಕೆಲಸ ಮಾತ್ರ ಬಹು ಕಾಲದಿಂದಲೂ ಹಾಗೆಯೇ ಉಳಿದುಕೊಂಡಿತ್ತು. ಕಡೆಗೂ ಅದಕ್ಕೆ ರಕ್ಷಿತಾರೇ ಸರಿಯಾದವರೆಂಬ ತೀರ್ಮಾನ ಮಾಡಿ ಅದಕ್ಕೆ ಒಪ್ಪಿಕೊಂಡಿದ್ದ ರಕ್ಷಿತಾ ವಾಯ್ಸ್ ಡಬ್ ಮಾಡಲು ಸ್ಟುಡಿಯೋಗೂ ಬಂದಿದ್ದರು. ಆದರೆ ಸಾಕ್ಷಾತ್ತು ಪತಿದೇವ ಪ್ರೇಮ್ ಅವರೇ ರಕ್ಷಿತಾರನ್ನು ಪರಿ ಪರಿಯಾಗಿ ಕಾಡಿದ್ದಾರಂತೆ!

ಸಾಮನ್ಯವಾಗಿ ಪ್ರೇಮ್ ತಮಗೆ ಖುಷಿಯಾಗದೆ ಯಾವುದೇ ಕೆಲಸವನ್ನೂ ಒಪ್ಪಿಕೊಳ್ಳುಚವವರಲ್ಲ. ರಕ್ಷಿತಾ ಆಮಿ ಜಾಕ್ಸನ್ ಭಾಗದ ವಾಯ್ಸ್ ಡಬ್ ಮಾಡುವಾಗ ಒಂದಷ್ಟು ಕಾಲ ಎಲ್ಲವೂ ಸರಾಗವಾಗಿ ಸಾಗಿತ್ತು. ಆದರೆ ಆ ನಂತರದಲ್ಲಿ ಅಸಲೀ ಸಮಸ್ಯೆ ಶುರುವಾಗಿತ್ತು. ಮುಖ್ಯವಾದ ಡೈಲಾಡುಗಳನ್ನು ಹೇಳುವಾಗ ಒಂದನ್ನು ಇಪ್ಪತ್ತಕ್ಕೂ ಹೆಚ್ಚು ಸಲ ಪ್ರೇಮ್ ರಕ್ಷಿತಾರಿಂದ ಹೇಳಿಸಿಕೊಂಡು ಕಡೆಗೆ ಫೈನಲ್ ಮಾಡಿದ್ದರಂತೆ. ಇದೇನು ಒಂದು ಡೈಲಾಗಿಗೆ ಸೀಮಿತವಾಗಿಲ್ಲ. ಅದೆಷ್ಟೋ ಡೈಲಾಗುಗಳನ್ನು ರಕ್ಷಿತಾ ಇಪ್ಪತ್ತಕ್ಕೂ ಹೆಚ್ಚು ಸಲ ಸೈಕಲ್ ಹೊಡೆದುಕೊಂಡು ಹೇಳಿದ್ದರು. ಇಷ್ಟು ಕಾಡಿಸಿ ಕಡೆಗೂ ಪ್ರೇಮ್ ಸಂಪೂರ್ಣವಾಗಿ ಡಬ್ಬಿಂಗ್ ಮುಗಿಸಿಕೊಂಡೇ ರಕ್ಷಿತಾರನ್ನು ಕಳಿಸಿಕೊಟ್ಟಿದ್ದಾರೆ!

