One N Only Exclusive Cine Portal

ತೆರೆಮೇಲೆ ಹ್ಯಾಪಿ ನ್ಯೂ ಇಯರ್!

ಖ್ಯಾತ ನಿರ್ದೇಶಕ ನಾಗಾಭರಣರ ಪುತ್ರ ಪನ್ನಗಾ ಭರಣ ಪೂರ್ಣಪ್ರಮಾಣದಲ್ಲಿ ನಿರ್ದೇಶಕರಾಗಿ ಹೊರ ಹೊಮ್ಮಿರುವ ಚಿತ್ರ ‘ಹ್ಯಾಪಿ ನ್ಯೂ ಇಯರ್. ಬದುಕಿನ ಪಲ್ಲಟಗಳ ಸೂಕ್ಷ್ಮ ಎಳೆಯೊಂದಿಗೆ ರೂಪಿಸಿರೋ ಈ ಚಿತ್ರ ಈ ವಾರ ರಾಜ್ಯಾಧ್ಯಂತ ತೆರೆ ಕಾಣಲಿದೆ.
ನಾವು ನಿಂತರೂ ಚಲಿಸುತ್ತಲೇ ಇರುವ ಮಾಯೆ ಬದುಕು. ಈ ಯಾನದ ಕ್ಷಣ ಕ್ಷಣವೂ ಒಂದಿಡೀ ಜೀವನದ ದಿಕ್ಕು ದೆಸೆಗಳನ್ನು ನಿರ್ಧರಿಸುತ್ತವೆ. ಅದುವೇ ನಾನಾ ಘಟನಾವಳಿಗಳಿಗೂ ಕಾರಣವಾಗುತ್ತದೆ. ಇಂಥಾದ್ದೊಂದು ನವಿರಾದ ಕಥೆಯನ್ನು ದೃಷ್ಯದ ಮೂಲಕ ಕಟ್ಟಿ ಕೊಡುವ ಪ್ರಯತ್ನ ಹ್ಯಾಪಿ ನ್ಯೂ ಇಯರ್.
ಈ ಎಳೆ ಕೇಳಿದಾಕ್ಷಣ ಇದೊಂದು ಘನ ಗಂಭೀರ ನಿರೂಪಣೆಯ ಚಿತ್ರ ಅಂದುಕೊಳ್ಳುವಂತಿಲ್ಲ. ಇದನ್ನು ನಗೆಯುಕ್ಕಿಸುವ ಹಾಸ್ಯ ಸನ್ನಿವೇಶಗಳ ಮೂಲಕವೇ ಕಟ್ಟಿಕೊಡುವ ಪ್ರಯತ್ನವನ್ನು ನಿರ್ದೇಶಕ ಪನ್ನಗಾ ಭರಣ ಮಾಡಿದ್ದಾರೆ. ಸೌಮ್ಯ ಫಿಲಂಸ್ ಲಾಂಛನದಡಿಯಲ್ಲಿ ವನಜಾ ಪಾಟೀಲ್ ನಿರ್ಮಾಣ ಮಾಡಿರುವ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ವಿಜಯ ರಾಘವೇಂದ್ರ, ದಿಗಂತ್, ಧನಂಜಯ್, ಬಿ.ಸಿ. ಪಾಟೀಲ್, ಸಾಯಿಕುಮಾರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ನಟ, ರಾಜಕಾರಣಿ ಬಿ.ಸಿ ಪಾಟೀಲ್ ಪುತ್ರಿ ಸೃಷ್ಟಿ ಪಾಟೀಲ್ ಈ ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ.
ಇನ್ನುಳಿದಂತೆ ಶ್ರುತಿ ಹರಿಹರನ್, ಸುಧಾರಾಣಿ, ಸೋನು ಗೌಡ, ರಾಕ್ ಲೈನ್ ವೆಂಕಟೇಶ್, ಚಂದ್ರು, ತಬಲಾ ನಾಣಿ ಮುಂತಾದವರ ಅದ್ದೂರಿ ತಾರಾಗಣವೂ ಈ ಚಿತ್ರಕ್ಕಿದೆ. ಚಿಕ್ಕಂದಿನಿಂದಲೂ ತಂದೆ ನಾಗಾಭರಣರ ಸಿನಿಮಾ ಸಾಂಗತ್ಯದಲ್ಲಿಯೇ ಬೆಳೆದು ಬಂದವರು ಪನ್ನಗಾ ಭರಣ. ಈವರೆಗೆ ಒಂದಷ್ಟು ಚಿತ್ರಗಳಲ್ಲಿ ಅವರು ತಂದೆಯವರಿಂದ ಸಿನಿಮಾ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದಾರೆ. ಇದೀಗ ಅವರು ಹ್ಯಾಪಿ ನ್ಯೂ ಇಯರ್ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.
ಶ್ರೀಶ ಕೂದುವಳ್ಳಿ ಛಾಯಾಗ್ರಹಣ, ರಘು ದೀಕ್ಷಿತ್ ಅವರ ಸಂಗೀತ ಇರುವ ಈ ಚಿತ್ರದ ಚಿತ್ರ ಕಥೆಯಲ್ಲಿ ಪನ್ನಗ ಭರಣ ಅವರಿಗೆ ಆದಿ ಶಂಕರ್, ಅವಿನಾಶ್ ಬಲೆಕ್ಕಳ ಸಹಾಯ ಮಾಡಿದ್ದಾರೆ. ಸಂಭಾಷಣೆಯನ್ನು ಸಿಂಪಲ್ ಸುನಿ, ಪ್ರತಿಭಾ ನಂದಕುಮಾರ್, ಸತ್ಯಪ್ರಕಾಶ್, ಆದಿ ಶಂಕರ್ ಹಾಗೂ ಅವಿನಾಷ್ ಬಲೆಕ್ಕಳ ಬರೆದಿದ್ದಾರೆ. ಸಚಿನ್ ಹೆಗ್ಗಾರ್ ವಸ್ತ್ರ ವಿನ್ಯಾಸ, ಮದನ್ ಹರಿಣಿ ಅವರ ನೃತ್ಯ ಸಂಯೋಜನೆ, ಥ್ರಿಲ್ಲರ್ ಮಂಜು ಸಾಹಸ, ದಿನೇಶ್ ಅವರ ಮೇಕಪ್, ಇಸ್ಮಾಯಿಲ್ ಅವರ ಕಲೆ, ನರಸಿಂಹ ಜಾಲಹಳ್ಳಿ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ.

 

Leave a Reply

Your email address will not be published. Required fields are marked *


CAPTCHA Image
Reload Image