One N Only Exclusive Cine Portal

ತರ‍್ಲೆಗಳ ಮೂಲಕ ಮನರಂಜನೆ ನೀಡುವ ಕೀಟ್ಲೆಕೃಷ್ಣ


ಇತ್ತೀಚಿನ ದಿನಗಳಲ್ಲಿ ಮಕ್ಕಳ ಸಾಹಸದ ಕಥೆಯಾಧಾರಿತ ಚಲನಚಿತ್ರಗಳ ನಿರ್ಮಾಣ ಹೆಚ್ಚಾಗುತ್ತಿವೆ. ಅಂಥಾ ಚಿತ್ರಗಳಲ್ಲಿ ಕೀಟ್ಲೆಕೃಷ್ಣ ಕೂಡ ಒಂದು. ರಾಜೀವ ಕೊಠಾರಿ (ಶ್ರೀರಾಜ್) ಅವರ ನಿರ್ಮಾಣದಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ನಾಗರಾಜ್ ಅರೆಹೊಳೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.
ಈಗಿನ ಕಾಲದ ಮಕ್ಕಳ ಮನಸ್ಥಿತಿ, ಅತಿಯಾದ ಮೌನಗಳು ಹೇಗೆ ಅಪಾಯ ತಂದೊಡ್ಡುತ್ತವೆ ಎಂಬುದನ್ನು ಈ ಚಿತ್ರದ ಮೂಲಕ ಹೇಳಲಾಗಿದೆ. ಬಾಲನಟ ಮಾ|| ಹೇಮಂತ್ ಈ ಚಿತ್ರದಲ್ಲಿ ಕೀಟ್ಲೆಕೃಷ್ಣನಾಗಿ ಕಾಣಿಸಿಕೊಂಡಿದ್ದಾರೆ. ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದ್ದು ಚಿತ್ರದ ಒಂದು ಹಾಡಿಗೆ ಸಂಗೀತ ಸಂಯೋಜನೆ ಕೂಡ ಮಾಡಿದ್ದಾರೆ. ಇನ್ನು ಅವರ ಪುತ್ರ ಪವನ್ ಈ ಚಿತ್ರದಲ್ಲಿನ ಹಾಡೊಂದಕ್ಕೆ ದನಿಯಾಗಿದ್ದಾರೆ. ಇದೇ ೨೬ರಂದು ಬಿಡುಗಡೆಯಾಗಲು ಸಿದ್ದವಾಗಿರುವ ಈ ಚಿತ್ರದಲ್ಲಿ ಕಿರುತೆರೆಯ ಯಶೋಧ ಖ್ಯಾತಿಯ ನಟಿ ಸ್ಪಂದನಾ ನಾಯಕ್ ಕೃಷ್ಣನ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ನಾಗರಾಜ ಅರೆಹೊಳೆ ಈ ಹಿಂದೆ ಹಾರೋ ಹಕ್ಕಿ ಚಿತ್ರವನ್ನು ನಿರ್ದೇಶಿಸಿದ್ದರೂ ಇದು ಅವರ ೨ನೇ ಚಿತ್ರ. ನಿರ್ಮಾಪಕ ಶ್ರೀರಾಜ್ ಅವರು ಕಳೆದ ೨೫ ವರ್ಷಗಳಿಂದಲೂ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಈ ಹಿಂದೆ ಹಜ್ ಎಂಬ ಚಿತ್ರವನ್ನು ನಿರ್ಮಿಸಿದ್ದಾಗ ಆ ಚಿತ್ರ ರಾಜ್ಯ ಪ್ರಶಸ್ತಿ ಹಾಗೂ ರಾಷ್ಟ್ರಪ್ರಶಸ್ತಿ ಎರಡನ್ನು ಪಡೆದುಕೊಂಡಿದೆ.