ಆಮಿ ಜಾಕ್ಸನ್‌ಗೆ ವಾಯ್ಸ್ ಡಬ್ ಮಾಡಲು ಯಾರು ಸೂಕ್ತ ಎಂಬ ಬಗ್ಗೆ ಆಗಾಗ ಭಾರೀ ಚರ್ಚೆ ನಡಎದಿತ್ತಂತೆ. ಕಡೆಗೂ ಚಿತ್‌ರತಂಡದ ಒಬ್ಬರು ರಕ್ಷಿತಾ ಅವರೇ ಸೂಕ್ತ ಅಂದಿದ್ದಲ್ಲದೇ ತಾವೇ ಹೋಗಿ ಅವರನ್ನು ಒಪ್ಪಿಸಿದ್ದರಂತೆ. ತಮ್ಮ ಪತಿಯ ಚಿತ್ರವೆಂಬ ಪ್ರೀತಿಯಿಂದಲೇ ವಾಯ್ಸ್ ಡಬ್ ಮಾಡಲು ಒಪ್ಪಿಕೊಂಡ ರಕ್ಷಿತ ಅಷ್ಟು ಕಾಟ ಅನುಭವಿಸಿಯೂ ಚೆಂದಗೆ ಕೆಲಸ ಮುಗಿಸಿದ ಖುಷಿ ಹೊಂದಿದ್ದಾರೆ. ಪ್ರೇಮ್ ಕೂಡಾ ತಾವಂದುಕೊಂಡತೆಯೇ ಕೆಲಸ ತೆಗೆಸಇಕೊಂಡ ತೃಪ್ತಿಯಲ್ಲಿದ್ದಾರೆ!

ರಕ್ಷಿತಾ ಸಿನಿಮಾ ಮಾತ್ರವಲ್ಲದೇ ಅದಕ್ಕೆ ಸಂಬಂಧಿಸಿದ ಕೆಲಸ ಕರ್ಯಗಳಿಂದಲೂ ದೂರವುಳಿದು ಬಹು ಕಾಲವಾಗಿತ್ತು. ಕಿರುತೆರೆಯ ರಿಯಾಲಿಟಿ ಶೋಗಳ ಮೂಲಕ ಎರಡನೇ ಇನ್ನಿಂಗ್ಸ್ ಆರಂಭಿಸಿ ಅಲ್ಲಿ ಅಪಾರ ಮನ್ನಣೆ ಗಳಿಸಿಕೊಂಡಿರುವ ರಕ್ಷಿತಾ ಅದೇನೇ ರಗಳೆಯಾದರೂ ಸುದೀರ್ಘ ಕಾಲಾವಧಿಯ ಬಳಿಕ ವಿಲನ್ ಚಿತ್ರಕ್ಕೆ ವಾಯ್ಸ್ ಡಬ್ ಮಾಡೋ ಮೂಲಕ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ. ಮುಂದೆ ಅವರು ಮತ್ತೆ ನಟನೆಗಿಳಿಯುತ್ತಾರಾ ಎಂಬ ಪ್ರಶ್ನೆಗೆ ಮಾತ್ರ ನಿಖರವಾದ ಉತ್ತರವಿಲ್ಲ!

 

ಕಲರ್ ಸ್ಟ್ರೀಟ್

ಕಾಳಿದಾಸನ ಜೋಡಿಯಾಗಿ ಬರ‍್ತಾಳೆ ಮೇಘನಾ!

Published

on


ಮೇಘನಾ ಗಾಂವ್‌ಕರ್ ಎಂಬ ನಟಿ ಎತ್ತ ಹೋದಳು ಅಂತ ಒಂದಷ್ಟು ಜನರಾದರೂ ಹುಡುಕಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಒಂದಷ್ಟು ವರ್ಷಗಳ ಅಜ್ಞಾತವಾಸದ ನಂತರ ಈಕೆ ಮತ್ತೆ ಮರಳಿದ್ದಾಳೆ. ಕಾಳಿದಾಸ ಕನ್ನಡ ಮೇಸ್ಟ್ರು ಎಂಬ ಚಿತ್ರಕ್ಕೆ ಮೇಘನಾ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ!

