One N Only Exclusive Cine Portal

ತಾಯಿ ಕನ್ನಡ ಆಲ್ಬಂ ಬಿಡುಗಡೆ ಮಾಡಿದ್ದಾರೆ ಶ್ರೀಮುರಳಿ!

ಕನ್ನಡ ರಾಜ್ಯೋತ್ಸವ ಎಂಬುದು ಕನ್ನಡತನವನ್ನು ಗಟ್ಟಿಗೊಳಿಸಿಕೊಳ್ಳುವ, ಕನ್ನಡಾಭಿಮಾನವನ್ನು ಮತ್ತಷ್ಟು ಜಾಗೃತಗೊಳಿಸಿಕೊಳ್ಳುವ ಹಬ್ಬ. ಈ ನೆಪದಲ್ಲಿ ಥರ ಥರದ ಕನ್ನಡಾಭಿಮಾನ ಹೊರ ಹೊಮ್ಮುತ್ತೆ. ಸಮಾಜ ಸೇವಕಿ ಸುನಿತಾ ಮಂಜುನಾಥ್ ಅಚ್ಚಳಿಯದ ಪ್ರಯತ್ನವೊಂದರ ಮೂಲಕ ತಮ್ಮೊಳಗಿನ ಕನ್ನಡಾಭಿಮಾನವನ್ನು ಜಾಹೀರುಗೊಳಿಸಿದ್ದಾರೆ.
ಸುನಿತಾ ಮಂಜುನಾಥ್ ಈಗಾಗಲೇ ವಿವಿಧ ರಂಗಗಳಲ್ಲಿ ಸಾಧನೆಯ ಹೆಗ್ಗುರುತು ಮೂಡಿಸಿರೋ ಮಹಿಳೆಯರನ್ನು ಸೇರಿಸಿಕೊಂಡು ತಾಯಿ ಭುವನೇಶ್ವರಿಯ ಬಗೆಗೊಂದು ತಾಯಿ ಕನ್ನಡ ಎಂಬ ವೀಡಿಯೋ ಆಲ್ಬಂ ತಯಾರಿಸಿದ್ದಾರೆ. ಖ್ಯಾತ ರ‍್ಯಾಪರ್ ಅಲೋಕ್ ಸಾರಥ್ಯದಲ್ಲಿ ಮೂಡಿ ಬಂದಿರೋ ಈ ವೀಡಿಯೋ ಆಲ್ಬಂ ಅನ್ನು ನಾಳೆ ಮಧ್ಯಾಹ್ನ ರೋರಿಂಗ್ ಸ್ಟಾರ್ ಶ್ರೀ ಮುರಳಿ ಲೋಕಾರ್ಪಣೆ ಮಾಡಿದ್ದಾರೆ.
ಈ ವೀಡಿಯೋ ಆಲ್ಬಂ ತಾಯಿ ಭುವನೇಶ್ವರಿಯ ನೆರಳಲ್ಲಿ ಮಹಿಳಾ ಶಕ್ತಿಯ ಅನಾವರಣದಂತೆ ರೂಪುಗೊಂಡಿದೆಯಂತೆ. ಇದರಲ್ಲಿ ಐಪಿಎಸ್ ಅಧಿಕಾರಿ ರೂಪ, ಐಟಿ ರಂಗದ ದಿಗ್ಗಜೆ, ಸಾಹಿತಿ ಸುಧಾ ಮೂರ್ತಿ, ನಟಿಯರಾದ ಮಯೂರಿ, ಸಂಯುಕ್ತಾ ಹೊರನಾಡ್, ಸುಧಾ ಬೆಳವಾಡಿ ಮತ್ತು ಆಯುಷಿ ಕಾಣಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *


CAPTCHA Image
Reload Image