ಚಿತ್ರದ ಪ್ರಮುಖ ಕಥೆಯ ಬಗ್ಗೆ ಮಾತನಾಡಿದ ನಿರ್ದೇಶಕ ನಾಗರಾಜ್ ಅರೆಹೊಳೆ ನಾಯಕನ ಬಾಲ್ಯದಲ್ಲಿ ನಡೆದಂಥ ಒಂದು ಘಟನೆಯೇ. ಇದೇ ಸಿನಿಮಾದ ಜೀವಾಳವಾಗಿದೆ. ನಾಯಕ ಕೊನೆಯಲ್ಲಿ ತೆಗೆದುಕೊಂಡ ನಿರ್ಧಾರ ಹಾಗೂ ಬದಲಾವಣೆಗಳಿಗೆ ಕಾರಣವಾಯಿತು ಎಂದು ಚಿತ್ರದಲ್ಲಿ ಹೇಳಿದ್ದಾರೆ. ರಾಮನಗರದ ಜನಪದ ಲೋಕ, ಕನಕಪುರ, ಮೊದಲಾದ ಕಡೆಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆಸಿದ್ದಾರೆ. ಮನರಂಜನೆಯ ಜೊತೆಗೆ ಸಂದೇಶ ಕೂಡ ಈ ಚಿತ್ರದಲ್ಲಿದ್ದು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಎಂದು ನಾಯಕ ಕೃಷ್ಣ ಹಾಗೂ ಅವನ ತಂದೆಯ ಪಾತ್ರಗಳ ಮೂಲಕ ಹೇಳಿಸುವ ಪ್ರಯತ್ನ ಮಾಡಿದ್ದೇವೆ ಎಂದು ಹೇಳಿದರು. ನಟ ಹರೀಶ್‌ರಾಜ್ ಚಿತ್ರದಲ್ಲಿ ಒಬ್ಬ ಪೊಲೀಸ್ ಇನ್ಸ್‌ಪೆಕ್ಟರ್ ಪಾತ್ರ ನಿರ್ವಹಿಸಿದ್ದಾರೆ. ಮತ್ತೊಬ್ಬ ನಟ ನೀನಾಸಂ ಅಶ್ವಥ್ ನಾಯಕನ ಸಾಕು ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಬಾಲನಟ ಹೇಮಂತ್ ಈ ಹಿಂದೆ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಹಾಗು ಹಲವಾರು ಚಿತ್ರಗಳಲ್ಲಿ ಅಭಿನಯಿಸಿ ಗುರುತಿಸಿಕೊಂಡ ಹುಡುಗ. ಕುಳ್ಳ ಮಧುಸೂದನ ಆಲೂಗೆಡ್ಡೆ ಪರಮೇಶಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ನಿರ್ಮಾಪಕ ಶ್ರೀರಾಜ ಈ ಹಿಂದೆ ಹಜ್ ಎಂಬ ಚಿತ್ರವನ್ನು ನಿರ್ಮಿಸಿದ್ದರು. ರಾಜ್ಯಪ್ರಶಸ್ತಿ ಹಾಗೂ ರಾಷ್ಟ್ರಪ್ರಶಸ್ತಿಗಳನ್ನು ಗಳಿಸಿರುವ ಈ ಚಿತ್ರ ಕಳೆದ ವರ್ಷದ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕೂಡ ಪ್ರದರ್ಶನಗೊಂಡಿತ್ತು. ಅದಾದ ನಂತರ ಒಂದು ತುಳು ಚಿತ್ರವನ್ನು ಕೂಡ ನಿರ್ಮಿಸಿದ್ದರು. ನಟ ಕಾಶೀನಾಥ ಹಾಗೂ ಉಪೇಂದ್ರ ಅವರ ಜೊತೆ ಕೆಲಸ ಮಾಡಿದ ಅನುಭವ ಕೂಡ ಇವರಿಗಿದೆ.

Leave a Reply

Your email address will not be published. Required fields are marked *


CAPTCHA Image
Reload Image