ಎರಡು ವರ್ಷಗಳ ಹಿಂದೆ ತೆರೆ ಕಂಡಿದ್ದ ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ ಚಿತ್ರದಲ್ಲಿ ಮೇಘನಾ ನಾಯಕಿಯಾಗಿ ನಟಿಸಿದ್ದೇ ಕೊನೆ. ಆ ನಂತರ ಈಕೆಯ ಪತ್ತೆ ಇರಲಿಲ್ಲ. ರಶ್ಮಿಕಾ ಮಂದಣ್ಣ ಜೊತೆ ಬ್ರೇಕಪ್ ಮಾಡಿಕೊಂಡ ರಕ್ಷಿತ್ ಶೆಟ್ಟಿ ಮೇಘನಾ ಜೊತೆ ಲವ್ವಲ್ಲಿ ಬಿದ್ದಿದ್ದಾರೆ ಅಂತೊಂದು ರೂಮರ್ ಹರಡಿತ್ತಲ್ಲಾ? ಆ ಮೂಲಕವೇ ಮತ್ತೆ ಸುದ್ದಿ ಕೇಂದ್ರಕ್ಕೆ ಬಂದಿದ್ದ ಈಕೆ ಮತ್ತೆ ನಟಿಯಾಗಿ ಮರಳಿದ್ದಾಳೆ.

ಗೀತಸಾಹಿತಿ ಕವಿರಾಜ್ ಕಾಳಿದಾಸ ಕನ್ನಸ ಮೇಶ್ಟ್ರು ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಕವಿರಾಜ್ ಕೂಡಾ ಮದುವೆಯ ಮಮತೆಯ ಕರೆಯೋಲೆ ಚಿತ್ರದ ನಂತರ ಇದೇ ಮೊದಲ ಬಾರಿ ನಿರ್ದೇಶನ ಮಾಡುತ್ತಿದ್ದಾರೆ. ಬದುಕಿಗೆ ಹತ್ತಿರವಾದ ಕಥೆ ಹೊಂದಿರೋ ಪಕ್ಕಾ ಕಮರ್ಶಿಯಲ್ ಮೆಥೆಡ್ಡಿನ ಈ ಚಿತ್ರದಲ್ಲಿ ಜಗ್ಗೇಶ್ ನಾಯಕನಾಗಿ ನಟಿಸಲಿದ್ದಾರೆ. ಇದೇ ಮೊದಲ ಬಾರಿ ಜಗ್ಗಣ್ಣನಿಗೆ ಮೇಘನಾ ನಾಯಕಿಯಾಗಿ ನಟಿಸುತ್ತಿದ್ದಾಳೆ.

Continue Reading

ಕಲರ್ ಸ್ಟ್ರೀಟ್

ಬಿಚ್ಚುಗತ್ತಿ ಬರಮಣ್ಣ ಮತ್ತು ನೀರ್ದೋಸೆ ಹರಿಪ್ರಿಯಾ!

Published

on

ಹರಿಪ್ರಿಯಾ ಐತಿಹಾಸಿಕ ಚಿತ್ರವೊಂದರ ಮೂಲಕ ಬೇರೆಯದ್ದೇ ಥರದ ಪಾತ್ರದಲ್ಲಿ ಮಿಂಚಲು ಉತಯಾರಾಗಿದ್ದಾರೆ. ಈ ವರೆಗೂ ಇಮೇಜಿನ ಹಂಗಿಗೆ ಬೀಳದೆ ಭಿನ್ನ ಪಾತ್ರಗಳನ್ನೇ ಧ್ಯಾನಿಸುತ್ತಾ ಬಂದಿರುವ ಹರಿಪ್ರಿಯಾ ಪಾಲಿಗೆ ಈಗ ಸಿಕ್ಕಿರೋದು ನಿಜಕ್ಕೂ ಬಂಪರ್ ಅವಕಾಶ!

ನಾದಬ್ರಹ್ಮ ಹಂಸಲೇಖ ಬಿಚ್ಚುಗತ್ತಿ ಭರಮಣ್ಣ ನಾಯಕ ಚಿತ್ರವನ್ನು ನಿರ್ದೇಶಲನ ಮಾಡಲಿಯದ್ದಾರೆಂಬ ಸುದ್ದಿಯಾಗಿತ್ತಲ್ಲಾ? ಈ ಚಿತ್ರಕ್ಕೆ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ನಾಯಕನಾಗಿಯೂ ನಿಕ್ಕಿಯಾಗಿದ್ದರು. ಬರಮಣ್ಣ ನಾಯಕನ ಪಾತ್ರದಲ್ಲಿ ನಟಿಸುತ್ತಿರುವ ರಾಜ್‌ವರ್ಧನ್‌ಗೆ ನಾಯಕಿಯಾಗಿ ಹರಿಪ್ರಿಯಾ ಆಯ್ಕೆಯಾಗಿದ್ದಾರೆ.

ಬಿಚ್ಚುಗತ್ತಿ ಎಂಬ ಶೀರ್ಷಿಕೆ ಹೊಂದಿರುವ ಈ ಚಿತ್ರ ಬಿ ಎಲ್ ವೇಣು ಅವರ ರಾಜಾ ಭರಮಣ್ಣ ನಾಯಕ ಎಂಬ ಕಾದಂಬರಿ ಆಧಾರಿತ ಚಿತ್ರ. ಇದನ್ನು ಚಿತ್ರವಾಗಿಸಬೇಕೆಂದು ಹಲವಾರು ವರ್ಷಘಗಳಿಂದ ಅಂದುಕೊಂಡಿದ್ದ ಹಂಸಲೇಖಾ ಅದಕ್ಕೆ ಸಂಪೂರ್ಣ ತಯಾರಾಗಿದ್ದಾರೆ. ಈ ಚಿತ್ರದಲ್ಲಿ ನಾಯಕಿಯ ಪಾತ್ರಕ್ಕಪೂ ಹೆಚ್ಚಿನ ಮಹತ್ವ ಇರೋದರಿಂದ ಅದಕ್ಕೆ ತಕ್ಕುದಾದ ನಾಯಕಿಯ ಹುಡುಕಾಟ ಚಾಲ್ತಿಯಲ್ಲಿತ್ತು. ಹರಿಪ್ರಿಯಾ ಆಯ್ಕೆಯ ಮೂಲಕ ಅದು ಸಮಾಪ್ತಿಗೊಂಡಿದೆ. ರಾಜ್‌ವರ್ಧನ್ ಈ ಪಾತ್ರಕ್ಕಾಗಿ ತರಬೇತಿ ಪಡೆಯುತ್ತಿದ್ದಾರೆ. ಹರಿಪ್ರಿಯಾ ಅವರಿಗೂ ಅಗತ್ಯ ತರಬೇತಿ ಕೊಟ್ಟಾದ ನಂತರ ಚಿತ್ರೀಕರಣ ಶುರುವಾಗಲಿದೆ.

Continue Reading

ಕಲರ್ ಸ್ಟ್ರೀಟ್

ತಮಿಳು ಚಿತ್ರಕ್ಕೆ ಹೀರೋ ಆದ್ರು ನೀನಾಸಂ ಸತೀಶ್!

Published

on


ಅಯೋಗ್ಯ ಚಿತ್ರದ ಯಶಸ್ಸಿನ ನಂತರ ನೀನಾಸಂ ಸತೀಶ್ ಬೇಡಿಕೆ ಹೆಚ್ಚಿಕೊಂಡಿದ್ದು, ಸಂಭಾವನೆ ಏರಿಕೊಂಡಿದ್ದೆಲ್ಲ ಗೊತ್ತೇ ಇದೆ. ಕನ್ನಡದಲ್ಲಿ ತುಂಬಾ ಅವಕಾಶಗಳು ಸರದಿಯಲ್ಲಿ ನಿಂತಿರುವಾಗಲೇ ಸತೀಶ್ ಏಕಾಏಕಿ ತಮಿಳಿಗೆ ಹಾರಿದ್ದಾರೆ. ಈ ಮೂಲಕ ಅವರು ದಕ್ಷಣ ಭಾರತೀಯ ಚಿತ್ರರಂಗದಲ್ಲಿ ಛಾಪು ಮೂಡಿಸಲು ಮುಂದಾಗಿದ್ದಾರೆ.

ನೀನಾಸಂ ಸತೀಶ ನಟಿಸಲಿರುವ ತಮಿಳು ಚಿತ್ರಕ್ಕೆ ಸಂಪೂರ್ಣ ತಯಾರಿ ಮುಗಿದಿದೆ. ತಮಿಳು ಚಿತ್ರರಂಗದಲ್ಲಿ ಕ್ರಿಯೇಟಿವ್ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಅನೀಶ್ ನಿರ್ದೇಸನ ಮಾಡಲಿದ್ದಾರೆ. ಇದಕ್ಕೆ ಈಗಾಗಲೇ ಪಗೈನಾನುಕು ಅರುಲ್ವೈ ಎಂಬ ಶೀರ್ಷಿಕೆಯನ್ನೂ ನಿಗಧಿ ಮಾಡಲಾಗಿದೆ. ಇಷ್ಟರಲ್ಲಿಯೇ ಸ್ವಿಜರ್‌ಲೆಂಡಿನಲ್ಲಿ ಅದ್ದೂರಿಯಾಗಿಯೇ ಟೈಟಲ್ ಲಾಂಚ್ ಮಾಡಲೂ ನಿರ್ಧರಿಸಲಾಗಿದೆ.

ಹಾಗೆ ನೋಡಿದರೆ ಈಗೊಂದಷ್ಟು ವರ್ಷಘಗಳ ಹಿಂದೆಯೇ ನೀನಾಸಂ ಸತೀಶ್ ತಮಿಳು ಚಿತ್ರದಲ್ಲಿ ನಟಿಸ ಬೇಕಿತ್ತು. ಲೂಸಿಯಾ ಚಿತ್ರ ತೆರೆ ಕಂಡ ತಿಂಗಳೊಪ್ಪತ್ತಿನಲ್ಲಿಯೇ ಅಂಥಾದ್ದೊಂದು ಸೂಚನೆ ಸಿಕ್ಕಿತ್ತು. ಲೂಸಿಯಾ ಚಿತ್ರವನ್ನು ವೀಕ್ಷಿಸಿದ್ದ ಅನೀಶ್ ನೀನಾಸಂ ನಟನೆಯನ್ನು ಮೆಚ್ಚಿಕೊಂಡಿದ್ದರು. ಬಳಿಕ ಸತೀಶ್‌ರನ್ನು ಸಂಪರ್ಕಿಸಿ ಮೆಚ್ಚುಗೆ ಸೂಚಿಸಿದ್ದರು. ಆ ಬಳಿಕ ಇವರ ನಡುವಲ್ಲೊಂದು ಸ್ನೇಹ ಮೂಡಿಕೊಂಡಿತ್ತು.
ಹೀಗೆ ಸತೀಶ್‌ಗೆ ಗೆಳೆಯನಾಗಿದ್ದ ಅನೀಶ್ ಈಗ್ಗೆ ಮೂರು ವರ್ಷಗಳಿಂದಲೂ ಈ ಚಿತ್ರಕ್ಕಾಗಿ ಪ್ರಯತ್ನಿಸುತ್ತಲೇ ಇದ್ದರು. ಕಡೆಗೂ ಅದೀಗ ಸಾಕಾರಗೊಂಡಿದೆ. ಈ ಚಿತ್ರದ ಬಗ್ಗೆ ಅನೀಶ್ ಅವರೇ ಅಧಿಕೃತವಾಗಿ ಘೋಷಣೆಯನ್ನೂ ಮಾಡಿದ್ದಾರೆ. ಟೈಟಲ್ ಲಾಂಚ್ ಆದ ತಕ್ಷಣವೇ ಚಿತ್ರೀಕರಣಕ್ಕೂ ಚಾಲನೆ ಸಿಗಲಿದೆ.

Continue Reading
Advertisement
Chitralahari 400 x 600
DJ ENTERTAINMENTS 300 x 600

Trending

Copyright © 2018 Cinibuzz